fbpx
ಸಮಾಚಾರ

ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣ, ಮೃತ ಪ್ರಣಯ್ ಪತ್ನಿ ಅಮೃತಾ ಪೊಲೀಸರಲ್ಲಿ ಅಂಗಲಾಚಿ ಬೇಡಿದ್ದು ಏನ್ ಗೊತ್ತಾ

ಆಂಧ್ರ ಪ್ರದೇಶದ ತೆಲಂಗಾಣದಲ್ಲಿ ಸೆಪ್ಟೆಂಬರ್ ೧೪ ರಂದು ನಡೆದ ಈ ಘಟನೆ ಇಡೀ ರಾಜ್ಯವನ್ನೇ ಗಡಗಡ ನಡುಗಿಸುವಂತೆ ಮಾಡಿತ್ತು,ಆ ಘಟನೆ ಏನು ಅಂದ್ರೆ ಪ್ರೀತಿಸಿ ಮದುವೆಯಾದ ಹುಡುಗನನ್ನು ಮತ್ತೆ ಬರಲಾರದ ಲೋಕಕ್ಕೆ ಕಳುಯಿಸಿದ್ದ ಹುಡುಗಿಯ ತಂದೆ.

ಘಟನೆಯ ಒಳ ವಿವರ :
21 ವಯಸ್ಸಿನ ಅಮೃತಾ ಹಾಗೂ 24 ವರ್ಷ ವಯಸ್ಸಿನ ಪ್ರಣಯ್ ಪ್ರೀತಿಸಿ ಅಂತರ ಜಾತಿಯ ಮದುವೆಯಾಗಿದ್ದರು. ಇಬ್ಬರ ಜಾತಿ , ಮತ ಬೇರೆ ಬೇರೆ ಎಂಬ ಕಾರಣಕ್ಕೆ ಇಬ್ಬರ ಕುಟುಂಬದವರು ಈ ಮದುವೆಗೆ ಒಪ್ಪಲಿಲ್ಲ.ತುಂಬಾ ಪ್ರೀತಿಯಲ್ಲಿ ಇದ್ದ ಇವರು ಮನೆಯವರ ವಿರೋಧದ ನಡುವೆಯೂ ಕಳೆದ ಜನವರಿಯಲ್ಲಿ ಮದುವೆಯಾಗಿದರು ಮದುವೆಯಾದ ಸ್ವಲ್ಪ ದಿನದ ನಂತರ ಈ ಜೋಡಿಯನ್ನು ಪ್ರಣಯ್ ಮನೆಯವರು ಹೇಗೋ ಸ್ವೀಕರಿಸಿದ್ದರು. ನಂತರ ಒಪ್ಪಿ ಮತ್ತೆ ಆಗಸ್ಟ್ 17 ರಂದು ಅವರಿಬ್ಬರಿಗಾಗಿ ಅದ್ಧೂರಿ ಆರತಕ್ಷತೆಯನ್ನೂ ಏರ್ಪಡಿಸಿದ್ದರು,ಆರತಕ್ಷತೆಗೆ ಪೊಲೀಸರನ್ನು ಆಮಂತ್ರಿಸಲು ಪ್ರಣಯ್ ಮತ್ತು ಅಮೃತಾ ತೆರಳಿದಾಗ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ‘ನಿಮ್ಮ ಪ್ರಾಣಕ್ಕೆ ಅಪಾಯವಿದೆ’ ಎಂಬ ಸುಳಿವೂ ನೀಡಿದ್ದರು. ಆದರೆ ಇದನ್ನು ಅಷ್ಟು ಗಂಭೀರವಾಗಿ ಸ್ವೀಕರಿಸದ ಈ ಜೋಡಿ , ದೂರನ್ನೂ ನೀಡದೆ ಪೊಲೀಸರ ಮಾತಿಗೆ ನಕ್ಕು ಸುಮ್ಮನಾಗಿದ್ದರು.
ಅಮೃತಾ ಮತ್ತು ಪ್ರಣಯ್ ಜೀವಕ್ಕೆ ಅಪಾಯವಿದೆ ಎಂಬ ಅನುಮಾನವಿದ್ದಿದ್ದರಿಂದ ಯಾವುದೇ ದೂರು ಇಲ್ಲದಿದ್ದರೂ ಸ್ವಂತ ಪೊಲೀಸರೇ ಅಮೃತಾ ಅವರ ತಂದೆ ಮಾರುತಿ ರಾವ್ ಅವರನ್ನು ಠಾಣೆಗೆ ಕರೆಸಿದ್ದರು. ಆದರೆ ಆ ಸಮಯದಲ್ಲಿ ಅತ್ತು, ಕಣ್ಣೀರು ಹಾಕಿದ ಮಾರುತಿ ರಾವ್, ನನಗೆ ನನ್ನ ಮಗಳನ್ನಾಗಲೀ, ಪ್ರಣಯ್ ನನ್ನಾಗಲೀ ಕೊಲ್ಲುವ ಯಾವ ಉದ್ದೇಶವೂ ಇಲ್ಲ. ಆದರೆ ಆ ರೀತಿ ಮಾತುಗಳು ಕೇಳಿಬರುತ್ತಿರುವುದರಿಂದ ನನಗೆ ಘಾಸಿಯಾಗುತ್ತಿದೆ ಎಂದಿದ್ದರು. ಅಮೃತಾ-ಪ್ರಣಯ್ ಮದುವೆಯಾದ ನಂತರ ಕೆಲ ದಿನ ಮಾರುತಿ ರಾವ್ ಮೌನವಾಗಿಯೇ ಇದ್ದರು.

 

 

 

ಸ್ವಲ್ಪ ದಿನದ ನಂತರ ಮೂರು ತಿಂಗಳ ಗರ್ಭಿಣಿಯಾಗಿದ್ದ ಅಮೃತಾ, ಕಳೆದ ಶುಕ್ರವಾರ ಅಂದರೆ ಸೆ.14 ರಂದು ತೆಲಂಗಾಣದ ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆಂ ತೆರಳಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗಿದ್ದ ಪ್ರಣಯ್ ನನ್ನು ಕೆಲ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ .ಈ ಬಗ್ಗೆ ಕಣ್ಣೀರು ಹಾಕುತ್ತಾ ರೋಷದ ಧ್ವನಿಯಲ್ಲಿ ಮಾತನಾಡಿದ ಅಮೃತಾ ನನ್ನ ತಂದೆಯಲ್ಲದೆ ಬೇರೆ ಯಾರುತತನ್ನಪತಿಯನ್ನು ಕೊಲ್ಲಲು ಸಾಧ್ಯವೇ ಇಲ್ಲ ,ಅಷ್ಟೇ ಅಲ್ಲದೇ ತನ್ನ ಪತಿಯ ಕೊಲೆಯಲ್ಲಿ ಕೇವಲ ತನ್ನ ತಂದೆ ತಾಯಿ ಮಾತ್ರವಲ್ಲದೆ, ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಶಾಸಕರೊಬ್ಬರ ಕೈವಾಡವೂ ಇದೆ ಎಂದು ರೋಪಿಸುವುದು ಈ ನಡುವೆ ಈ ಬಗ್ಗೆ ಮೊದಲೇ ಸುಳಿವಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ ತೆಲಂಗಾಣ ಪೊಲೀಸರ ಮಾತನ್ನು ಕೇಳಿ ಆತಂಕ ಸೃಷ್ಟಿಯಾಗಿತ್ತು

ಅಮೃತ ತಂದೆ ‘ಮಾರುತಿ ರಾವ್ ರವರ ಕಡೆಯಿಂದ ಆಗಾಗ ತಮ್ಮ ಮಗ ಪ್ರಣಯ್ ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ ನಾವು ಅವನ್ನೆಲ್ಲ ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅಳುತ್ತಾ ಹೇಳುತ್ತಾರೆ ಪ್ರಣಯ್ ತಂದೆತಾಯಿ. ಅನುಮಾನವಿದ್ದ ಕಾರಣದಿಂದ ಮನೆಯ ಸುತ್ತ ಮುತ್ತ ಮೂರು ಕಡೆಗಳಲ್ಲಿ ಸಿಸಿಟಿ ಕ್ಯಾಮರಾ ಅಳವಡಿಸಲಾಗಿತ್ತು.ಪೊಲೀಸರು ಸಿಸಿಟಿ ಕ್ಯಾಮರಾ ಏನಾದ್ರು ಸುಳಿವು ಸಿಗಬಹುದಾ ಎಂದು ಹುಡುಕಾಟ ನಡೆಸುತ್ತಿದ್ದಾರೆ.ಆ ವೇಳೆ ಅಮೃತ ರವರ ತಂದೆ ನಾಪತ್ತೆಯಾಗಿದ್ದರು ಕೊನೆಗೂ ಪೋಲೀಸರ ಬಲೆಗೆ ಸಿಕ್ಕಿಹಾಕಿಕೊಂಡ ಮಾರುತಿ ರಾವ್ ಪ್ರಣಯ್ ಕೊಲೆಗೆ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಪರಿಹಾರ ಘೋಷಣೆ:
ಈ ವೇಳೆ ಮಾತನಾಡಿದ ಅಮೃತ ನಾನು ನನ್ನ ಪತಿಯ ಆಸೆಯನ್ನು ನೆರವೇರಿಸಲು ಬದುಕಿದ್ದೇನೆ ಎಂದು ಹೇಳಿದ್ದರು. ಪತಿ ಪ್ರಣಯ್ ತಮ್ಮ ಮಗುವನ್ನು ಒಬ್ಬ ಜಾತಿ, ಧರ್ಮವನ್ನು ಮೀರಿ ಬೆಳಸಬೇಕು ಅಂತ ಇಷ್ಟ ಪಟ್ಟಿದ್ದದ್ದರು. ಅದರಂತೆ ನನ್ನ ಮಗುವನ್ನು ಬೆಳೆಸುತ್ತೇನೆ ಎಂದು ನೋವಿನಲ್ಲೂ ಹೇಳಿಕೊಂಡರು.ಇದಕ್ಕೆ ಮರುಗಿದ ರಾಜ್ಯ ಸರ್ಕಾರ ಅಮೃತ ತನ್ನ ಕಾಲ ಮೇಲೆ ತಾನು ನಿಲುವುದಕ್ಕೆ ಬೇಕಾದ ಸಹಾಯವನ್ನು ಮಾಡಲು ಮುಂದೆ ಬಂದಿದೆ .ರಾಜ್ಯ ಸರ್ಕಾರವೂ ಪರಿಹಾರ ಧನವನ್ನು ಫೋಷಿಸಿದ್ದು ಅಮೃತಾಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಭರವಸೆಯನ್ನು ಕೂಡ ನೀಡಿತ್ತು

 

 

 

ಗುರುವಾರ ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ,ತುಂಗತುರ್ತಿ ಶಾಸಕ ಗದರಿ ಕಿಶೋರ್ ಮತ್ತು ರಾಜ್ಯಸಭೆ ಸದಸ್ಯ ಬಾದುಗುಲಾ ಲಿಂಗಯ್ಯ ಯಾದವ್, ಪೊಲೀಸ್ ಅಧೀಕ್ಷಕ ಎ.ವಿ ರಂಗನಾಥ್ ಮತ್ತು ಜಿಲ್ಲಾಧಿಕಾರಿ ಗೌರವ್ ಉಪ್ಪಲ್ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿ, ಸಂತಾಪ ವ್ಯಕ್ತಪಡಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ, ಇಂತಹ ಘಟನೆಗಳು ಪ್ರಸ್ತುತ ದಿನಗಳಲ್ಲಿ ಇನ್ನೂ ನಡೆಯುತ್ತಿವೆ ಎಂದು ನಾಚಿಕೆ ಆಗುತ್ತದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು .
ಮೃತ ಪ್ರಣಯ್ ಪತ್ನಿ ಅಮೃತ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ಅವರ ಕುಟುಂಬಕ್ಕೆ ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದರು

ಅಮೃತ ಮನವಿ:

ಕಳೆದ ಕೆಲವು ದಿನಗಳಿಂದ ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್ ಮುಖಾಂತರ ಹಲವು ಮೆಸೇಜ್‍ಗಳು ಬಂದಿದೆ. ಹಲವರು ಪ್ರಣಯ್ ಸಾವಿನ ಬಳಿಕ ಸರ್ಕಾರ ನೀಡುವ ಆಸ್ತಿಯನ್ನು ಪಡೆದುಕೊಳ್ಳುವುದರ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸರ್ಕಾರ ನೀಡುವ ಸೌಲಭ್ಯ ನಿಮ್ಮ ಭವಿಷ್ಯಕ್ಕೆ ಸಹಕಾರಿ ಆಗಲಿದ್ದು, ಸ್ವೀಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಮೆಸೇಜ್ ಗಳು ಬರುತ್ತಿವೆ ಅಂತ ತಿಳಿಸಿದರು. ಇದನ್ನೂ ಓದಿ: ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ ನನಗೆ ಸರ್ಕಾರ ನೀಡುತ್ತಿರುವ ಪರಿಹಾರ ಬೇಕಾಗಿಲ್ಲ. ನನಗೆ ಡಬಲ್ ಬೆಡ್ ರೂಮ್, ಕೃಷಿ ಜಮೀನು, ಹಣ ಯಾವುದೂ ಬೇಡ. ಪ್ರಣಯ್ ನನ್ನು ಕೊಂದ ನನ್ನ ತಂದೆ ಸೇರಿದಂತೆ ಇತರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿ. ಅಷ್ಟೇ ಸಾಕು ನನಗೆ ಎಂದು ಅಮೃತಾ ಹೇಳಿದ್ದಾರೆ.

ನಾವು ಆರ್ಥಿಕವಾಗಿಯೂ ಸಬಲರಾಗಿ ಇದ್ದೇವೆ. ಮನೆ, ಕೃಷಿ ಭೂಮಿ, ಉದ್ಯೋಗ ಮತ್ತು ಹಣ ನೀಡಿ ಎಂದು ಯಾರ ಬಳಿಯೂ ನಾನಾಗಲಿ ಅಥವಾ ಕುಟುಂಬಸ್ಥರು ಕೇಳಿಕೊಂಡಿಲ್ಲ. ಪ್ರಣಯ್ ಕೊಂದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ನನ್ನ ಮನವಿ ಆಗಿದೆ ಎಂದು ಅಮೃತ ಸ್ಪಷ್ಟಪಡಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top