ಸಮಾಚಾರ

ದುನಿಯಾ ವಿಜಿಗೆ ಮತ್ತೊಂದು ಟೆನ್ಶನ್- ದುಡ್ಡು, ಚಿನ್ನ ದೋಚಿಕೊಂಡು 2ನೇ ಪತ್ನಿ ಕೀರ್ತಿ ಗೌಡ ಎಸ್ಕೇಪ್?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ವಾದ, ಪ್ರತಿವಾದ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಕೋರ್ಟ್ ಆದೇಶದಂತೆ ದುನಿಯಾ ವಿಜಯ್ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗಿದೆ.. ದುನಿಯಾ ವಿಜಿ ಸತತ ನಾಲ್ಕನೇ ದಿನ ಜೈಲಿನಲ್ಲೇ ಕಳೆದಿದ್ದಾರೆ.. ಇಂದು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಸಿಗುವ ಸಾಧ್ಯತೆಗಳಿವೆ.

ಇದರ ಬೆನ್ನಲ್ಲೇ ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ದುನಿಯಾ ವಿಜಯ್ ಎರಡನೇ ಪತ್ನಿ(?) ಕೀರ್ತಿ ಗೌಡ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿ ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಕೀರ್ತಿ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದುನಿಯಾ ವಿಜಯ್ ಬಂಧನದ ವೇಳೆ ಮಗ ಸಾಮ್ರಾಟ್ ವಿಜಯ್ ಕೀರ್ತಿ ಗೌಡ ಜೊತೆ ಇದ್ದಿದ್ದರಿಂದ ನಾಗರತ್ನ ಅವರು ಮಗನ ಬಗ್ಗೆ ವಿಚಾರಿಸಲು ಹೋದ ಸಂದರ್ಭದಲ್ಲಿ ಕೀರ್ತಿ ಗೌಡ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ ದೂರು ದಾಖಲಿಸಿದ್ದರು.

 

 

ಇದೀಗ ದುನಿಯಾ ವಿಜಯ್ ಅವರಿಗೆ ಮತ್ತೊಂದು ಟೆನ್ಶನ್ ಎದುರಾಗಿದ್ದು ಅವರ ಎರಡನೇ ಪತ್ನಿ ಕೀರ್ತಿ ಗೌಡ ಅವರು ಹಣ, ಚಿನ್ನದ ಒಡವೆಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ., ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರು ಕೀರ್ತಿ ಗೌಡ ವಿರುದ್ಧ ದೂರು ನೀಡಿದ ನಂತರ ಮನೆಯಲ್ಲಿದ್ದ ಒಂದು ಲಕ್ಷ ರೂ ಹಣ, ಚಿನ್ನದ ಒಡವೆಗಳನ್ನ ತೆಗೆದುಕೊಂಡು ಪರಾರಿಯಾಗಿದ್ದಾರಂತೆ.

ಸದ್ಯ ಕೀರ್ತಿ ಗೌಡ ಅವರು ಮೈಸೂರಿನ ಸಂಬಂಧಿಕರೊಬ್ಬರ ಮನೆಯಲ್ಲಿದ್ದಾರೇ ಎಂಬ ಮಾಹಿತಿ ಲಭ್ಯವಾಗಿದ್ದು ಘಟನೆಗಳಿಂದ ಬೇಸತ್ತು ಸಂಬಂಧಿಕರ ಮನೆಗೆ ಕೀರ್ತಿಗೌಡ ಹೋಗಿರುವುದ್ದಾರಂತೆ. ಇನ್ನು ವಿಜಯ್​ಗೆ ಜಾಮೀನು ಸಿಕ್ಕ ತಕ್ಷಣವೇ ಬೆಂಗಳೂರಿಗೆ ವಾಪಸ್ಸು ಬರುವುದಾಗಿ ಕೀರ್ತಿ ತಿಳಿಸಿದ್ದಾರೆ.. ಅದೇನೇ ಇದ್ದರೂ ಮನೆಯಲ್ಲಿದ್ದ ದುಡ್ಡ ,ಒಡವೆ ತೆಗೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು ಎಂಬುದು ವಿಜಿ ಕುಟುಂಬದ ಆರೋಪವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top