fbpx
ದೇವರು

ಪಿತೃ ಪಕ್ಷಕ್ಕೂ ಕರ್ಣನಿಗೂ ಇರುವ ನಂಟೇನು,ಸತ್ತ ನಂತರ ಕರ್ಣ ಭೂಮಿಗೆ ಬಂದಿದ್ದನಂತೆ, ಇಲ್ಲಿದೆ ನೋಡಿ ಆ ಕುರಿತ ರೋಚಕ ಕಥೆ

ಪಿತೃ ಪಕ್ಷಕ್ಕೂ ಕರ್ಣನಿಗೂ ಇದೇ ನಂಟು.ಕರ್ಣ ಸತ್ತ ನಂತರವೂ ಭೂಮಿಗೆ ಬಂದಿದ್ದ ಆ 14 ದಿನಗಳೇ ಬಾದ್ರಪದ ಮಾಸದ ಕೃಷ್ಣ ಪಕ್ಷದ ಪಿತೃಪಕ್ಷ.
ಕರ್ಣ ಎಂದ ಕೂಡಲೇ ನಮ್ಮ ಕಣ್ಣೆದುರಿಗೆ ಬರುವುದು ಅವನ ದಾನ, ವೀರ ಮತ್ತು ಶೂರತ್ವ. ಇವನು ಮಹಾಭಾರತದ ಪ್ರಮುಖ ನಾಯಕ ಎನ್ನುವುದು ಎಷ್ಟು ಸತ್ಯವೋ ಮಹಾಭಾರತದ ದುರಂತ ನಾಯಕ ಎನ್ನುವುದು ಕೂಡ ಅಷ್ಟೇ ಸತ್ಯ. ಇಂತಹ ಕರ್ಣನಿಗೂ ಪಿತೃ ಪಕ್ಷಕ್ಕೂ ಅಪಾರವಾದ ನಂಟಿದೆ. ಮಹಾಭಾರತದ ದುರಂತ ನಾಯಕ ಕರ್ಣ. ದಾನ, ವೀರ, ಶೂರನಾಗಿದ್ದ ಕರ್ಣ. ಈ ಕರ್ಣನಿಗೂ ಪಿತೃಪಕ್ಷಕ್ಕೂ ಇದೆ ನಂಟು.
ಇವನು ಕರ್ಣ. ಸೂರ್ಯನ ಪುತ್ರ ಮಹಾನ ವೀರ, ಶೂರ, ಅಪಾರ ತೇಜಸ್ಸು ಹೊಂದಿದ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ ಈ ಕರ್ಣ. ಸೂರ್ಯ ಮಂತ್ರದಿಂದ ಮದುವೆಗೆ ಮುನ್ನ ಕುಂತಿಗೆ ಜನಿಸಿದವನೇ ಕರ್ಣ. ಅಪೂರ್ವ ತೇಜೋಶಾಲಿಯಾಗಿದ್ದ ಕರ್ಣ ಸಕಲ ವಿದ್ಯಾ ಪಾರಂಗತ. ಧನುರ್ವಿದ್ಯೆಯಲ್ಲಿ ಅಪ್ರತಿಮ ನಾಗಿದ್ದ ಕರ್ಣ. ಮಹಾನ ಶೂರ. ಅಪೂರ್ವ ತೇಜೋಶಾಲಿಯಾದ ಆ ಮಗುವನ್ನು ಅಧಿರಥ ಮತ್ತು ಆತನ ಪತ್ನಿ ರಾಧೆಯಾ ಸಾಕುತ್ತಾರೆ. ಬಾಲ್ಯ ಕಳೆದು ಯೌವನಕ್ಕೆ ಕಾಲಿಡುತ್ತಿದ್ದಂತೆ ಕರ್ಣನಿಗೆ ಶಸ್ತ್ರಾಭ್ಯಾಸದಲ್ಲಿ ಆಸಕ್ತಿ ಮೂಡುತ್ತದೆ. ಪರಶುರಾಮರಿಂದ ವಿದ್ಯೆ ಕಲಿತು ಧನುರ್ವಿದ್ಯಾ ಪಾರಂಗತನಾಗುತ್ತಾನೆ.

ಆದರೆ ಬ್ರಾಹ್ಮಣನೆಂದು ಸುಳ್ಳು ಹೇಳಿ ವಿದ್ಯೆ ಕಲಿತ ಕರ್ಣನಿಗೆ ಪರಶುರಾಮರಿಂದ ಶಾಪ ಉಂಟಾಗುತ್ತದೆ. ಪರಶುರಾಮರಿಂದ ಶಾಪವನ್ನು ಪಡೆದ ಕರ್ಣ ವಿಚಲಿತನಾಗುತ್ತಾನೆ. ಈ ವೇಳೆ ಹಸ್ತಿನಾವತಿಯಲ್ಲಿ ಪಾಂಡವರಿಗೂ ಮತ್ತು ಕೌರವರಿಗೂ ದ್ರೋಣಾಚಾರ್ಯರು ಧನುರ್ವಿದ್ಯೆಯನ್ನು ಕಲಿಸುತ್ತಿರುತ್ತಾರೆ. ಪಾಂಡವರು ಮತ್ತು ಕೌರವರ ಶಸ್ತ್ರ ಕೌಶಲ್ಯವನ್ನು ಗಮನಿಸಿದ ಆಚಾರ್ಯರು ಸೇರಿದಂತೆ ಅನೇಕರು ಅರ್ಜುನನನ್ನು ಹೊಗಳುತ್ತಾರೆ.ಈ ಮಾತುಗಳನ್ನು ಆಲಿಸಿದ ಕರ್ಣ ತಾನು ಅರ್ಜುನನನ್ನು ಎದುರಿಸುವ ಸವಾಲು ಹಾಕುತ್ತಾನೆ. ಆಗ ಅಲ್ಲಿಯೇ ಇದ್ದ ಕೃಪಾಚಾರ್ಯರು ಸೂತಪುತ್ರನಾದ ಕರ್ಣನನ್ನು ಅರ್ಜುನನಿಗೆ ಸರಿಸಮಾನಾಗಿ ಭಾವಿಸುವುದಕ್ಕೆ ಸಾಧ್ಯವಿಲ್ಲವೆಂದು ವಿರೋಧಿಸುತ್ತಾರೆ. ಈ ಮಾತುಗಳನ್ನು ಕೇಳಿ ಆಗಷ್ಟೇ ಅರ್ಜುನನಿಂದ ಸೋಲನ್ನು ಕಂಡಿದ್ದ ದುರ್ಯೋಧನ ಕರ್ಣನಿಗೆ ಬೆಂಬಲ ನೀಡುತ್ತಾನೆ. ಆಗ ದುರ್ಯೋಧನ ಕರ್ಣನಿಗೆ ಅಂಗದೇಶವನ್ನು ನೀಡಿ ರಾಜ್ಯಾಭಿಷೇಕವನ್ನು ಮಾಡುತ್ತಾನೆ. ಆನಂತರ ಕರ್ಣ ದುರ್ಯೋಧನರು ಪ್ರಾಣ ಸ್ನೇಹಿತರಾಗುತ್ತಾರೆ

 

 

 

ಪಿತೃಪಕ್ಷ ಆಚರಣೆಯ ಹಿಂದಿದೆ ಕರ್ಣನ ಕಥೆ.
ಸತ್ತ ನಂತರವೂ ಭೂಲೋಕಕ್ಕೆ ಬಂದಿದ್ದನಂತೆ ಕರ್ಣ. ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಕರ್ಣ ಭೂಲೋಕಕ್ಕೆ ಬಂದಿದ್ದನಂತೆ. ಅಂಗದೇಶದ ಅಧಿಪತಿಯಾಗಿದ್ದ ಕರ್ಣನ ಪರಾಕ್ರಮ ಅದೆಷ್ಟು ಜನಜನಿತವಾಗಿತ್ತೋ ಅವನ ದಾನ ಗುಣವು ಕೂಡ ಅಷ್ಟೇ ಪ್ರಸಿದ್ಧವಾಗಿತ್ತು. ಕರ್ಣ ತನ್ನ ಉದಾರ ದಾನದ ಗುಣಗಳಿಂದಾಗಿ ಕೊಡುಗೈ ದಾನಿ ಎಂದು ಹೆಸರು ಪಡೆದಿದ್ದ. ಒಮ್ಮೆ ಗುರು ದಕ್ಷಿಣೆಯಾಗಿ ಏನನ್ನು ಕೊಡುವುದಕ್ಕೆ ಉಳಿದಿಲ್ಲ ಎನ್ನುವ ಸ್ಥಿತಿಯಲ್ಲಿ ತನ್ನ ಪ್ರಾಣ ರಕ್ಷಕವಾಗಿದ್ದ ಕವಚವನ್ನು ರಕ್ಷೆಯಾಗಿ ಕೊಡುವುದಕ್ಕೆ ಮುಂದಾಗಿದ್ದ ಕರ್ಣ . ಆ ಮೂಲಕ ತನ್ನ ಸಾವಿಗೂ ಹಿಂಜರಿಯದೆ ತನ್ನ ದಾನದ ಗುಣವನ್ನು ಮೆರೆದಿದ್ದ. ತನ್ನ ದಾನ- ಧರ್ಮದ ವಿಶೇಷ ಗುಣಗಳಿಂದಲೇ ದಾನ, ವೀರ, ಶೂರ ಕರ್ಣನೆಂದೇ ಖ್ಯಾತಿಯನ್ನು ಕರ್ಣ ಪಡೆದುಕೊಂಡಿದ್ದ.

ಕೌರವರ ಪರವಾಗಿದ್ದ ಕರ್ಣನಿಗೆ ದುರ್ಯೋಧನನ ಬಗ್ಗೆ ಅಪಾರವಾದ ಸ್ವಾಮಿನಿಷ್ಠೆ ಇತ್ತು. ಪ್ರಾಣ ಸ್ನೇಹಿತನಿಗಾಗಿ ಕರ್ಣ ಜೀವವನ್ನೇ ಮುಡಿಪಾಗಿಟ್ಟಿದ್ದ. ಮಹಾಭಾರತದ ಯುದ್ಧದ ವೇಳೆ ಪಾಂಡವರಿಗೆ ವಿರುದ್ಧವಾಗಿ ಯುದ್ಧ ಮಾಡಿದ. ತೊಟ್ಟ ಬಾಣವನ್ನು ಮತ್ತೆ ತೊಡುವುದಿಲ್ಲ ಎಂಬ ವಾಗ್ದಾನವನ್ನು ಮಾಡಿದ್ದ ಕರ್ಣ ಮಾತಿಗೆ ಬದ್ಧನಾಗಿ ನಡೆದಿದ್ದ. ಕುರುಕ್ಷೇತ್ರ ಯುದ್ಧದಲ್ಲಿ ದುರಂತ ಸಾವಿಗೀಡಾದ. ಹುಟ್ಟಿದಾಗಿನಿಂದ ಅವಮಾನಗಳ ನಡುವೆಯೇ ಬದುಕಿದ್ದ ಕರ್ಣ ಮಹಾಭಾರತದ ದುರಂತ ನಾಯಕ. ಇಂತಹ ಕರ್ಣನಿಗೂ ಪಿತೃಪಕ್ಷಕ್ಕೂ ಅಪಾರವಾದ ನಂಟು ಇದೆ.

ಹೌದು ಕೊಡುಗೈ ದಾನಿ ಎಂದೇ ಖ್ಯಾತಿ ಪಡೆದಿದ್ದ ಕರ್ಣ ಸತ್ತ ನಂತರವೂ ಭೂಲೋಕಕ್ಕೆ ಬಂದಿದ್ದನಂತೆ. ಯಮ ಪುರಿಯಿಂದ ಭೂಲೋಕಕ್ಕೆ ಬಂದಿದ್ದ ಕರ್ಣ 14 ದಿನಗಳ ಕಾಲ ವಾಸ್ತವ್ಯ ಇಲ್ಲಿಯೇ ಹೂಡಿದ್ದನಂತೆ.ಆ 14 ದಿನಗಳೇ ಮಹಾಲಯ ಪಕ್ಷದ ಬಾದ್ರಪದ ಮಾಸದ 14 ದಿನಗಳು ಎಂದು ಹೇಳಲಾಗುತ್ತದೆ. ಪೌರಾಣಿಕ ಹಿನ್ನೆಲೆಗಳ ಪ್ರಕಾರ ಕುರುಕ್ಷೇತ್ರ ಯುದ್ಧದಲ್ಲಿ ಹತನಾದ ಕರ್ಣನನ್ನು ದೇವದೂತರು ಸ್ವರ್ಗ ಲೋಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಕರ್ಣನಿಗೆ ಅಪಾರವಾದ ಹಸಿವಾಗುತ್ತದೆ. ಆ ಸಂದರ್ಭದಲ್ಲಿ ಹಸಿವನ್ನು ನೀಗಿಸಿಕೊಳ್ಳುವುದಕ್ಕೆ ಅನ್ನವನ್ನು ಕೇಳುತ್ತಾನೆ. ಆಗ ಅವನಿಗೆ ಸಿಗುವುದು ಧನ ಕನಕ. ಹೌದು ಕರ್ಣನ ಮುಂದೆ ಅಪಾರವಾದ ಚಿನ್ನ ಮತ್ತು ಆಭರಣಗಳ ರಾಶಿ ಬೀಳುತ್ತದೆ. ಇದು ಯಾಕೆ ಹೀಗೆ ಎಂದು ಕರ್ಣ ಚಿಂತಾಕ್ರಾಂತನಾಗುತ್ತಾನೆ. ಆಗ ಮನನೊಂದ ಕರ್ಣ ಮೃತ್ಯು ದೇವ ಯಮನನ್ನು ಪ್ರಾರ್ಥಿಸುತ್ತಾನೆ. ಆಗ ಕರ್ಣನ ಪ್ರಾರ್ಥನೆಗೆ ಯಮ ಪ್ರತ್ಯಕ್ಷನಾಗಿ ನೀನು ಭೂಲೋಕದಲ್ಲಿ ಐಶ್ವರ್ಯದ ಸಂಕೇತಗಳನ್ನು ದಾನ ಮಾಡಿದ್ದೀಯೇ ಹೊರತು ಅನ್ನದಾನ ಮಾಡಲಿಲ್ಲ. ಅದರ ಫಲ ನಿನಗೆ ಊಟದ ಬದಲು ಧನಕನಕ ಸಿಕ್ಕಿದೆ ಎಂದು ಹೇಳುತ್ತಾನೆ.

 

 

 

ಆಗ ಕರ್ಣ ಕೂಡಲೇ ಯಮನಿಂದ ಅನುಮತಿಯನ್ನು ಪಡೆದು ಭೂಲೋಕಕ್ಕೆ ಬಂದು 14 ದಿನಗಳ ಕಾಲ ಭೂಲೋಕದಲ್ಲಿ ಇದ್ದು, ಹಿರಿಯರಿಗೆ ,ಬಡವರಿಗೆ ಯತೇಚ್ಛವಾಗಿ ಅನ್ನ-ನೀರು ಭೋಜನ, ವಸ್ತ್ರ ದಾನ ಮಾಡಿದ. ಅಪಾರವಾದ ಪುಣ್ಯ ಸಂಪಾದನೆ ಮಾಡಿ ಮತ್ತೆ ಸ್ವರ್ಗ ಲೋಕಕ್ಕೆ ಮರಳಿದನಂತೆ ಕರ್ಣ. ಪರಲೋಕದಿಂದ ಭೂಲೋಕಕ್ಕೆ ಬಂದಿದ್ದ ಆ 14 ದಿನಗಳೆ ಪಿತೃಪಕ್ಷದ ಮಹತ್ವವಾದ ದಿನಗಳು. ಭೂಲೋಕದಲ್ಲಿ ನಾವು ಯಾವ ರೀತಿಯ ಪುಣ್ಯಕಾರ್ಯವನ್ನು ಮಾಡುತ್ತೇವೋ ಅದರ ಫಲವನ್ನು ಪರಲೋಕದಲ್ಲಿ ಪಡೆಯುತ್ತೇವೆ ಎನ್ನುವುದಕ್ಕೆ ಕಾರಣ, ಕರ್ಣನ ಬಗ್ಗೆ ಇರುವ ಈ ಪೌರಾಣಿಕ ಘಟನೆಯೇ ಸಾಕ್ಷಿಯಾಗಿದೆ.

ಗತಿಸಿದ ಹಿರಿಯರಿಗೆ ಮಾಡುವ ಕಾರ್ಯವೇ ಪಿತೃಕಾರ್ಯ. ಪಿತೃಪಕ್ಷದ ಮಹತ್ವವೇನು ?ಪಿತೃಪಕ್ಷದಲ್ಲಿ ಮಾಡಲೇಬೇಕಾದ ಕಾರ್ಯವೇನು ?
ಭಾದ್ರಪದ ಮಾಸದ, ಕೃಷ್ಣ ಪಕ್ಷವನ್ನು, ಪಿತೃಪಕ್ಷ ಅಥವಾ ಮಹಾಲಯ ಪಕ್ಷ ಎಂದು ಕರೆಯಲಾಗುತ್ತದೆ.ಪಿತೃ ಪಕ್ಷದ ಈ ಹದಿನೈದು ದಿನಗಳ ಕಾಲ ನಮ್ಮನ್ನು ಅಗಲಿದ ಹಿರಿಯರಿಗೆ ಶ್ರಾದ್ಧ ಕಾರ್ಯ ಮತ್ತು ತರ್ಪಣವನ್ನು ಕೊಡಲಾಗುತ್ತದೆ. ಪಿತೃಪಕ್ಷದ ಕೊನೆಯ ದಿನವಾದ ಅಮಾವಾಸ್ಯೆಗೆ “ಮಹಾಲಯ ಅಮಾವಾಸ್ಯೆ” ಎಂದು ಹೇಳಲಾಗುತ್ತದೆ. ಇದಕ್ಕೆ “ಸರ್ವಪಿತೃ ಅಮಾವಾಸ್ಯೆ” ಎಂದೂ ಕೂಡ ಹೆಸರಿದೆ. ಪಿತೃಗಳಿಗೆ ಶ್ರಾದ್ಧ ಕಾರ್ಯ ಮಾಡುವುದರಿಂದ ಹಿರಿಯರಿಗೆ ಸಂಪೂರ್ಣ ಚೈತನ್ಯ ಸಿಗುತ್ತದೆ. ಇದರಿಂದ ಸಂತೃಪ್ತರಾಗುವ ಪಿತೃಗಳು ಸಂಪೂರ್ಣವಾಗಿ ಇಡೀ ಕುಟುಂಬಕ್ಕೆ ಆಶೀರ್ವಾದ ಮಾಡುತ್ತಾರೆ. ಈ ಬಗ್ಗೆ ಧರ್ಮ ಶಾಸ್ತ್ರದಲ್ಲಿ ಪುರಾಣಗಳಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ.

ಪಿತೃ ಪಕ್ಷದಲ್ಲಿ ಅನ್ನ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪಿತೃಪಕ್ಷದಲ್ಲಿ ಪಿಂಡ ಪ್ರಧಾನ, ತರ್ಪಣಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ… ಅಷ್ಟೇ ಪ್ರಾಮುಖ್ಯತೆ ಅನ್ನದಾನಕ್ಕೆ ಇದೆ. ಇದರ ಬಗ್ಗೆ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಸಿವೆಯಿಂದ ಬಳಲುವವರಿಗೆ ಊಟ, ತಿಂಡಿ ಕೊಡುವುದು ಪಿತೃಪಕ್ಷದಲ್ಲಿ ಅತ್ಯಂತ ಮುಖ್ಯ. ಪಿತೃಪಕ್ಷದ 15 ದಿವಸಗಳ ಅವಧಿಯಲ್ಲಿ ಬಡವರಿಗೆ ಅನ್ನದಾನ ಮಾಡಿ, ವಸ್ತ್ರ ದಾನ ನೀಡಿ, ಬಡ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಿ. ಇದರಿಂದ ಪೂರ್ವ ಜನರ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರುತ್ತದೆ. ಇದಷ್ಟೇ ಅಲ್ಲದೆ ತಿಳುವಳಿಕೆಗೆ ಬಾರದೇ ಯಾವುದಾದರೂ ಅಪಘಾತದಲ್ಲಿ ಯಾರಾದರೂ ನಿಮ್ಮಿಂದ ಸಾವಿಗೀಡಾಗಿದ್ದರೆ, ಅಥವಾ ಪ್ರಾಣಿ ,ಪಕ್ಷಿಗಳು ಮರಣ ಹೊಂದಿದ್ದರೆ, ಅದಕ್ಕೆ ಪ್ರಾಯಶ್ಚಿತ ಕರ್ಮವು ಅನ್ನದಾನದಿಂದ ಆಗುತ್ತದೆ.
ಪಿತೃಪಕ್ಷದ ವೇಳೆ ಸ್ವರ್ಗಸ್ಥರಾದ ಹಿರಿಯರು ಭೂಲೋಕಕ್ಕೆ ಬರುತ್ತಾರಂತೆ. ಈ ಸಂದರ್ಭದಲ್ಲಿ ನಮ್ಮನ್ನು ನೋಡಿ ನಾವು ನೀಡುವ ಆತಿಥ್ಯವನ್ನು ಸ್ವೀಕರಿಸಿ ಸಂತೃಪ್ತರಾಗಿ ನಮಗೆ ಆಶೀರ್ವಾದ ಮಾಡಿ ಯಮಲೋಕಕ್ಕೆ ಮರಳುತ್ತಾರೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪಿತೃ ಕಾರ್ಯವನ್ನು ಮನೆಯಲ್ಲಿ ಮಾಡುವುದು ಅತ್ಯಂತ ಶ್ರೇಷ್ಠ. ಇನ್ನೂ ಸಪ್ತ ಮೋಕ್ಷ ಮತ್ತು ಸಪ್ತ ಮುಕ್ತಿ ಕ್ಷೇತ್ರಗಳಲ್ಲಿ ಶ್ರಾದ್ಧ ಕಾರ್ಯ ಮಾಡುವುದು ಕೂಡ ಅತ್ಯಂತ ಪುಣ್ಯಪ್ರದ ಕೆಲಸ ಎನ್ನಲಾಗುತ್ತದೆ.

 

ವಿಷ್ಣುವಿನ ವಿವಿಧ ಅವತಾರ ಎತ್ತಿದ ಪರಮ ದೈವೀ ಕ್ಷೇತ್ರಗಳೆ ಈ ಸಪ್ತ ಮುಕ್ತಿ ಕ್ಷೇತ್ರಗಳು. ಈ ಕ್ಷೇತ್ರಗಳಿಗೆ ಪೌರಾಣಿಕ ಹಿನ್ನೆಲೆ ಇದೆ. ಪಾಂಡವರು ರಣ ಭೂಮಿಯಲ್ಲಿ ತಮ್ಮಿಂದಾದ ಹತ್ಯಾ ಪಾಪಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ… ಈ ಸ್ಥಳಗಳಿಗೆ ಭೇಟಿ ನೀಡಿದ್ದರಂತೆ. ದೇವರ ದರ್ಶನ ಮಾಡಿ ತಮ್ಮ ಪಾಪ ಕರ್ಮಗಳಿಂದ ಮುಕ್ತಿ ಪಡೆದು ಸ್ವರ್ಗದತ್ತ ಪ್ರಯಾಣ ಬೆಳೆಸಿದರು ಎಂದು ಹೇಳಲಾಗುತ್ತದೆ.
“ಪುನರಪಿ ಜನನಂ, ಪುನರಪಿ ಮರಣಂ” ಎಂದು ಆಚಾರ್ಯ ಶಂಕರಾಚಾರ್ಯರು ಹೇಳಿದ್ದಾರೆ. ಹುಟ್ಟು ಸಾವು ಎನ್ನುವುದು ನಿರಂತರವಾದ ಪ್ರಕ್ರಿಯೆ. ಈ ಜನನ-ಮರಣದ ಆಟದಲ್ಲಿ ಸತ್ಕಾರ್ಯಗಳನ್ನು ಮಾಡಬೇಕು. ಹೆತ್ತವರು ಸತ್ತ ನಂತರ ಅವರ ಶ್ರಾದ್ದಾ ಕಾರ್ಯವನ್ನು ಮಾಡುವುದಕ್ಕಿಂತ ಅವರನ್ನು ಬದುಕಿನ ಉದ್ದಕ್ಕೂ ಪ್ರೀತಿಯಿಂದ ನೋಡಿಕೊಳ್ಳುವುದು ಅತ್ಯಂತ ಮುಖ್ಯ, ಯಾಕೆಂದರೆ ಎಷ್ಟೇ ಜನ್ಮ ಕಳೆದರೂ , ತಾಯಿ ಮತ್ತು ತಂದೆಯ ಋಣ ತೀರಿಸುವುದು ಅತ್ಯಂತ ಕಷ್ಟದಾಯಕ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top