fbpx
ಸಮಾಚಾರ

ಯುವತಿಯ ಮೇಲೆ​ ರೊನಾಲ್ಡೊ ಅತ್ಯಾಚಾರ? ಸ್ಟಾರ್​ ಆಟಗಾರನ ಮೇಲೆ ಬಿತ್ತು ರೇಪ್ ಕೇಸ್.

ಫುಟ್ಬಾಲ್ ಜಗತ್ತಿನ ಖ್ಯಾತ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ದ ಅಮೆರಿಕನ್​ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದ್ದಾರೆ. 2009ರಲ್ಲಿ ಅಮೆರಿಕಾದ ಲಾಸ್​ ವೇಗಸ್​ ಹೋಟೆಲ್​ನಲ್ಲಿ ತನ್ನ ಮೇಲೆ ರೊನಾಲ್ಡೊ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ ಮಾಡಿರುವ 34 ವರ್ಷದ ಕ್ಯಾಥರಿನ್​ ಮಯೋರ್ಗಾ ಎಂಬಾಕೆ ರೊನಾಲ್ಡೊ ವಿರುದ್ಧ ಅತ್ಯಾ ರೇಪ್​ ಕೇಸ್​ ದಾಖಲಿಸಿದ್ದಾರೆ.

ರೇಪ್​ ಬಗ್ಗೆ ಬಾಯ್ಬಿಡದಂತೆ 3,75,000(₹ 27,193,125) ಡಾಲರ್​​ ಹಣವನ್ನು ನೀಡಿದ್ದಾರೆ ಎಂದು ಸಂತ್ರಸ್ಥೆ ಜರ್ಮನ್​ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಲಾಸ್​ವೇಗಸ್​ನಲ್ಲಿ ರೊನಾಲ್ಡೊ ರಜೆದಿನಗಳನ್ನು ಕಳೆಯುತ್ತಿದ್ದರು. ಅದೊಂದು ಸಂಜೆ ಪಾರ್ಟಿಯಲ್ಲಿ ಅವರು(ರೊನಾಲ್ಡೊ) ನನ್ನನ್ನು ಮೊದಲ ಬಾರಿ ಭೇಟಿಯಾಗಿದ್ದರು. ಕುಡಿದ ಅಮಲಿನಲ್ಲಿದ್ದ ರೊನಾಲ್ಡೊ ತನ್ನ ಬಳಿ ಬಂದು ‘ನಾನು ಶೇ.99ರಷ್ಟು ಒಳ್ಳೆಯ ಹುಡುಗ, ಆದರೆ ಶೇ.1 ಕೆಟ್ಟವನಾಗಲು ಬಿಡು’ ಎಂದು ಫ್ಲರ್ಟ್​ ಮಾಡಿದ್ದರು. ಬಳಿಕ ಹೋಟೆಲ್​ ರೂಮನಲ್ಲಿಯೇ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಕ್ಯಾಥರೀನ್ ಜರ್ಮನ್​ ಪತ್ರಿಕೆಗೆ ಹೇಳಿದ್ದಾರೆ.​

 

 

ಈ ಆರೋಪವನ್ನು ಅಲ್ಲೆಗಳೆದಿರುವ ರೊನಾಲ್ಡೊರವರ ವಕೀಲರೂ ಇಂತಹ ವರದಿ ಪ್ರಕಟಿಸಿರುವ ಪತ್ರಿಕೆಯ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಇನ್ನು ತಮ್ಮ ವಿರುದ್ಧ ಮೊಕದ್ದಮೆ ಹೂಡಿರುವ ರೊನಾಲ್ಡೊ ವಕೀಲರ ಕುರಿತಾಗಿ ಪ್ರತಿಕ್ರಿಯಿಸಿರುವ ಮ್ಯಾಗಜೀನ್​ ಸಂಪಾದಕರು “ಈ ವರದಿಯನ್ನು ಪ್ರಕಟಿಸುವುದಕ್ಕೂ ಮೊದಲು ನಾವು ಹಲವಾರು ಬಾರಿ ರೊನಾಲ್ಡೊ ಹಾಗೂ ಅವರ ನಿರ್ವಹಣಾಧಿಕಾರಿಯನ್ನು ಸಂಪರ್ಕಿಸಲು ಯತ್ನಿಸಿದೆವು. ಈ ಕುರಿತಾಗಿ ಅವರಿಗೆ ಲಿಖಿತ ರೂಪದಲ್ಲೂ ಮಾಹಿತಿ ನಿಡಿದ್ದೆವು. ಆದರೆ ಯಾವುದೇ ಉತ್ತರ ನಮಗೆ ಸಿಕ್ಕಿರಲಿಲ್ಲ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top