fbpx
ಮನೋರಂಜನೆ

ಗಂಡ ದುನಿಯಾ ವಿಜಿಯ ಜೈಲು ವಾಸ ನೋಡಲಾಗದೆ ಈ ಕೆಲಸಕ್ಕೆ ನಿಂತ ವಿಜಿ ಮೊದಲ ಪತ್ನಿ ನಾಗರತ್ನ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ರವರನ್ನು ನೋಡಲು ಹೋದ ವಿಜಿಯವರ ಮೊದಲ ಪತ್ನಿ ನಾಗರತ್ನ ರವರನ್ನು ನೋಡಲು ನಿರಾಕರಿಸಿದ ವಿಜಯ್ .ವಿಜಯ್ ಜೈಲ್ಗೆ ಹೋದ ಮೇಲೆ ಮೊದಲ ಸಲ ನಾಗರತ್ನ ಪತಿಯನ್ನು ನೋಡಲು ಜೈಲಿಗೆ ಹೋಗಿದ್ದರು ಆದ್ರೆ ನಾಗರತ್ನ ರವರಿಗೆ ವಿಜಯ್ ಭೇಟಿಗೆ ಜೈಲು ಅಧಿಕಾರಿಗಳು ಅವಕಾಶ ನೀಡಿರಲಿಲ್ಲ ಕೊನೆಗೆ ನಾಗರತ್ನ ತುಂಬಾ ಪ್ರಯತ್ನ ಮಾಡಿ ಅಧಿಕಾರಿಗಳ ಮನವೊಲಿಸಿದ ನಾಗರತ್ನ ವಿಜಯ್​​​​ರನ್ನು ಭೇಟಿ ಮಾಡಲು ಅನುಮತಿ ಪಡೆದು ಸರದಿ ಸಾಲಿನಲ್ಲಿ ನಿಂತು ಒಂದು ಗಂಟೆಗೂ ಹೆಚ್ಚು ಕಾಲ ಕುಳಿತು ಕಾದಿದ್ದಾರೆ.
ಇಷ್ಟು ಕಾದ ಮೇಲೆ ವಿಜಯ್ ರವರಿಂದ ಸಿಕ್ಕ ಪ್ರತಿಕ್ರಿಯೆ ನಾಗರತ್ನ ರನ್ನು ಭೇಟಿ ಮಾಡಲು ನನಗೆ ಇಷ್ಟವಿಲ್ಲಾ ಎಂದು ,ನಾಗರತ್ನ ಅವರನ್ನು ಭೇಟಿ ಮಾಡಲು ನಿರಾಕರಿಸಿದರು ವಿಜಯ್ ಪ್ರವೇಶ ಚೀಟಿಯಲ್ಲಿ ನಾಗರತ್ನ ಅವರನ್ನು ಭೇಟಿಯಾಗಲು ಆಸಕ್ತಿಯಿಲ್ಲ ಎಂದು ಬರೆದು ಕಳುಹಿಸಿದರು.

ಸೋಮವಾರ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದ 8ನೇ ಎಸಿಎಂಎಂ ಕೊರ್ಟ್ ತೀರ್ಪು ಪ್ರಕಟಿಸಿತು . ಹೀಗಾಗಿ, ಈ ಹಿಂದೆ ಕೋರ್ಟ್ ನೀಡಿದ್ದ ಆದೇಶದಂತೆ ದುನಿಯಾ ವಿಜಯ್ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗಿದೆ.. ದುನಿಯಾ ವಿಜಿ ಪರ ವಕೀಲ ಸೆಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ . ಪರಪ್ಪನ ಅಗ್ರಹಾರ ಸೇರಿರುವ ನಟ ವಿಜಯ್​ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ .
ವಿಜಯ್ ಎಷ್ಟು ಅವಮಾನ ಮಾಡಿದ್ದರು ಗಂಡನ ಮೇಲಿನ ಪ್ರೀತಿ ವಿಜಿ ಮೊದಲ ಪತ್ನಿ ನಾಗರತ್ನಗೆ ಸ್ವಲ್ಪವೂ ಕಮ್ಮಿಯಾಗಿಲ್ಲ.ವಿಜಿಯ ಜೈಲ್ನ ವಾಸ ನೋಡಲಾಗದೇ ಪತ್ನಿ ನಾಗರತ್ನ ಅವರು ಸಂದಾನಕ್ಕೆ ಮುಂದಾಗಿದ್ದಾರೆ,ಜಿಮ್ ಟ್ರೈನರ್​ ಮಾರುತಿಗೌಡ ಅಪಹರಣ ಮತ್ತು ಹಲ್ಲೆ ನಡೆಸಿದ ವಿಜಿ ಕಂಬಿ ಹಿಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ದುನಿಯಾ ವಿಜಿ ಹಲ್ಲೆಗೆ ಒಳಗಾಗಿರುವ ಮಾರುತಿಗೌಡರನ್ನು, ಪಾನಿ ಪುರಿ ಕಿಟ್ಟಿಯನ್ನು ಭೇಟಿಯಾಗಲು ನಾಗರತ್ನ ತುಂಬಾ ಪ್ರಯತ್ನಿಸುತ್ತಿದ್ದಾರೆ .

 

 

 

ಪಾನಿಪುರಿ ಕಿಟ್ಟಿ ನಗರತ್ನರವರ ಹಾಗೂ ವಿಜಿಯ ಹಳೆಯ ಬಾಂಧವ್ಯ ,ಪಾನಿಪುರಿ ಕಿಟ್ಟಿ ವಿಜಿಯ ಫ್ಯಾಮಿಲಿಗೆ ಹತ್ತಿರವಾಗಿದ್ದವರು ಆ ಸಲಿಗೆಯಿಂದ ಪಾನಿಪುರಿ ಕಿಟ್ಟಿಯ ಮನವೊಲಿಸಲು ಆಸ್ಪತ್ರೆಗೆ ಹೋಗಿದ್ದಾರೆ ನಾಗರತ್ನ ಈ ಮೂಲಕ ನಾಗರತ್ನ ಸಂಧಾನ ನಡೆಸಲು ಮುಂದಾಗಿದ್ದಾರೆ. ಇವತ್ತು ಕೂಡ ಮಾರುತಿಗೌಡ ದಾಖಲಾಗಿರೋ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೇ, ಪಾನಿಪುರಿ ಕಿಟ್ಟಿಯನ್ನು ಮಾತನಾಡಿಸೋಕೆ ಪ್ರಯತ್ನಿಸಿದ್ದರು. ಹೀಗಾಗಿ ನಾಗರತ್ನ ಮಾತಿಗೆ ಕಿಟ್ಟಿ ಮಣಿಯುತ್ತಾರಾ? ಕಾದುನೋಡಬೇಕಿದೆ.

ಏನಿದು ಘಟನೆ?
“ವಸಂತನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮಿ.ಬೆಂಗಳೂರು ದೇಹದಾರ್ಢ್ಯ ಸ್ಪರ್ಧೆ ಏರಪಟ್ಟಿತ್ತು. ಈ ಸ್ಪರ್ಧೆಯನ್ನು ನೋಡಲು ದುನಿಯಾ ವಿಜಿ ತಮ್ಮ ಸಹಚರರೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮಾತು ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ. ದುನಿಯಾ ವಿಜಯ್ ಮತ್ತು ಅವರ ಸಹಚರರು ಮಾರುತಿಗೌಡನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಹೇಳಲಾಗಿದೆ.. ಈ ಬಗ್ಗೆ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top