ದೇವರು

ಪಿತೃಪಕ್ಷದಲ್ಲಿ ನಿಮ್ಮ ಮನೆಯಲ್ಲಿರುವ ಹೆಣ್ಮಕ್ಳಯಿಗೆ ತಪ್ಪದೆ ಹೀಗೆ ಮಾಡಿ ಆಗ ಲಕ್ಷ್ಮಿ ನಿಮ್ಮ ಮನೆಗೆ ಹುಡುಕಿಕೊಂಡು ಬರುತ್ತಾಳಂತೆ.

ಈಗ ಕೃಷ್ಣ ಪಕ್ಷದಲ್ಲಿ ಪಿತೃಪಕ್ಷ ಪ್ರಾರಂಭವಾಗಿದೆ. ನಿಮ್ಮ ಮನೆಯಲ್ಲಿದ್ದು ನಿಮ್ಮನ್ನು ಅಗಲಿದ ಪ್ರತಿಯೊಬ್ಬ ಹಿರಿಯರ ಆತ್ಮಕ್ಕೆ ಶಾಂತಿ ನೀಡಿ ಅವರನ್ನು ತೃಪ್ತಿಗೊಳಿಸುವ ಕಾರ್ಯವನ್ನು ಹಿರಿಯರಾದವರು ಮಾಡುತ್ತಾರೆ.ಪಿತೃಗಳಿಗೆ ಪಿಂಡ ದಾನ, ಅರ್ಪಣ, ತರ್ಪಣ, ಶ್ರಾದ್ಧ ಮಾಡುವ ಪದ್ಧತಿ ಕೂಡಾ ಹಿಂದೂ ಧರ್ಮದಲ್ಲಿದೆ. ಆತ್ಮಗಳಿಗೆ ಶಾಂತಿ ನೀಡುವ ಸಲುವಾಗಿ ಶ್ರಾದ್ಧ ಮಾಡುವುದು.ಇದು ಒಂದೇ ಈ ಪಿತೃಪಕ್ಷದ ವಿಶೇಷವಲ್ಲ.

 

 

 

ಪಿತೃ ಪಕ್ಷದಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ಕೂಡ ಮಾಡಿದರೆ ಒಳ್ಳೆಯದು. ಮಹಾಲಕ್ಷ್ಮಿ ಸಂತೋಷಗೊಂಡರು ಮನೆಯ ಆರ್ಥಿಕ ಪರಿಸ್ಥಿತಿಯು ಕೂಡ ಸುಧಾರಿಸುತ್ತದೆ. ಪಿತೃ ಪಕ್ಷದಲ್ಲಿ ಮಹಾಲಕ್ಷ್ಮಿ ಆಶೀರ್ವಾದ ಪಡೆಯುವುದು ಬಹಳ ಮುಖ್ಯವಾದ ಸಂಗತಿವೈಯಾಗಿದೆ.
ಮನೆಯ ಮಗಳನ್ನು ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹೆಣ್ಣು ಮಗು ಜನಿಸಿದರೆ ನಮ್ಮ ಮನೆಗೆ ಮಹಾಲಕ್ಷ್ಮಿ ಬಂದಳು ಎನ್ನುತ್ತಾರೆ. ಇಂದೂ ಧರ್ಮದ ಪ್ರಕಾರ ಮನೆಯಲ್ಲಿರುವ ಮಗಳಿಗೆ ವಾರದ ಪ್ರತಿಯೊಂದು ದಿನವೂ ವಿಶೇಷ ಭೋಜನ ಮಾಡಿಸುವುದರಿಂದ ಮಹಾಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳಂತೆ.
ಸೋಮವಾರ ಅಕ್ಕಿ ಪಾಯಸ ಮಾಡಿದರೆ ಒಳ್ಳೆಯದು. ಮಂಗಳವಾರ ಜಹಾಂಗೀರ್ ತಿನ್ನಲು ನೀಡಬೇಕು. ಬುಧವಾರ ಸಬ್ಬಕ್ಕಿ ಪಾಯಸ ಮಾಡಿ ಬಡಿಸಬೇಕು. ಗುರುವಾರ ಕಡಲೆಹಿಟ್ಟಿನ ಹಲ್ವಾ ಮಾಡಿ ಕೊಡಬೇಕು. ಶುಕ್ರವಾರ ಪಾಯಸ ಮಾಡಿ ಬಡಿಸುವುದು ಒಳ್ಳೆಯದು. ಶನಿವಾರ ಬಾದಾಮಿ ಹಲ್ವಾ ಮಾಡಿ ತಿನ್ನಿಸಬೇಕು. ಭಾನುವಾರ ಜೇನುತುಪ್ಪ ಬಳಸಿ ಮಾಡಿದ ಆಹಾರವನ್ನು ನೀಡಬೇಕು.

ಒಂದು ವೇಳೆ ಮನೆಯಲ್ಲಿ ಯಾವುದೇ ಹೆಣ್ಣುಮಗಳು ಇಲ್ಲವೆಂದರೆ ವಿವಾಹಿತ ಬ್ರಾಹ್ಮಣ ಮಹಿಳೆಗೆ ಕಲಶ,ಹೂ, ಸುಗಂಧ ,ಸಕ್ಕರೆ, ತುಪ್ಪ ದಾನ ಮಾಡಿ. ಇಲ್ಲವಾದರೆ ಯಾವುದಾದರೂ ಕನ್ಯೆಗೆ ತೆಂಗಿನ ಕಾಯಿ ಹಾಗೂ ಸಕ್ಕರೆ ನೀಡಿದರೆ ಸಾಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top