fbpx
ಸಮಾಚಾರ

ರಫೇಲ್ ಡೀಲ್- “ಸರ್ ಜೀ, ಈಗಲಾದರೂ ನಿಮ್ಮ ಮೌನವನ್ನು ಮುರಿಯಿರಿ” ಬಿಜೆಪಿ ಹಿರಿಯ ಮುಖಂಡ.

ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳಿಂದ ಮೋದಿ ಸರ್ಕಾರ ಭಾರಿ ಟೀಕೆಗೆ ಒಳಗಾಗಿದೆ. ಈ ಬಗ್ಗೆ ಕೇವಲ ವಿಪಕ್ಷಗಳಷ್ಟೇ ಅಲ್ಲ, ಬಿಜೆಪಿಯಲ್ಲೇ ಇದ್ದ ಹಿರಿಯ ನಾಯಕರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

 

ಮೋದಿ ಸರ್ಕಾರದಲ್ಲಿ ರಫೇಲ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರರದ ಬಗ್ಗೆ ಮಾಜಿ ಬಿಜೆಪಿ ನಾಯಕ ಯಶವಂತ ಸಿನ್ಹಾ ಟ್ವೀಟ್ ಮಾಡಿ ಪ್ರಧಾನಿ ಮೋದಿ ರಫೇಲ್ ವಿವಾದದ ಕುರಿತಾಗಿ ಮೌನವನ್ನು ಮುರಿಯಲು ಆಗ್ರಹಿಸಿದ್ದಾರೆ. “ಸರ್ ಜಿ, ಈಗಲಾದರೂ ನಿಮ್ಮ ಮೌನವನ್ನು ಮುರಿದು ಫ್ರಾನ್ಸ್ ಮಾಜಿ ಅಧ್ಯಕ್ಷ ಅವರ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ (ನೀವಿಬ್ಬರು ಸಭೆಯಲ್ಲಿದ್ದರಿಂದ) ಇಲ್ಲದಿದ್ದರೆ ಜನರು ಅದನ್ನು ನಿಜವೆಂದು ತಿಳಿದುಕೊಳ್ಳುತ್ತಾರೆ” ಎಂದು ಅವರು ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.

 

 

ರಿಲಯನ್ಸ್ ಗ್ರೂಪ್‌ ಜತೆಗೆ ರಫೇಲ್ ಒಪ್ಪಂದ ಕುದುರಿಸುವಂತೆ ಮೋದಿ ಸರ್ಕಾರವೇ ಒತ್ತಾಯ ಮಾಡಿದ್ದು ಆದ್ದರಿಂದ ಫ್ರಾನ್ಸ್ ಸರ್ಕಾರಕ್ಕೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲಾಂಡ್ ಕಳೆದ ವಾರವಷ್ಟೇ ಹೇಳಿಕೆ ನೀಡಿದ್ದರು. ಇದರಿಂದ ಅವರ ಹೇಳಿಕೆ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸಿತ್ತು. ಈ ಹಿನ್ನಲೆಯಲ್ಲಿ ಈಗ ಸಿನ್ಹಾ ಪ್ರಧಾನಿಗೆ ಸ್ಪಷ್ಟನೆ ನೀಡುವಂತೆ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top