ಸಮಾಚಾರ

ನಲಪಾಡ್ ಇದ್ದ ಕೊಠಡಿಯಲ್ಲೇ ಇರುವ ದುನಿಯಾ ವಿಜಯ್.

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ವಾದ, ಪ್ರತಿವಾದ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಕೋರ್ಟ್ ಆದೇಶದಂತೆ ದುನಿಯಾ ವಿಜಯ್ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗಿದೆ.. ದುನಿಯಾ ವಿಜಿ ಸತತ ನಾಲ್ಕನೇ ದಿನ ಜೈಲಿನಲ್ಲೇ ಕಳೆದಿದ್ದಾರೆ.. ಇಂದು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಸಿಗುವ ಸಾಧ್ಯತೆಗಳಿವೆ.

 

 

ಹಲ್ಲೆ ನಡೆಸಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್‍ಗೆ ಜೈಲು ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.. ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಉಳಿದುಕೊಂಡಿದ್ದ ಆಸ್ಪತ್ರೆ ವಾರ್ಡ್‍ನಲ್ಲೇ ದುನಿಯಾ ವಿಜಯ್ ತಂಗಿದ್ದಾರೆ. ಖಾಲಿ ಇದ್ದ ಈ ವಾರ್ಡ್ ಅನ್ನು ಶುಚಿಗೊಳಿಸಿ ವಿಜಯ್ ಅವರಿಗೆ ವ್ಯವಸ್ಥೆ ಮಾಡಲಾಗಿದೆ. ಹೊರಗಡೆಯಿಂದ ಯಾರಿಗೂ ಕಾಣದಂತೆ ಸ್ಕ್ರೀನ್ ಹಾಕಲಾಗಿದೆ ಎನ್ನಲಾಗಿದೆ

ಏನಿದು ಘಟನೆ?
“ವಸಂತನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮಿ.ಬೆಂಗಳೂರು ದೇಹದಾರ್ಢ್ಯ ಸ್ಪರ್ಧೆ ಏರಪಟ್ಟಿತ್ತು. ಈ ಸ್ಪರ್ಧೆಯನ್ನು ನೋಡಲು ದುನಿಯಾ ವಿಜಿ ತಮ್ಮ ಸಹಚರರೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮಾತು ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ. ದುನಿಯಾ ವಿಜಯ್ ಮತ್ತು ಅವರ ಸಹಚರರು ಮಾರುತಿಗೌಡನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಹೇಳಲಾಗಿದೆ.. ಈ ಬಗ್ಗೆ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top