fbpx
ಭವಿಷ್ಯ

29 ಸೆಪ್ಟೆಂಬರ್ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೨೯ ಸೆಪ್ಟೆಂಬರ್ ೨೦೧೮
ಸೂರ್ಯೋದಯ : ೦೬:೩೨
ಸೂರ್ಯಾಸ್ತ : ೧೮:೨೪
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಭಾದ್ರಪದ

ಪಕ್ಷ : ಕೃಷ್ಣ ಪಕ್ಷ
ತಿಥಿ : ಚೌತಿ – ೦೮:೦೩ ವರೆಗೆ
ನಕ್ಷತ್ರ : ಕೃತ್ತಿಕ – ೨೬:೧೪+ ವರೆಗೆ
ಯೋಗ : ವಜ್ರ – ೨೨:೦೪ ವರೆಗೆ
ಸೂರ್ಯ ರಾಶಿ : ಕನ್ಯಾ

ಅಭಿಜಿತ್ ಮುಹುರ್ತ:೧೨:೦೪ – ೧೨:೫೨
ಅಮೃತಕಾಲ: ೨೩:೫೨ – ೨೫:೨೭+
ರಾಹು ಕಾಲ:೦೯:೩೦ – ೧೦:೫೯
ಗುಳಿಕ ಕಾಲ:೦೬:೩೨ – ೦೮:೦೧
ಯಮಗಂಡ:೧೩:೫೭ – ೧೫:೨೬

ಇಂದು ಮನಸ್ಸಿನಲ್ಲಿ ಹೇಳಲಾಗದ ಗೊಂದಲಗಳು ಮೂಡುವವು. ಯಾವುದೇ ಒಳ್ಳೆಯ ನಿರ್ಧಾರಗಳನ್ನು ತಳೆಯಲು ಆಗುವುದಿಲ್ಲ. ಹಾಗಾಗಿ ಮಹತ್ತರ ಯೋಜನೆಗಳನ್ನು ಮುಂದೂಡುವುದು ಒಳ್ಳೆಯದು.

ಯಾವುದೇ ಋಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳ್ಳೆಯದು. ನಿಮ್ಮ ಆಂತರ್ಯವನ್ನು ಅರಿಯದ ಕೆಲವರು ನಿಮ್ಮ ಬಗ್ಗೆ ಇಲ್ಲಸಲ್ಲದ ಅಪವಾದ ಮಾಡುವರು. ಆಂಜನೇಯ ಸ್ತೋತ್ರ ಪಠಿಸಿ.

ನಿಮ್ಮನ್ನು ಇಂದು ಹಳೆಯ ಸ್ನೇಹಿತರು ಭೇಟಿಯಾಗುವ ಸಂದರ್ಭವಿದ್ದು ಖರ್ಚು-ವೆಚ್ಚಗಳು ನಿಮ್ಮ ಹೆಗಲೇರುವ ಸಾಧ್ಯತೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳಿತು. ಪ್ರಯಾಣದಲ್ಲಿ ಎಚ್ಚರ.

ಬದುಕಿನ ಹಳಿ ಸರಿಯಾಗಿದೆ. ಸರಿಯಾದ ದಾರಿಯಲ್ಲಿಯೇ ಸಾಗುತ್ತಿದ್ದೀರಿ. ಇಂತಹ ಸನ್ನಿವೇಶಗಳಲ್ಲಿ ಕೆಲವು ಸಲ ಮೈಮರೆಯುವುದರಿಂದ ಅಪಾಯಗಳು ಎದುರಾಗುವುದು. ಬದುಕಿನ ಹಳಿ ತಪ್ಪದಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಿರಿ.

 

ಆತ್ಮವಿಶ್ವಾಸ ನಿಮ್ಮ ಕೈಹಿಡಿಯಲಿದೆ. ಆಹಾರ-ವಿಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಸಾಧಿಸುವರು. ಆರ್ಥಿಕ ಸ್ಥಿತಿಯು ಕ್ರಮೇಣ ಸುಧಾರಣೆ ಆಗುವುದು.

 

ಬಂಧುಗಳು, ಸ್ನೇಹಿತರು ಹೇಳುವ ಎಲ್ಲಾ ಮಾತುಗಳನ್ನು ನಂಬುವುದು ಒಳ್ಳೆಯದಲ್ಲ. ಪರಾವಲಂಬಿಗಳಾಗದೆ ಸ್ವತಂತ್ರವಾಗಿ ಚಿಂತಿಸಿ ಕಾರ್ಯ ಪ್ರವತ್ತರಾಗಿರಿ. ಕಚೇರಿ ಕಾರ್ಯಾಲಯಗಳಲ್ಲಿ

 

ಜೀವನವೇ ಒಂದು ನಾಟಕರಂಗ. ಹಾಗಾಗಿ ಭಗವಂತನ ಅಣತಿಯಂತೆ ನಾವು ವರ್ತಿಸಬೇಕಿದೆ. ಆದರೆ ದೇವರ ನ್ಯಾಯ ತೀರ್ಮಾನದಲ್ಲಿ ಎಂದು ವ್ಯತ್ಯಾಸವಾಗುವುದಿಲ್ಲ. ಹಾಗಾಗಿ ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ.

 

ಆರೋಗ್ಯ ಉತ್ತಮವಾಗಿದೆ. ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಬಂಧುಮಿತ್ರರು ಪ್ರೀತಿಯಿಂದ ಕಾಣುವರು. ಮನೆಯಲ್ಲಿ ಮಂಗಳ ಕಾರ್ಯಗಳ ಮಾತುಕತೆ ಆಗುವುದು.

 

ಒಂದು ಹೆಜ್ಜೆ ಮುಂದಿಟ್ಟು ಪ್ರಗತಿ ಆಗುತ್ತದೆ ಎನ್ನುವಷ್ಟರಲ್ಲಿಯೇ ಎರಡು ಹೆಜ್ಜೆ ಹಿಂದಕ್ಕೆ ಜಾರುವಿರಿ. ಹಾಗಂತ ಪ್ರಯತ್ನವನ್ನೇ ಮಾಡದಿರುವುದು ಒಳ್ಳೆಯದಲ್ಲ. ನಿಮ್ಮ ಕಾರ್ಯ ಯೋಜನೆಗೆ ಜಯ ಸಿಗುವುದು.

ಇಚ್ಛೆ ಇದ್ದಲ್ಲಿ ಕಷ್ಟ ಇರಲಾರದು. ಅಂತೆಯೇ ಮಾಡುವ ಕಾರ್ಯಕ್ಷೇತ್ರದಲ್ಲಿ ಆಸಕ್ತಿಯಿಂದ ಕೆಲಸ ಮಾಡಿದರೆ ಆಯಾಸ ಕಾಣಿಸಿಕೊಳ್ಳುವುದಿಲ್ಲ. ಕೌಟುಂಬಿಕವಾಗಿ ಸಂತೋಷದ ದಿನ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

 

ನಿಮ್ಮ ಸುತ್ತಮುತ್ತ ಇರುವವರ ಬಗ್ಗೆ ಕೊಂಚ ಗಮನವಿರಲಿ. ನಿಮ್ಮ ಮುಂದೆ ನಿಮ್ಮ ಪರವಾಗಿಯೇ ಮಾತನಾಡುವ ಅವರು ಹೊರಗೆ ನಿಮ್ಮ ವಿರುದ್ಧ ಕಾರ್ಯತಂತ್ರ ರೂಪಿಸುವರು. ಕುಲದೇವತಾ ಪ್ರಾರ್ಥನೆ ಮಾಡುವುದರಿಂದ ಒಳಿತಾಗುವುದು.

ಸಂತಸದ ವಾತಾವರಣ. ಕುಟುಂಬದ ಸದಸ್ಯರ ನಡುವೆ ಪ್ರೀತಿ-ಪ್ರೇಮ ವಿಶ್ವಾಸಗಳು ಅಭಿವೃದ್ಧಿಯನ್ನುಂಟು ಮಾಡುವವು. ನೆರೆಮನೆಯವರೊಂದಿಗೆ ಇದ್ದ ಭಿನ್ನಾಭಿಪ್ರಾಯ ಕಡಿಮೆಯಾಗುವುದು. ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top