fbpx
ಸಮಾಚಾರ

ಇಡೀ ಪ್ರಪಂಚದಲ್ಲೇ ದೊಡ್ಡ ಕುಟುಂಬ ಇದು ,ಈ ಮನೆಯಲ್ಲಿ ಇರೋ ಸದಸ್ಯರ ಸಂಖ್ಯೆ ಗೊತ್ತಾದ್ರೆ ಖಂಡಿತಾ ಬೆಚ್ಚಿ ಬೀಳ್ತಿರಾ

ಇಡೀ ಪ್ರಪಂಚದಯೇ ಅತಿ ದೊಡ್ಡ ಕುಟುಂಬ ಈ ದೊಡ್ಮನೆ ಕುಟುಂಬ. ಈ ಮನೆಯಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಎಂದು ನಿಮಗೆ ಗೊತ್ತಾ ?
ನೀವು ಈ ಕುಟುಂಬದ ಬಗ್ಗೆ ಕೇಳಿದರೆ ಕಂಡಿತಾ ಆಶ್ಚರ್ಯಪಡುತ್ತೀರ ! ಇಡೀ ಕುಟುಂಬದವರನ್ನು ಒಂದು ಸಾರಿ ನೋಡಿ ಬಿಟ್ಟರೆ ಒಂದು ಕ್ಷಣ ಬಾಯಿಯ ಮೇಲೆ ಬೆರಳಿಟ್ಟು ನೋಡುತ್ತೀರಾ,ಈಗಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿ ಒಂದು ಮನೆಯಲ್ಲಿ 50 ಇಲ್ಲ ನೂರು ಜನರನ್ನು ಕಾಣಬಹುದು. ಆದರೆ ಈ ಕುಟುಂಬದಲ್ಲಿ ಬರೋಬ್ಬರಿ 500 ಜನ ಇದ್ದಾರೆ ಎಂದರೆ ನೀವೇ ನೋಡಿ.

 

 

 

ನೀವು ನಾವು ಯಾವುದೋ ಕಥೆ ಕಟ್ಟುತ್ತಿದ್ದೇವೆ ಎಂದು ಅನ್ನಿಸಿದರೆ ಇದು ಖಂಡಿತ ಇಲ್ಲ.ಇದು ನಿಜ ಸಂಗತಿಯೇ ಆಗಿದೆ. ಇಡೀ ಕುಟುಂಬದಲ್ಲಿ 500 ಜನ ಸದಸ್ಯರನ್ನು ಒಗ್ಗೂಡಿಸಿ ಫೋಟೋ ಶೂಟ್ ಮಾಡಿದ್ದಾನೆ ಜೀನ್ ಎಂಬ ವ್ಯಕ್ತಿ.500 ಜನರನ್ನು ಒಟ್ಟಿಗೆ ಸೇರಿಸಿ ಫೋಟೋಶೂಟ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಚಿಕ್ಕ ಮಕ್ಕಳಿಗಾದರೆ ಕೈ ಹಿಡಿದು ಎಳೆದುಕೊಂಡು ಬಂದು ಒಂದು ಕಡೆ ಕೂರಿಸಬಹುದು . ಆದರೆ ಬುದ್ಧಿ ಇರುವ ದೊಡ್ಡವರನ್ನು ನಿಭಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದು ನಡೆದಿರುವುದು ನಮ್ಮ ನೆರೆಯ ರಾಷ್ಟ್ರ ಚೀನಾ ದೇಶದಲ್ಲಿ.

ರೇನ್ ಎನ್ನುವ ಕುಟುಂಬ ಈ ಸಾಹಸಕ್ಕೆ ಕೈ ಹಾಕಿ ಗೆದ್ದಿದೆ. ರೇನ್ ತಾವುಂಜಿಯಾ ಎನ್ನುವ ವ್ಯಕ್ತಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಲು ಬರೋಬ್ಬರಿ ಎರಡು ವರ್ಷ ತೆಗೆದುಕೊಂಡಿದ್ದನಂತೆ. ಅಷ್ಟೇ ಅಲ್ಲ ಚೀನಾದ ಶೀಶಿ ಪ್ರಾಂತ್ಯದ ಬೆಟ್ಟದ ಮೇಲೆ 500 ಜನರನ್ನು ಫೋಟೋಗೆ ನೆರವಾಗುವಂತೆ ನಿಲ್ಲಿಸಲು 30 ನಿಮಿಷ ತೆಗೆದುಕೊಂಡಿದ್ದನಂತೆ.ಅಷ್ಟೇ ಅಲ್ಲ ಮುಂದಿನ ವರ್ಷಕ್ಕೆ ಈಗ ತಪ್ಪಿಸಿಕೊಂಡಿರುವವರನ್ನೆಲ್ಲ ಸೇರಿಸಿ ಸಾವಿರ ಕುಟುಂಬಸ್ಥರ ಜೊತೆ ಫೋಟೋಶೂಟ್ ಮಾಡುವ ಯೋಜನೆಯನ್ನು ಇಟ್ಟುಕೊಂಡಿದ್ದಾನಂತೆ. ಸತ್ತ ಮೇಲೆಯೂ ನಮ್ಮ ನೆನಪುಗಳು ಇರಬೇಕೆಂದು ಏಳು ತಲೆಮಾರಿನವರನ್ನು ಸೇರಿಸಿ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಈತನ ಸಾಧನೆಯನ್ನು ಮೆಚ್ಚಲೇಬೇಕು ಅಲ್ಲವೇ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top