ಮನೋರಂಜನೆ

ಬಿಜೆಪಿ ಪಕ್ಷ ತನ್ನ ನೈತಿಕತೆಯನ್ನಸಂಪೂರ್ಣವಾಗಿ ಕಳೆದುಕೊಂಡಿದೆ: ಆರೆಸ್ಸೆಸ್ ಮಾಜಿ ಅಧ್ಯಕ್ಷ ಟೀಕೆ.

“ಕೇಂದ್ರದಲ್ಲಿ ಬಿಜೆಪಿ ನೇತೃತ್ವದ NDA ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕೂವರೆ ವರ್ಷಗಳೇ ಕಳೆದಿದ್ದರೂ ನೀಡಿದ್ದ ಭರವಸೆಗಳನ್ನ ಈಡೇರಿಸದೆ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಬಿಜೆಪಿಯ ಅಂಗಸಂಸ್ಥೆಗಳು ಎಂದೇ ಕರೆಸಿಕೊಳ್ಳುವ ಆರೆಸ್ಸೆಸ್ ನಂತಹ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಹಲವಾರು ಮಂದಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ,. ಇದೀಗ ಭಾರತೀಯ ಜನತಾ ಪಕ್ಷ ಮತ್ತು ಅದರ ಕಾರ್ಯವೈಖರಿಯ ಕುರಿತಾಗಿ RSS ಮಾಜಿ ಅಧ್ಯಕ್ಷ ಕಿಡಿಕಾರಿದ್ದಾರೆ.

 

 

ಪಣಜಿಯಲ್ಲಿ ನಡೆದ ಗೋವಾ ಸುರಕ್ಷಾ ಮಂಚ್ ನ ಯುವ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು “ಬಿಜೆಪಿಯು ತನ್ನ ನೈತಿಕತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಸದ್ಯದ ಪರಿಸ್ಥತಿ ಹೇಗಿದೆ ಎಂದರೆ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಶ್ರೀರಾಮ ಕೂಡಾ ಹಣ ಖರ್ಚು ಮಾಡಿಯೇ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ ” ಎಂದು ವ್ಯಂಗ್ಯ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷ ನೈತಿಕತೆಯನ್ನು ಕಳೆದುಕೊಂಡಿದ್ದು, ದೇಶದಲ್ಲಿ ಚುನಾವಣೆಯನ್ನು ಗೆಲ್ಲುವುದಕ್ಕೆ ಇತರ ಪಕ್ಷಗಳು ಯಾವೆಲ್ಲ ದಾರಿ ತುಳಿಯುತ್ತಾರೋ ಅದೇ ಹಾದಿಯನ್ನು ಬಿಜೆಪಿಯೂ ತುಳಿಯುತ್ತಿದೆ. ಮತ ಗಳಿಸಲು ಯುವ ಸಮೂಹ ಮತ್ತು ಮಹಿಳೆಯರನ್ನು ಗುರಿಯಾಗಿರಿಸಿ ಹಣ, ಉಡುಗೊರೆ ಹಾಗೂ ಇನ್ನಿತರ ಅಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top