ಮನೋರಂಜನೆ

‘ವಾಸ್ತು ಪ್ರಕಾರ’ ಚೆಲುವೆ ಐಶಾನಿಗೂ ಕಾಸ್ಟಿಂಗ್​ ಕೌಚ್ ಕಾಡಿತ್ತಾ?ನಟಿ ಮಣಿ ಕೊಟ್ಟ ಉತ್ತರ ಏನು

ಯೋಗರಾಜ್ ಭಟ್ ಅವರು ನಿರ್ದೇಶಿಸಿದ್ದ ‘ವಾಸ್ತು ಪ್ರಕಾರ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಐಶಾನಿ. ಅದಾದ ಮೇಲೆ ನೀನಾಸಂ ಸತೀಶ್ ಜೊತೆಯಲ್ಲಿ ‘ರಾಕೆಟ್’ ಸಿನಿಮಾದಲ್ಲಿ ಮತ್ತೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಂತರ ಮತ್ತೆ ಯಾವುದೇ ಚಿತ್ರದಲ್ಲಿ ಅಭಿನಯ ಮಾಡದ ಐಶಾನಿ ಈಗ ಮತ್ತೆ ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಲು ಮತ್ತೆ ಬಂದಿದ್ದಾರೆ .ಪ್ರಖ್ಯಾತ್ ಪರಮೇಶ್ ನಾಯಕನಾಗಿರುವ ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ಐಶಾನಿ ಶೆಟ್ಟಿ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಟಾಲಿವುಡ್​ ನಟಿ ಶ್ರೀ ರೆಡ್ಡಿ ಮಾಡಿದ ಅರೆಬೆತ್ತಲೆ ಪ್ರತಿಭಟನೆ ಕಾವು ಇನ್ನೂ ಮಾಸಿಲ್ಲ ,ಕಾಸ್ಟಿಂಗ್​ ಕೌಚ್ ವಿಚಾರವಾಗಿ ದಿನಕೊಬ್ಬ ನಾಯಕಿಯಾದ್ರೂ ಪ್ರತಿಕ್ರಿಯಿಸುತ್ತಲೇ ಬಂದಿದ್ದಾರೆ.,ನಿನ್ನೆ ಮೊನ್ನೆಯಷ್ಟೇ ಬಾಲಿವುಡ್​ ನಟಿ ತನುಶ್ರೀ ದತ್ತಾರವರು ಹತ್ತು ವರ್ಷಗಳ ಹಿಂದೆ ನಟ ನಾನಾ ಪಾಟೇಕರ್​ ತನಗೆ ಕೊಟ್ಟ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕ್ಕೆ ಕೊಟ್ಟರು ,ಈಗ ಬ್ಯೂಟಿಫುಲ್​ ಹೀರೋಯಿನ್​ ಐಶಾನಿ ಶೆಟ್ಟಿ ಸರದಿ ಕೂಡ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ.

 

 

 

ಮೂರುನಾಲ್ಕು ಸಿನಿಮಾ ಮಾಡಿ ನಾಪತ್ತೆಯಾಗಿದ್ದರು ಐಶಾನಿ ಈ ಬಗ್ಗೆ ಇಷ್ಟು ದಿನ ಪತ್ತೇನೆ ಇಲ್ಲದೆ ಎಲ್ಲಿ ಹೋಗಿದ್ರಿ ಎಂದು ಐಶಾನಿಯವರನ್ನು ಕೇಳಿದ್ರೆ ಗಾಂಧಿನಗರದಲ್ಲಿ ಕೇಳಿ ಬಂದ ಉತ್ತರ ಕಾಸ್ಟಿಂಗ್​ ಕೌಚ್ ,ಮುದ್ದು ಚೆಲುವೆ ಐಶಾನಿಗೆ ಕಾಸ್ಟಿಂಗ್​ ಕೌಚ್​ ಬಿಸಿ ತಟ್ಟಿದೆ ಎಂಬ ಮಾತುಗಳು ಕೇಳಿ ಬಂದವು. ಅದಕ್ಕಾಗಿ ಅವರು ಸಿನಿಮಾದಿಂದ ದೂರವಾಗಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡಿತ್ತು ಆದ್ರೆ ಇದಕ್ಕೆ ಉತ್ತರ ನೀಡಿದ ಐಶಾನಿ ತಮ್ಮ ಮನೆಯಲ್ಲಿ ಯಾರು ಕೂಡ ಮಾಸ್ಟರ್​​ ಡಿಗ್ರಿ ಮಾಡಿಲ್ಲ ,ಅದಕ್ಕೆ ನಾನು ಮಾಡ್ಬೇಕು ಅಂತ ಡಿಸೈಡ್​ ಮಾಡಿ, ಜರ್ನಲಿಸಂ ಮತ್ತು ಮಾಸ್​ ಕಮ್ಯುನಿಕೇಷನ್​​​ನಲ್ಲಿ ಮಾಸ್ಟರ್ಸ್​ ಕಂಪ್ಲೀಟ್​ ಮಾಡಿದೆ. ಪೋಸ್ಟ್​ ಗ್ರಾಡ್ಯುಯೇಷನ್​ ಆದ ಕಾರಣ ಕಾಲೇಜ್​ ಮತ್ತು ಸಿನಿಮಾ ಬ್ಯಾಲೆನ್ಸ್​ ಮಾಡೋದು ತುಂಬಾ ಕಷ್ಟ ಆಗ್ತಾಯಿತ್ತು ಅದಕ್ಕೆ ಸಿನಿಮಾಗೆ ತುಂಬಾ ದಿನದ ಮಟ್ಟಿಗೆ ಗುಡ್ ಬೈ ಹೇಳಿ ಸಿನಿಮಾ ಮಾಡಿರ್ಲಿಲ್ಲ ಎಂದು ಹೇಳಿದ್ದಾರೆ .

 

ಪೋಸ್ಟ್​ ಗ್ರಾಡ್ಯುವೇಷನ್​​ಗೆ ಅಂತ ಸತೀಶ್​ ನೀನಾಸಂ ಸಪೋರ್ಟ್ ಯಿಂದ ಮಾಡಿದ ಶಾರ್ಟ್​ ಮೂವಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌಂಡ್​ ಮಾಡ್ತು, ದಾದ ಸಾಹೇಬ್​ ಫಾಲ್ಕೆ ಅಕೆಡೆಮಿ ಅವಾರ್ಡ್​​, ಸೈಮಾ ಅವಾರ್ಡ್​ ಸೇರಿದಂತೆ ಹಲವು ಪ್ರತಿಷ್ಟಿತ ಅವಾರ್ಡ್ಗಳು ಐಶಾನಿಯವರನ್ನು ಹುಡುಕಿಕೊಂಡು ಬಂದವು ,ಈ ಶಾರ್ಟ್ ಫಿಲಂ ನಿಂದ ಐಶಾನಿ ಒಳಗಿದ್ದ ಒಬ್ಬ ಒಳ್ಳೆ ನಿರ್ದೇಶಕಿ ಹೊರಬಂದದ್ದು ನಿಜ .ಈಗ ಪೋಸ್ಟ್​ ಗ್ರಾಡ್ಯುವೇಷನ್ ಮುಗಿಸಿ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರುವ ಐಶಾನಿಇನ್ನು ಕಲಿಯಬೇಕಿರೋದು ಸಾಕಷ್ಟಿದೆ ಸಧ್ಯಕ್ಕೆ ನಟಿಯಾಗಿ ಮುಂದುವರಿದು ನಂತರ ಡೈರೆಕ್ಟರ್ ಆಗುವ ಆಸೆ ಇದೆ ಅಂತೇ ಈ ಮುದ್ದು ಗೊಂಬೆಗೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top