ಮನೋರಂಜನೆ

ಇವತ್ತೂ ಸಿಗಲಿಲ್ಲ ಜಾಮೀನು- ದುನಿಯಾ ವಿಜಯ್​ಗೆ ಮತ್ತೆ ಜೈಲೇ ಗತಿ.

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಸೋಮವಾರಕ್ಕೆ ತೀರ್ಪನ್ನು ಮುಂದೂಡಿದೆ. ಹಾಗಾಗೇ ಇನ್ನೂ ಎರಡು ದಿನ ದುನಿಯಾ ವಿಜಿ ಜೈಲಿನಲ್ಲೇ ಉಳಿಯಬೇಕಾಗಿದೆ.

ದುನಿಯಾ ವಿಜಯ್ ಪರ ವಾದ ಮಾಡಿದ ಅವರ ವಕೀಲ ಶ್ರೀನಿವಾಸ್​, “ಮಾರುತಿಗೌಡ ಅವರ ಆರೋಗ್ಯ ಬೇಗನೇ ಸುಧಾರಿಸಿದೆ. ವಿಜಯ್​ ಅವರನ್ನು ಉದ್ದೇಶಪೂರ್ವಕವಾಗಿದೆ ಸೆಕ್ಷನ್​326ರಲ್ಲಿ ಸೇರಿಸಲಾಗಿದೆ. ಹಾಗಾಗಿ ವಿಜಯ್ ಅವರಿಗೆ ಜಾಮೀನು ನೀಡಬೇಕು ಎಂದು ವಾದಿಸಿದರು. ಈ ಬಗ್ಗೆ 70ನೇ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶರು ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿ, ಅ.1ರಂದು ಅರ್ಜಿ ಮುಂದೂಡಿ ಆದೇಶ ನೀಡಿದರು.ಜಾಮೀನು ಅರ್ಜಿ ಬಗ್ಗೆ ನ್ಯಾ.ಟಿ.ಪಿ.ರಾಮಲಿಂಗೇಗೌಡ ಸೋಮವಾರ ಆದೇಶ ಹೊರಡಿಸಲಿದ್ದಾರೆ.

 

 

ಏನಿದು ಘಟನೆ?
“ವಸಂತನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮಿ.ಬೆಂಗಳೂರು ದೇಹದಾರ್ಢ್ಯ ಸ್ಪರ್ಧೆ ಏರಪಟ್ಟಿತ್ತು. ಈ ಸ್ಪರ್ಧೆಯನ್ನು ನೋಡಲು ದುನಿಯಾ ವಿಜಿ ತಮ್ಮ ಸಹಚರರೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮಾತು ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ. ದುನಿಯಾ ವಿಜಯ್ ಮತ್ತು ಅವರ ಸಹಚರರು ಮಾರುತಿಗೌಡನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಹೇಳಲಾಗಿದೆ.. ಈ ಬಗ್ಗೆ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿದ್ದರು.

ನಂತರ ದುನಿಯಾ ವಿಜಯ್ ಸೆಪ್ಟೆಂಬರ್26ಕ್ಕೆ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು. ಬಳಿಕ, ಸೆಷನ್ಸ್​ ಕೋರ್ಟ್​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top