fbpx
ಮನೋರಂಜನೆ

ಆಯತಪ್ಪಿ ಕುದುರೆ ಮೇಲಿಂದ ಬಿದ್ದ ಕಿಚ್ಚ ಸುದೀಪ್- ಸೈರಾ ಶೂಟಿಂಗ್ ವೇಳೆ ಅವಘಡ..

ಥರ ಥರದ ಪಾತ್ರಗಳ ಮನೋಜ್ಞ ಅಭಿನಯದ ಮೂಲಕ ಕರ್ನಾಟಕದಾಚೆಗೂ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವವರು ಕನ್ನಡ ನಟ ಕಿಚ್ಚ ಸುದೀಪ್.. ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನು ಕೊಡುತ್ತಾ ಸಾಗಿರುವ ಕಿಚ್ಚ ಕನ್ನಡದಲ್ಲಿ ಬ್ಯುಸಿಯಾಗಿದ್ದರೂ ಆಗ್ಗಾಗ್ಗೆ ಹೊರ ರಾಜ್ಯಗಳಲ್ಲೂ ಮೋಡಿ ಮಾಡುತ್ತಾ ಬಂದಿದ್ದಾರೆ.. ಸದ್ಯ ಅವರು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ..

 

 

ಆದರೆ ಈಗ ವಿಷಯ ಏನಪ್ಪಾ ಅಂದ್ರೆ, ಸೈರಾ ಶೂಟಿಂಗ್ ವೇಳೆ ಸಂಭವಿಸಿದ್ದ ಅವಘಡವೊಂದು ತಡವಾಗಿ ಬೆಳಕಿಗೆ ಬಂದಿದೆ. ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಕುದುರೆ ಏರಿ ಸವಾರಿ ಮಾಡುವ ವೇಳೆ ಆಯತಪ್ಪಿ ಸುದೀಪ್ ಕೆಳಗೆ ಬಿದ್ದಿದ್ದಾರೆ.. ಹೀಗೆ ಕೆಳಗೆ ಬಿದ್ದ ಕಿಚ್ಚನನ್ನ ಒಂದು ಸ್ವಲ್ಪ ದೂರ ಕುದುರೆ ಮುಂದೆ ಎಳೆದುಕೊಂಡೇ ಹೋಗಿದೆ.. ನಂತರ ಸೆಟ್ಟಿನಲ್ಲಿದ್ದವರು ಕುದುರೆಯನ್ನು ನಿಲ್ಲಿಸಿ ಅಪಾಯವನ್ನು ತಡೆದಿದ್ದಾರೆ.. ಈ ವೇಳೆ ಅದೃಷ್ಟವಶಾತ್ ಕಿಚ್ಚಾ ಸುದೀಪ್‌ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಅಂದಹಾಗೆ ಸೈರಾ ಚಿತ್ರವನ್ನು ಚಿರಂಜೀವಿ ಅವರ ಮಗ ರಾಮ್ ಚರಣ್ ಅವರೇ ನಿರ್ಮಾಣ ಮಾಡುತ್ತಿದ್ದು ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟರದ್ದೊಂದು ಮಹಾ ಸಂಗಮವಾಗಲಿರೋದು ಅಸಲೀ ಕುತೂಹಲ! ಬೇರೆ ಭಾಷೆಗಳ ಸ್ಟಾರ್ ನಟರು ಇದರಲ್ಲಿ ನಟಿಸುತ್ತಿರೋದು ಪ್ರೇಕ್ಷಕರನ್ನು ಮತ್ತಷ್ಟು ಕುತೂಹಲಕ್ಕೀಡು ಮಾಡಿದೆ. ಚಿರಂಜೀವಿ ಜೊತೆಗೆ, ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ನಯನತಾರ ಮುಂತಾದವರು ನಟಿಸುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top