ಮನೋರಂಜನೆ

”ಪುಟ್ಟಗೌರಿ ಮದುವೆ”ಸಡನ್ ಸ್ಟಾಪ್ ,ಅದಕ್ಕೆ ಕಾರಣ ಇವರಂತೆ

ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೊದಲ ಸ್ಥಾನ ಪಡೆದಿತ್ತು,ವರ್ಷ ಕಾಲದಿಂದ ಏನ್ ಏನೋ ಕಥೆಯನ್ನು ಟ್ವಿಸ್ಟ್ ಗಳನ್ನೂ ಈ ಧಾರಾವಾಹಿಯಲ್ಲಿ ಸೇರಿಸುತ್ತಾ ಜನರಿಂದ ಸಿಕ್ಕಾಪಟ್ಟೆ ಟ್ರೊಲ್ ಮಾಡಿಸಿಕೊಂಡ ಒಂದು ಧಾರಾವಾಹಿ ಇದು .ಒಂದು ಸಲ ವೀಕ್ಷಕನೊಬ್ಬನು ಕಲರ್ಸ್ ಕನ್ನಡ ಚಾನೆಲ್ ಗೆ ಪತ್ರ ಬರೆದು. ಧಾರಾವಾಹಿಗಳಲ್ಲಿ ನಡೆಯುತ್ತಿರುವ ವಿಚಿತ್ರಗಳ ಕುರಿತು ಪತ್ರದಲ್ಲಿ ಪುಟ್ಟಗೌರಿ ಧಾರಾವಾಹಿಯ ನಿರ್ದೇಶಕನನ್ನು ಪರೋಕ್ಷವಾಗಿ ಕಾಲೆಳೆದಿದ್ದದು ಉಂಟು.

 

ಕಿರುತೆರೆಯಲ್ಲಿನ ನಟರು, ನೋಡುಗರಿಗೆ ಬಹಳ ಬೇಗ ಹತ್ತಿರವಾಗಿ ಬಿಡ್ತಾರೆ. ತೆರೆಯ ಮೇಲಿನ ಕಲಾವಿದರನ್ನು, ಕಥೆಯನ್ನು ನಮ್ಮದೇ , ನಮ್ಮವರೇ ಎಂದು ಭಾವಿಸಿಕೊಳ್ತಾರೆ ,​ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ ಫೇಮಸ್​ ಸೀರಿಯಲ್​ ” ಪುಟ್ಟಗೌರಿ ಮದುವೆ” ಇನ್ನು ಮುಂದೆ​ ಬರಲ್ವಂತೆ ಈ ಸೀರಿಯಲ್ ನೋಡಲು ವೀಕ್ಷಕರ ವರ್ಗವೇ ಇದೆ.ಯಾಕ್ ಬರಲ್ಲ ?ಹೈ ಟಿಆರ್​ಪಿ ಧಾರವಾಹಿ ಯಾಕೆ ನಿಲಿಸಿದ್ರು ಅನ್ಕೊಂಡ್ರಾ ?ಆದ್ರೆ ನಿಜ ಈ ಸೀರಿಯಲ್​ನ್ನು ನಿಲ್ಸಿ ಬಿಡ್ತಾರೆ. ಈ ಸೀರಿಯಲ್ ಸ್ಟಾಪ್ ಮಾಡಿದ್ದಾರೆ ಟ್ವಿಸ್ಟ್​ಗಳ ಮಧ್ಯೆಯೇ ಸ್ಟಾಪ್​ ಆಗಿರಲಿಲ್ಲ ಈ ಸೀರಿಯಲ್ ಅಂದಹಾಗೇ ಈ ಸುದ್ದಿ ಕೇಳಿ ಸೀರಿಯಲ್​ ಅಭಿಮಾನಿಗಳು ಕೊಂಚ ಬೇಸರಿಸಿಕೊಂಡಿದ್ದಾರೆ. ಯಶಸ್ವಿ ಧಾರವಾಹಿಯಾಗಿ ಹೆಸರು ಪಡೆದಿರುವ ಇದು ದಿಢೀರ್​ ಅಂತಾ ಸ್ಟಾಪ್​ ಆಗಿದೆ

 

 

 

ಸುಮಾರು ಮೂರು ವರ್ಷಗಳಿಂದಲೂ ಪ್ರಸಾರವಾಗ್ತಿರುವ ಈ ಧಾರವಾಹಿಗೂ ಟ್ರೋಲ್​ಗಳ ಸುರಿಮಳೆಯೇ ಸುರಿದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸೀರಿಯಲ್​ ಬಗ್ಗೆ ಟ್ರೋಲ್​ ಮಾಡಿ ಯಾವಾಗ ನಿಲ್ಸಿತ್ತೀರಾ ಅಂತಾ ಹಾಸ್ಯ ಕೂಡ ಮಾಡಿದ್ರು ,ಪುಟ್ಟಗೌರಿ ಸ್ಟಾಪ್​ ಆಗಿ ಇನ್ನುಮುಂದೆ ಆ ಜಾಗಕ್ಕೆ ಮಂಗಳಗೌರಿ ಬರುತ್ತಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ .ಯಾವುದು ಅದು ಹೊಸ ಸೀರಿಯಲ್ ಅನ್ಕೊಂಡ್ರಾ ? ಇದು ಹೊಸ ಸೀರಿಯಲ್ ಅಲ್ಲ ಗೌರಿಯನ್ನು ಬದಲಾವಣೆ ಮಾಡಿ ಆ ಕ್ಯಾರಕ್ಟರ್​ಗೆ, ಮತ್ತು ಸೀರಿಯಲ್​ ನೇಮ್​ ಅನ್ನು ಮಂಗಳಗೌರಿ ಅಂತಾ ಮಾಡಲಾಗ್ತಿದ್ಯಾ ಎಂಬುದು ಸದ್ಯದ ಸುದ್ದಿ .ಈ ಎಲ್ಲ ಚೇಂಜ್ ಗೆ ಮೂಲ ಕಾರಣ ಯಾರ್ ಅಂತೆ ಗೊತ್ತಾ?ನಮ್ಮ ಪುಟ್ಟ ಗೌರಿ ಅಲಿಯಾಸ್ ರಂಜನಿ ಬಿಗ್​ಬಾಸ್​ ಸೀಸನ್​ -6 ಗೆ ಸ್ಪರ್ಧಿಯಾಗಿ ಹೋಗ್ತಾ ಇರುವ ಸುದ್ದಿ ಇದೆ. ಆಗೋಂದು ವೇಳೆ ಆಕೆ ಕಂಟೆಸ್ಟಂಟ್​ ಆಗಿ ಬಿಗ್​ಬಾಸ್​ ಹೌಸ್​ಗೆ ಹೋಗುವ ಅವಕಾಶ ಇದ್ರೆ ಪುಟ್ಟಗೌರಿಯನ್ನು ಮಂಗಳಗೌರಿಯಾಗಿ ಮಾಡ್ತಾರೆ ಎಂಬ ಸುದ್ದಿ ಚರ್ಚೆ ಹರಿದಾಡುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top