fbpx
ಭವಿಷ್ಯ

30 ಸೆಪ್ಟೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೩೦ ಸೆಪ್ಟೆಂಬರ್ ೨೦೧೮
ಸೂರ್ಯೋದಯ : ೦೬:೩೨
ಸೂರ್ಯಾಸ್ತ : ೧೮:೨೩
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಭಾದ್ರಪದ

ಪಕ್ಷ : ಕೃಷ್ಣ ಪಕ್ಷ
ತಿಥಿ : ಪಂಚಮೀ – ೦೭:೦೩ ವರೆಗೆ
ನಕ್ಷತ್ರ : ರೋಹಿಣಿ – ೨೫:೪೨+ ವರೆಗೆ
ಯೋಗ : ಸಿದ್ಧಿ – ೨೦:೦೦ ವರೆಗೆ
ಸೂರ್ಯ ರಾಶಿ : ಕನ್ಯಾ

ಅಭಿಜಿತ್ ಮುಹುರ್ತ೧೨:೦೪ – ೧೨:೫೧
ಅಮೃತಕಾಲ: ೨೨:೩೪ – ೨೪:೦೮+
ರಾಹು ಕಾಲ:೧೬:೫೪ – ೧೮:೨೩
ಗುಳಿಕ ಕಾಲ:೧೫:೨೬ – ೧೬:೫೪
ಯಮಗಂಡ:೧೨:೨೮ – ೧೩:೫೭

ಅತಿಥಿಗಳ ದಿಢೀರ್‌ ಆಗಮನವಾಗಲಿದೆ. ಬಂದವರಿಂದ ನಿಮ್ಮ ಮನಸ್ಸಿಗೆ ಇಷ್ಟವಾಗುವ ಕೆಲವು ವಿಚಾರಗಳು ತಿಳಿಯಲಿವೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನಹರಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಭವಿಷ್ಯದ ಬಗ್ಗೆ ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ. ಜೀವನದಲ್ಲಿ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಪ್ರಯತ್ನಿಸುವಿರಿ. ನಿಮ್ಮ ಸಕಾರಾತ್ಮಕ ಪ್ರಯತ್ನಕ್ಕೆ ಭಗವಂತನು ಸಹಕಾರಿಯಾಗಿ ನಿಲ್ಲುವನು.

ಮೊದಲು ನಿಮ್ಮ ಗುರಿ ಹಾಗೂ ಆದ್ಯತೆಗಳನ್ನು ಪಟ್ಟಿ ಮಾಡಿಕೊಳ್ಳಿ. ನಂತರ ಅದನ್ನು ಸಾಧಿಸುವುದು ಹೇಗೆ ಎನ್ನುವ ಬಗ್ಗೆ ತೀರ್ಮಾನಿಸಿ. ಇಂದು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಯಾರಿಗೂ ಕೈಗಡ ಕೊಡಬೇಡಿ.

ಕುಟುಂಬದ ಸದಸ್ಯರು ಅಥವಾ ಆಪ್ತಗೆಳೆಯರೊಂದಿಗೆ ಪುಣ್ಯಕ್ಷೇತ್ರ ದರ್ಶನ ಮಾಡುವ ಸಾಧ್ಯತೆ. ಮೋಜು-ಮಸ್ತಿಯ ನೆಪದಲ್ಲಿ ಇನ್ನೊಬ್ಬರಿಗೆ ನೋವಾಗದಂತೆ ಎಚ್ಚರ ವಹಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಸಂಬಂಧಗಳನ್ನು ಹೊಸ ದೃಷ್ಟಿಕೋನದಿಂದ ನೋಡುವಿರಿ. ಭವಿಷ್ಯದ ದೃಷ್ಟಿಯಿಂದ ಅದು ಅಗತ್ಯವಾಗಿರುತ್ತದೆ. ಉತ್ತಮ ಭಾಂಧವ್ಯಗಳು ಎದುರಾಗುವವು. ಹಾಗಾಗಿ ಇಂದು ಕೆಲವು ಮಹತ್ತರ ನಿರ್ಧಾರಗಳನ್ನು ತಳೆಯುವಿರಿ.

 

ಖುಷಿಕೊಡುವ ಕೆಲವು ಬೆಳವಣಿಗೆಗಳು ನಡೆಯುವವು. ನೀವು ತೆಗೆದುಕೊಂಡಿದ್ದ ರಿಸ್ಕ್‌ ಸರಿಯಾದ ಫಲ ನೀಡಲಿದೆ. ಮಾನಸಿಕವಾಗಿ ಶಕ್ತಿ ತುಂಬುವ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ. ಆಧ್ಯಾತ್ಮದ ಕಡೆ ಒಲವು ಮೂಡುವುದು.

 

ಜೀವನವನ್ನು ಹೊಸ ರೀತಿಯಿಂದ ಅರ್ಥೈಸಿಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿರುವಿರಿ. ಈ ಹಿಂದಿನ ನಿಮ್ಮ ವಿಚಾರಧಾರೆಗಳನ್ನು ನೆನೆಸಿಕೊಂಡರೆ ನಿಮಗೇ ನಗು ಬರುತ್ತದೆ. ಕಾಲಘಟ್ಟದಲ್ಲಿ ಎಲ್ಲವೂ ಬದಲಾವಣೆ ಆಗುತ್ತಿರುವುದು ಪ್ರಗತಿಯ ಸೂಚನೆ.

 

ಮನೆಯ ಸದಸ್ಯರ ಮೇಲೆ ಏಕಾಏಕಿ ಸಿಟ್ಟುಗೊಳ್ಳುವಿರಿ. ಇದರಿಂದ ಕುಟುಂಬ ಸದಸ್ಯರು ನಿಮ್ಮ ಬಗ್ಗೆ ಅಸಹನೆ ತೋರುವರು. ಆದರೆ ಆದಷ್ಟು ಶಾಂತಿಚಿತ್ತರಾಗಿ ದಿನವನ್ನು ಕಳೆದರೆ ನೀವು ಮತ್ತು ಕುಟುಂಬದವರು ನೆಮ್ಮದಿಯಿಂದ ಇರಬಹುದು.

 

ಆಶಾವಾದಿಗೆ ಜೀವನ ನಿರಾಶವಾದಿಗೆ ಅಲ್ಲ ಎನ್ನುವಂತೆ ಸದಾ ಆಶಾವಾದಕ್ಕೆ ನೀವು ಜೋತು ಬೀಳುವುದು ಒಳ್ಳೆಯದು. ಇಂದಿನ ಸೋಲು ನಾಳಿನ ಗೆಲುವಿಗೆ ದಾರಿ ಎಂದು ತಿಳಿದು ಇಂದು ಕಹಿ ಘಟನೆಯನ್ನು ಮರೆತುಬಿಡಿ. ಒಳ್ಳೆಯ ದಿನಗಳು ಕಾದಿವೆ.

ನಿಮ್ಮನ್ನು ಪ್ರೀತಿಸುವವರೊಂದಿಗೆ ಇಂದು ಹೆಚ್ಚಿನ ಸಮಯ ಕಳೆಯುವಿರಿ. ಗೆಳೆಯರೊಂದಿಗೆ ಮತ್ತು ಬಂಧುಗಳೊಂದಿಗೆ ವಿಶೇಷ ಮಾತುಕತೆ ನಡೆಸಿ ಅವರ ಮನಸ್ಸನ್ನು ಗೆಲ್ಲುವಿರಿ. ಅಲ್ಪ ಪ್ರವಾಸದ ಸಾಧ್ಯತೆ ಇರುವುದು.

 

 

ಅಸಂತೋಷ ನಿಮ್ಮನ್ನು ಕಾಡಲಿದೆ. ಧ್ಯಾನ, ಪೂಜೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಹಳೆಯ ಸ್ನೇಹಿತರನ್ನು ದೂರವಾಣಿ ಮೂಲಕ ಸಂಪರ್ಕಿಸುವಿರಿ. ಮುರುಟಿಹೋಗಿದ್ದ ಹಳೆಯ ಸ್ನೇಹ ಚಿಗುರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಪೂರ್ವ ನಿರ್ಧಾರಿತ ಪ್ರಯಾಣ ಆಕಸ್ಮಿಕವಾಗಿ ರದ್ದಾಗುವ ಸಾಧ್ಯತೆ. ಆತ್ಮೀಯರ ಆಗಮನ ಸಂತಸ ತರಲಿದೆ. ಕೌಟುಂಬಿಕ ಕಲಹಗಳು ಹಾಗೂ ಪರಿಸ್ಥಿತಿ ಕೆಲವೊಮ್ಮೆ ನಿಮ್ಮ ಕೈಮೀರಿ ಹೋಗುವ ಸಾಧ್ಯತೆ. ಆದಷ್ಟು ಮೌನ ವಹಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top