ಮನೋರಂಜನೆ

ನಟಿ ತನುಶ್ರೀಗೆ ಬಟ್ಟೆ ಬಿಚ್ಚಿ ಡಾನ್ಸ್ ಮಾಡು ಎಂದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ- ಮುಂದೇನಾಯ್ತು?

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

 

 

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ. ಇದೀಗ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ಈ ಮಂಚಕ್ಕೆ ಕರೆಯುವ ಕಾಯಿಲೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇತ್ತೀಚಿಗೆ ನಟ ನಾನಾಪಟೇಕರ್ ಮೇಲೆ ದೈಹಿಕ ಕಿರುಕುಳ ಆರೋಪ ಮಾಡಿ ಸುದ್ದಿಯಾಗಿದ್ದ ತನುಶ್ರೀ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ ಚೊಚ್ಚಲ ಚಿತ್ರ ‘ಚಾಕೋಲೆಟ್​: ಡಿಪ್​ ಡಾರ್ಕ್​ ಸೀಕ್ರೆಟ್ಸ್​’ ನಲ್ಲಿ ನನಗೆ ಅತಿ ಕೆಟ್ಟ ಅನುಭವವಾಗಿತ್ತು,. ಆ ಚಿತ್ರದಲ್ಲಿ ಅನಿಲ್​ ಕಪೂರ್​, ಸುನೀಲ್​ ಶೆಟ್ಟಿ, ಇರ್ಫಾನ್​ ಖಾನ್​, ಇಮ್ರಾನ್​ ಹಶ್ಮಿ ನಟನೆ ಮಾಡಿದ್ದರು. ಶೂಟಿಂಗ್ ವೇಳೆ ನಿರ್ದೇಶಕ ಅಗ್ನಿ ಹೊತ್ರಿ ನನಗೆ ‘ಬಟ್ಟೆ ಬಿಚ್ಚಿ ಡಾನ್ಸ್ ಮಾಡುವಂತೆ ಒತ್ತಾಯಿಸಿದ್ದರು”

” ಆಗ ನಾನು ಒಂದು ಕ್ಷಣ ಆಘಾತಕ್ಕೆ ಒಳಗಾದೆ, ಆ ವೇಳೆ ನಟ ಇರ್ಫಾನ್ ಮತ್ತು ಸುನಿಲ್ ಶೆಟ್ಟಿ ನನ್ನ ಬೆಂಬಲಕ್ಕೆ ನಿಂತು ನಿರ್ದೇಶಕರನ್ನು ತಡೆದು ಈ ಘಟನೆಯಿಂದ ನನ್ನ ಪಾರು ಮಾಡಿದರು.. ನಾನು ಬಾಲಿವುಡ್ ಚಿತ್ರಗಳಿಂದ ದೂರ ಉಳಿದುಕೊಳ್ಳಲು ಕಾಸ್ಟಿಂಗ್ ಕೌಚ್ ಕಿರುಕುಳಗಳೇ ಕಾರಣ,, ಇದೇ ಕಾರಣಕ್ಕೆ ನನಗೆ ಹೆಚ್ಚು ಅವಕಾಶಗಳು ದೊರೆಯಲಿಲ್ಲ” ಎಂದು ತಮಗೆ ಆದ ಅನುಭವವನ್ನು ತನುಶ್ರೀ ಹೊರಹಾಕಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top