ಸಮಾಚಾರ

ಕಾರು ಅಪಘಾತ- ಆಸ್ಪತ್ರೆಯಿಂದ ನಟ ದರ್ಶನ್‌ ಇಂದು ಡಿಸ್‌ಚಾರ್ಜ್‌?

ಕಾರು ಅಪಘಾತದಲ್ಲಿ ಕೈ ಮೂಳೆ ಮುರಿದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ​ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದಿರುವ ವಿಷಯವೆ. ಸದ್ಯ ದಚ್ಚು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರು ಸ್ಪೆಷಲ್ ವಾರ್ಡ್ ನಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಐದು ದಿನಗಳಿಂದಲೂ ದರ್ಶನ ಅವರೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು ಕೈಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್ ಹಾಕಲಾಗಿದೆ.

ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್?
ಅಪಘಾತದಿಂದಾಗಿ ಬಲಗೈ ಮುರಿತಕ್ಕೆ ಒಳಗಾಗಿರುವ ನಟ ದರ್ಶನ್​ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅವರಿಗೆ ಇನ್ನೂ ತಪಾಸಣೆ ನಡೆಯುತ್ತಿದ್ದು, ಇಂದು ಅವರ ಆರೋಗ್ಯದ ಸ್ಥಿತಿಯನ್ನು ನೋಡಿಕೊಂಡು ಅವರನ್ನು ಮನೆಗೆ ಕಳುಹಿಸುವ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.. ಇಂದು ಮದ್ಯಾಹ್ನದ ವೇಳೆಗೆ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಲಿದ್ದಾರೆ.

 

 

ದರ್ಶನ್ ಕೈಮೂಳೆ ಮುರಿದಿರುವುದರಿಂದ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಮೇಲೆಯೂ ಹೆಚ್ಚು ವಿಶ್ರಾಂತಿಯ ಅಗತ್ಯ ಇದೆ. ಕನಿಷ್ಠ ಅಂದರೂ ಮೂರು ವಾರಗಳ ಕಾಲ ಅವರು ಬೆಡ್ ರೆಸ್ಟ್ ಮಾಡಬೇಕಿದೆ.. ಈ ವೇಳೆ ಅವರು ಯಾವುದೇ ಸಿನಿಮಾ ಕೆಲಸಗಳಲ್ಲಿ ತೊಡಗುವಂತಿಲ್ಲ, ಯಾವುದೇ ಬಾರವಾದ ವಸ್ತುಗಳನ್ನ ಎತ್ತುವಂತಿಲ್ಲ ಎಂದು ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೈಗೆ ಹಾಕಲಾಗಿರುವ ಪ್ಲೇಟ್ ತೆಗೆಯಲು ಎರಡು ವರ್ಷ ಬೇಕಾಗಬಹುದು. ಆದರೆ ಅಲ್ಲಿವರೆಗೂ ದರ್ಶನ್ ಭಾರ ಎತ್ತುವಂತಿಲ್ಲ. ಅಲ್ಲದೇ ಒಂದು ವರ್ಷ ಜಿಮ್ ಮಾಡುವಂತಿಲ್ಲ ಮತ್ತು ಭಾರ ಎತ್ತುವಂತಿಲ್ಲ,, ಬಲಗೈಗೆ ಹೆಚ್ಚು ಕೆಲಸ ನೀಡುವಂತಿಲ್ಲ, ಹಾಗೆಯೆ ಜಿಮ್ ಮಾಡುವಂತಿಲ್ಲವಾದ್ದರಿಂದ ಕಟ್ಟುಮಸ್ತಾದ ದೇಹವನ್ನು ಉಳಿಸಿಕೊಳ್ಳುವುದು ಕೂಡ ಕಶ್ಟವಾಗಲಿದೆ. ಎಂದು ಆಸ್ಪತ್ರೆಯ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top