fbpx
ಮನೋರಂಜನೆ

ಕೀರ್ತಿ ಗೌಡ ಬಗ್ಗೆ ಏಕವಚನದಲ್ಲಿಯೇ ಶಾಕಿಂಗ್ ಹೇಳಿಕೆ ಕೊಟ್ಟ ದುನಿಯಾ ವಿಜಯ್ ಪುತ್ರಿ.

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಂಡಿದ್ದು ಕೋರ್ಟ್ ಆದೇಶದಂತೆ ದುನಿಯಾ ವಿಜಯ್ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗಿದೆ.. ದುನಿಯಾ ವಿಜಿ ಸತತ ನಾಲ್ಕನೇ ದಿನ ಜೈಲಿನಲ್ಲೇ ಕಳೆದಿದ್ದಾರೆ..ಇದರ ಬೆನ್ನಲ್ಲೇ ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.

ದುನಿಯಾ ವಿಜಯ್ ಎರಡನೇ ಪತ್ನಿ(?) ಕೀರ್ತಿ ಗೌಡ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿ ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಕೀರ್ತಿ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದುನಿಯಾ ವಿಜಯ್ ಬಂಧನದ ವೇಳೆ ಮಗ ಸಾಮ್ರಾಟ್ ವಿಜಯ್ ಕೀರ್ತಿ ಗೌಡ ಜೊತೆ ಇದ್ದಿದ್ದರಿಂದ ನಾಗರತ್ನ ಅವರು ಮಗನ ಬಗ್ಗೆ ವಿಚಾರಿಸಲು ಹೋದ ಸಂದರ್ಭದಲ್ಲಿ ಕೀರ್ತಿ ಗೌಡ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ ದೂರು ದಾಖಲಿಸಿದ್ದಾರೆ.

 

 

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಈಗಾಗಲೇ ಪೋಲೀಸರ ಬಳಿ ಹೇಳಿಕೆಯನ್ನೂ ನೀಡಿರುವ ವಿಜಯ್ ಹಿರಿಯ ಪುತ್ರಿ ಮೋನಿಕಾ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಕೀರ್ತಿ ಗೌಡ ಬಗ್ಗೆ ಶಾಕಿಂಗ್ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.

 

ಮೋನಿಕಾ ವಿಜಯ್ ಹೇಳಿದ್ದೇನು?
“ಅಂದು ಗಲಾಟೆ ಶುರುವಾಗಿದ್ದು ಕೀರ್ತಿಯಿಂದಲೇ. ನನ್ನ ಅಮ್ಮನ (ನಾಗರತ್ನ) ವಿರುದ್ಧ ಕೀರ್ತಿಯೇ ಮೊದಲು ಕೂಗಾಡಿ ರಂಪಾಟ ಮಾಡಿದಳು.‌ ಅವಳ ವರ್ತನೆ ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ. ಅಷ್ಟಕ್ಕೂ ಅದು ಕೀರ್ತಿಯ ಮನೆಯಲ್ಲ. ಅದು ನಮ್ಮ ತಂದೆಯ ಮನೆ, ಅಜ್ಜಿ, ತಾತನೊಂದಿಗೆ ನಾವಿರುವ ಮನೆಗೆ ಕೀರ್ತಿ ಬಂದಿದ್ದಾಳೆ.. ಕೀರ್ತಿ ನಮಗೆ ಏನೂ ಅಲ್ಲ, ನಮಗೂ ಅವಳಿಗೂ ಏನೂ ಸಂಭಂದವಿಲ್ಲ.. ಮಾದ್ಯಮದಲ್ಲಿ ಕೀರ್ತಿ ನಮ್ಮನ್ನು ಸಾಕುತ್ತಿದ್ದಾಳೆ ಎಂದು ಹೇಳುತ್ತಿದ್ದೀರಿ ಆದರೆ ಅವಳೇನು ನಮ್ಮಣ್ಣ ಸಾಕುತ್ತಿಲ್ಲ, ನಮ್ಮನ್ನು ಸಾಕೋದಿಕ್ಕೆ ಅವಳಾರು, ನಾವು ನಮ್ಮ ತಂದೆ ಜೊತೆ ಇದ್ದೇವೆ ಅಷ್ಟೇ ” ಇದ್ದಾರೆ ಎಂದು ಏಕವಚನದಲ್ಲೇ ಹೇಳಿದ್ದಾರೆ.

‘ಅಪ್ಪ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಗೆ ತೆರಳಿದ್ದಾಗ ಅವರ ಜತೆ ತಮ್ಮ ಸಾಮ್ರಾಟ್ ಕೂಡ ಇದ್ದ ವಿಚಾರ ಭಾನುವಾರ ಬೆಳಿಗ್ಗೆ ನಮ್ಮ ಅಮ್ಮನಿಗೆ ಗೊತ್ತಾಯಿತು. ತಕ್ಷಣ ಮಗನನ್ನು ನೋಡೊದಕ್ಕೆಂದು ನಾವಿರುವ ಮನೆ ಬಳಿ ಅಮ್ಮ ಬಂದ್ರು. ಆಗ ‘ನೀನು ಯಾಕೇ ಇಲ್ಲಿಗೆ ಬಂದೆ’ ಎಂದು ಕೂಗಾಡುತ್ತ ಅಮ್ಮನನ್ನು ಕೀರ್ತಿ ಎಳೆದಾಡಿ ಹಲ್ಲೆ ಮಾಡಿದಳು. ‘ಕೀರ್ತಿ ಜತೆ ಬೌನ್ಸರ್‌ಗಳೂ ಇದ್ದರು. ಅವರೆಲ್ಲ ಅಮ್ಮನಿಗೆ ಬೆದರಿಕೆ ಹಾಕಿದರು. ಇದರಿಂದ ಭಯಗೊಂಡು ಅಮ್ಮ ಗಿರಿನಗರ ಠಾಣೆಗೆ ತೆರಳಿ ದೂರು ಕೊಟ್ಟರು.” ಎಂದು ಮೋನಿಕಾ ಅವರು ಕೀರ್ತಿ ಗೌಡ ಮೇಲಿನ ಸಮಾಧಾನವನ್ನು ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top