ಮನೋರಂಜನೆ

“ನಾನು ಎಲ್ಲಿಗೂ ಓಡಿಹೋಗಿಲ್ಲ,ತಾಯಿ ಮನೆಯಲ್ಲಿದ್ದೇನೆ” ಕೀರ್ತಿ ಗೌಡ ಸ್ಪಷ್ಟನೆ.

ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ದುನಿಯಾ ವಿಜಯ್ ಬಂಧಿತರಾದ ನಂತರ ಅವರ ಮೊದಲ ಪತ್ನಿ ನಾಗರತ್ನ ಅವರು ಕೀರ್ತಿ ಗೌಡ ವಿರುದ್ಧ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಆನಂತರ ಮನೆಯಲ್ಲಿದ್ದ ಒಂದು ಲಕ್ಷ ರೂ ಹಣ, ಚಿನ್ನದ ಒಡವೆಗಳನ್ನ ತೆಗೆದುಕೊಂಡು ಕೀರ್ತಿ ಗೌಡ ಪರಾರಿಯಾಗಿದ್ದಾರೇ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

“ನಾನು ಎಲ್ಲೂ ಹೋಗಿಲ್ಲ. ನಮ್ಮ ತಾಯಿ ಮನೆಯಲ್ಲೇ ಇದ್ದೇನೆ, ಸದ್ಯ ನನ್ನ ಗಂಡನ ಮನೆಯಲ್ಲಿ ನನಗೆ ಭದ್ರತೆ ಇಲ್ಲವಾದ್ದರಿಂದ ತಾಯಿ ಮನೆಯಲ್ಲಿರಲು ವಿಜಯ್ ಅವರೇ ಹೇಳಿದ್ದಾರೆ. ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆ ಮಾಧ್ಯಮಗಳೇ ಬೇಕಿದ್ದರೆ ಗಿರಿನಗರ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ನಡೆಸಲಿ. ನನ್ನ ಗಂಡ ಜೈಲಿನಿಂದ ಹೊರಬಂದ ಮೇಲೆ ಎಲ್ಲ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡುತ್ತೇವೆ” ಎಂದು ಕೀರ್ತಿ ಗೌಡ ಹೇಳಿದ್ದಾರೆ.

 

 

ಏನಿದು ಘಟನೆ:
ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ದುನಿಯಾ ವಿಜಯ್ ಬಂಧಿತರಾದ ಬೆನ್ನಲ್ಲೇ ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ದುನಿಯಾ ವಿಜಯ್ ಎರಡನೇ ಪತ್ನಿ(?) ಕೀರ್ತಿ ಗೌಡ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿ ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಕೀರ್ತಿ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದುನಿಯಾ ವಿಜಯ್ ಬಂಧನದ ವೇಳೆ ಮಗ ಸಾಮ್ರಾಟ್ ವಿಜಯ್ ಕೀರ್ತಿ ಗೌಡ ಜೊತೆ ಇದ್ದಿದ್ದರಿಂದ ನಾಗರತ್ನ ಅವರು ಮಗನ ಬಗ್ಗೆ ವಿಚಾರಿಸಲು ಹೋದ ಸಂದರ್ಭದಲ್ಲಿ ಕೀರ್ತಿ ಗೌಡ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ ದೂರು ದಾಖಲಿಸಿದ್ದರು.

ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರು ಕೀರ್ತಿ ಗೌಡ ವಿರುದ್ಧ ದೂರು ನೀಡಿದ ನಂತರ ಮನೆಯಲ್ಲಿದ್ದ ಒಂದು ಲಕ್ಷ ರೂ ಹಣ, ಚಿನ್ನದ ಒಡವೆಗಳನ್ನ ತೆಗೆದುಕೊಂಡು ಪರಾರಿಯಾಗಿದ್ದಾರೇ ಎಂಬ ಆರೋಪಗಳು ಕೇಳಿಬಂದಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top