fbpx
ಮನೋರಂಜನೆ

ಕಂದುಬಣ್ಣದವಳೆಂದು ನನ್ನ ಅವಮಾನಿಸಿದರು”,ಮರುಗಿದ ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಈಗ ವಯಸ್ಸು 40 ಆದರೂ ಕೂಡ ಇನ್ನೂ ಮಾಸದ ಸೌಂದರ್ಯ. ಒಂದು ಮಗುವಿನ ತಾಯಿಯಾದರೂ ಶಿಲ್ಪದಂತೆ ಹೊಳೆಯುವ ಅವರ ಅಭಿಮಾನಿಗಳಲ್ಲಿ ಎಳ್ಳಷ್ಟು ಕ್ರೇಜ್ ಕಡಿಮೆ ಆಗಿಲ್ಲ. ಶಿಲ್ಪಿ ಬಾಲಿವುಡ್ ಅಷ್ಟೇ ಅಲ್ಲದೆ ಕನ್ನಡ ಚಿತ್ರದಲ್ಲೂ ಅಭಿನಯ ಮಾಡಿ ಮಿಂಚಿದ್ದಾರೆ.ನಟಿ ಶಿಲ್ಪಾ ಶೆಟ್ಟಿ ತಮ್ಮ ಅಭಿನಯನದಿಂದ ಗಮನ ಸೆಳೆದಿರುವುದು ಮಾತ್ರವಲ್ಲ, ತಮ್ಮ ದೇಹ ಸೌಂದರ್ಯದಿಂದ ಈಗಲೂ ಎಲ್ಲರ ಅಚ್ಚುಮೆಚ್ಚು. ಬಾಲಿವುಡ್​ನ ಝೀರೋ ಫಿಗರ್​ ಅಂದ್ರೆ ತಕ್ಷಣ ನೆನಪಾಗೋದು ಶಿಲ್ಪಾ ಶೆಟ್ಟಿ. ಥೇಟ್​ ಮಂಗಳೂರಿನ ಮೀನಿನಂತೆಯೇ ಬಳಕುವ ಶಿಲ್ಪಾ, ಈಗಲೂ ಹಾಟ್​ ಬ್ಯೂಟಿಯೇ. ಇವರ ವಯಸ್ಸು 40 ದಾಟಿ, ಒಂದು ಮಗುವಿನ ತಾಯಿಯಾದ್ರು ಆಕೆ ಫಿಗರ್​​​ಗೆ ಇನ್ನೂ ಸುಕ್ಕು ಬಂದಿಲ್ಲ. ಈಗಲೂ ಫಿಟ್ ಆ್ಯಂಡ್ ಹಾಟ್ ಆಗಿರುವ ನಟಿ ಎಂದರೆ ಅದು ಶಿಲ್ಪಾ ಶೆಟ್ಟಿ. ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ 15 ವರ್ಷಗಳಿಂದ ನಿರಂತರ ಯೋಗ ಮಾಡುತ್ತ ಬಂದಿದ್ದಾರೆ ಅಲ್ಲದೆ ಈ ನಡುವೆ ಯೋಗ ಕುರಿತ ಅನೇಕ ಅಭಿಯಾನಗಳನ್ನೂ ಮಾಡಿ ಫುಲ್ ಸುದ್ದಿಯಲ್ಲಿ ಇದ್ದರು .

ಈಗ ಶಿಲ್ಪಾಶೆಟ್ಟಿ ಸುದ್ದಿಯಲ್ಲಿ ಇರುವುದು ಈ ಕಾರಣಕ್ಕೆ ,ಮುಖದ ಚರ್ಮದ ಕಲರ್ ನಿಂದ ನಿಂಧನೆಗೆ ಒಳಗಾಗುವುದು ಸಾಮಾನ್ಯ ಮನುಷ್ಯರು ಮಾತ್ರ ಅಲ್ಲ ಸೆಲೆಬ್ರಿಟಿಗಳು ಕೂಡ ಈ ಸಾಲಿಗೆ ಸೇರುತ್ತಾರೆ ,ಈ ಬಾರಿ ಆ ಲೈನ್ ನಲ್ಲಿ ಇರುವುದು ಶಿಲ್ಪಾ ಶೆಟ್ಟಿ,
ನಟಿ ಶಿಲ್ಪಾ ಶೆಟ್ಟಿ ತನಗಾದ ಬಣ್ಣದ ವಿಚಾರ ಅವಮಾನವನ್ನು ತಮ್ಮ ಇನ್ಸ್​ಟ್ರಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ,ಈ ನಡುವೆ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ತಮಗಾದ ಅವಮಾನವನ್ನು ವಿವರವಾಗಿ ಅಭಿಮಾನಿಗಳೊಂದಿಗೆ ಶೇರ್​ ಮಾಡಿಕೊಂಡಿದ್ದಾರೆ.ಅಷ್ಟಕ್ಕೂ ಅಲ್ಲಿ ನಡೆದಿದ್ದಾದ್ರೂ ಏನು ಗೊತ್ತಾ?ಸಿಡ್ನಿ ವಿಮಾನ ನಿಲ್ದಾಣದಿಂದ ಮೆಲ್ಬೋರ್ನ್​ಗೆ ತೆರಳ ಬೇಕಿದ್ದ ಶಿಲ್ಪಾಶೆಟ್ಟಿ ಚೆಕಿಂಗ್​ ಕೌಂಟರ್​ನ್ಲಲಿ ಸಿಬ್ಬಂಧಿಯಿಂದ ವರ್ಣ ನಿಂದನೆ ಅವಮಾನ ಅನುಭವಿಸಿದ್ದಾರಂತೆ ಈ ಬಗ್ಗೆ ಹೇಳಿರುವ ಶಿಲ್ಪ ಶೆಟ್ಟಿ ಚೆಕಿಂಗ್ ಕೌಂಟರ್ ನಲ್ಲಿ ಕಂದುಬಣ್ಣದವರ ಜೊತೆ ಮಾತನಾಡಲು ಅಡ್ಡಿಯಿಲ್ಲ ಎಂದು ಅಲ್ಲಿನ ಸಿಬ್ಬಂದಿ ಕರೆದಿದ್ದಾರೆಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ. ಆಗ ತಕ್ಷಣ ಸಿಬ್ಬಂದಿಯ ವರ್ತನೆಯಿಂದ ಸಿಟ್ಟಿಗೆದ್ದ ಶಿಲ್ಪಾಶೆಟ್ಟಿ ತಕ್ಷಣ ಏರ್ ಲೈನ್ ಗೆ ಕರೆಮಾಡಿ ದೂರು ನೀಡಿದ್ದಾರೆ.

 

 

 

ಶಿಲ್ಪಾ ಶೆಟ್ಟಿ ಈ ರೀತಿಯ ವರ್ಣದ ಬಣ್ಣದ ಕಾರಣ ಅವಮಾನ ಅನುಭವಿಸುತ್ತಿರುವುದು ಇದು ಮೊದಲ ಸಲ ಅಲ್ಲ ಹಿಂದೆ ರಿಯಾಲಿಟಿ ಷೋ ‘ಸೆಲೆಬ್ರಿಟಿ ಬಿಗ್ ಬ್ರದರ್’ ನಲ್ಲಿ ಕೂಡ ಅವರು ಇಂತಹ ಕಹಿ ಅನುಭವವನ್ನು ಅನುಭವಿಸಿದ್ದರು. ಇನ್ನೂ ಅನೇಕ ಸೆಲೆಬ್ರಿಟಿ ಗಳು ಕೂಡ ಈ ರೀತಿಯ ಅವಮಾನಗಳನ್ನು ಫೇಸ್ ಮಾಡಿದ್ದಾರೆ ಅದಕ್ಕೆ ಇನ್ನೊಂದು ಉದಾಹರಣೆ ನಟಿ ಪ್ರಿಯಾಂಕ ಚೋಪ್ರಾ.ಶಿಲ್ಪಾ ಶೆಟ್ಟಿಯ ಈ ಪೋಸ್ಟ್ ನೋಡಿದ ತಕ್ಷಣ ಅವರ ಅಭಿಮಾನಿಗಳು ಅವರ ಪರ ಮಾತನಾಡಿ ಸಮಾಧಾನ ಮಾಡಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top