fbpx
ದೇವರು

ಒಳ್ಳೆಯ ಫಲ ಸಿಗಬೇಕು ಅಂದ್ರೆ ಪಿತೃ ಪಕ್ಷದ ಆಚರಣೆ ಹೇಗೆ ಮಾಡ್ಬೇಕು ಹಾಗೂ ಸಂಪ್ರದಾಯದ ಬಗ್ಗೆ ತಪ್ಪದೆ ತಿಳ್ಕೊಳ್ಳಿ

ಪಿತೃ ಪಕ್ಷದ ಆಚರಣೆಯ ಮಹತ್ವ ಮತ್ತು ಇದರ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತೇ ?
ಪಿತೃಪಕ್ಷ ಆಚರಣೆ ಮಾಡುವುದು ಕೆಲವು ಸಂಸ್ಕಾರಗಳಲ್ಲಿ ಇದೆ. ಇನ್ನು ಕೆಲವು ಸಂಸ್ಕಾರಗಳಲ್ಲಿ ಇಲ್ಲ. ಅವರದ್ದೇ ಆದಂತಹ ರೀತಿಯಲ್ಲಿ ಅವರದ್ದೇ ಆದಂತಹ ಸಂಸ್ಕಾರದಲ್ಲಿ ಆಚರಣೆ ಮಾಡುತ್ತಾರೆ. ಪಿತೃ ಪಕ್ಷವನ್ನು ಆಚರಿಸದೇ ಇದ್ದರೆ ಪಿತೃಗಳ ಶಾಪಕ್ಕೆ ಗುರಿಯಾಗುತ್ತೇವೆ. ತಂದೆ-ತಾಯಿಯರು ಬದುಕಿದ್ದಾಗ ನೀವು ಸರಿಯಾಗಿ ನೋಡಿಕೊಳ್ಳದೆ ಹೋದರೆ ನೀವು ಯಾವ ಪೂಜೆಯನ್ನು ಮಾಡಿದರು ಅಷ್ಟೇ ಏನೂ ಪ್ರಯೋಜನವಿಲ್ಲ. ಇದ್ದಾಗ ತಂದೆ ತಾಯಿಗಳಿಗೆ ಅನ್ನ ಹಾಕುವುದಿಲ್ಲ, ಪ್ರೀತಿಯಿಂದ ನೋಡಿಕೊಳ್ಳುವುದಿಲ್ಲ, ಅವರ ಆಸೆಗಳನ್ನು ಪೂರೈಸುವುದಿಲ್ಲ, ಈ ರೀತಿ ಬರೀ ಗೋಳನ್ನು ನೀಡಿ, ನೋವಿನಲ್ಲಿ ಅವರನ್ನು ಸತಾಯಿಸುವಂತವರು, ಈಗ ಅವರು ನಮ್ಮನ್ನು ಅಗಲಿದ ನಂತರ ಹೋಗಿ ಎಳ್ಳು, ನೀರು ಬಿಟ್ಟರೆ ಆ ಭಗವಂತ ಒಪ್ಪುವುದಿಲ್ಲ. ಕರ್ಮ ಫಲವನ್ನು ಅನುಭವಿಸಲೇಬೇಕು.

ನೀವು ಒಂದು ದಿನ ನಾಳೆ ಮಕ್ಕಳಿಂದ ನೋವನ್ನು ಅನುಭವಿಸುತ್ತೀರ. ಇಂದು ನೀವು ಮಕ್ಕಳಿಂದ ನೋವನ್ನು ಅನುಭವಿಸುತ್ತಿದ್ದೀರ ಎಂದರೆ ನೀವು ಕೂಡ ಹಿಂದೆ ಯಾವತ್ತೋ ನೀವು ಮಕ್ಕಳಾಗಿದ್ದಾಗ ನಿಮ್ಮ ತಂದೆ ತಾಯಿಯರಿಗೆ ಅದೇ ನೋವನ್ನು ಕೊಟ್ಟಿರುವುದರಿಂದಲೇ ಅದೇ ರೀತಿಯ ನೋವು ನಿಮ್ಮ ಮಕ್ಕಳಿಂದ ನಿಮಗೂ ಕೂಡ ಆಗುತ್ತಿದ್ದರೆ, ಸಂಕಟ ಅನುಭವಿಸುತ್ತಿದ್ದೀರ, ಸಾಮಾನ್ಯವಾಗಿ ಇವೆಲ್ಲವೂ ಕೂಡ ಇದೆ , ಕರ್ಮಫಲ ಎನ್ನುವುದು ಇದೆ, ಬೇರೆಯವರಿಗೆ ನಾವು ಯಾವ ಬಗ್ಗೆ ಯಾವ ಆಲೋಚನೆಯನ್ನು ಮಾಡುತ್ತೀರೋ ? ಬೇರೆಯವರ ಬಗ್ಗೆ ಯಾವ ರೀತಿಯ ಆಲೋಚನೆಗಳನ್ನು ಇಟ್ಟುಕೊಂಡಿರುತ್ತೀವೋ,ಯಾವ ರೀತಿಯ ಕೆಡುಕನ್ನು ಮಾಡಿರುತ್ತೇವೆಯೋ, ಅಪವಾದಗಳನ್ನು, ಅಪ ನಿಂದನೆಗಳನ್ನು ಅಥವಾ ಇಲ್ಲದ ಅಪಪ್ರಚಾರ ಇದೆಲ್ಲವೂ ಕೂಡ ಇರುತ್ತದೆ.ಇಂತಹ ಕೆಟ್ಟ ಕಾರ್ಯಗಳನ್ನು ಮಾಡಿದರೆ ಅದು ನಿಮಗೆ ತಿರುಗಿ ಬರುತ್ತದೆ. ಹಾಗಾಗಿ ಗುರುವಿನ ಮಾರ್ಗದಲ್ಲಿ ನಡೆಯಬೇಕು. ಸರಿಯಾದ ಗುರು ಎನ್ನುವವರು ನಿಮಗೆ ಇದ್ದರೆ ಆ ಸರಿಯಾದ ಮಾರ್ಗವನ್ನು ಹಿಡಿದು ಸರಿಯಾದ ಮಾರ್ಗದಲ್ಲಿ ನಡೆದು ಮೋಕ್ಷವನ್ನು ಹೊಂದುವುದಕ್ಕೆ ಸಹಾಯವಾಗುತ್ತದೆ. ಇದರ ಜೊತೆಗೆ ನೆಮ್ಮದಿಯಾದಂತಹ ಜೀವನ ಸಾಗಿಸುವುದಕ್ಕೆ, ಬಹಳ ಮುಖ್ಯವಾಗಿ, ಸರಿಯಾದ ರೀತಿಯಲ್ಲಿ ಗುರುವನ್ನು ಆರಾಧನೆ ಮಾಡಿ, ಗುರುವಿನ ಮಾರ್ಗದರ್ಶನದಲ್ಲಿ, ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತಾ ಹೋದ ಪಕ್ಷದಲ್ಲಿ ಮುಂದೆ ಯಾವತ್ತೂ ಬರುವಂತಹ ಅನಿಷ್ಟಗಳು ಇವತ್ತೇ ತೊಲಗಿ ಹೋಗುತ್ತದೆ. ಇಲ್ಲವೆಂದರೆ ನೀವು ಏನೇ ಮಾಡಿದರೂ ? ಎಷ್ಟೇ ಪೂಜೆ ಆಚರಣೆ ಮಾಡಿದರು ಕರ್ಮಫಲವನ್ನು ಅನುಭವಿಸಲೇಬೇಕು.

 

 

 

ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಬಾಳೆ ಎಲೆಗಳಲ್ಲಿಯೇ ಕಾಗೆಗಳಿಗೆ ಊಟವನ್ನು ಪಿತೃಪಕ್ಷದಲ್ಲಿ ಹಾಕುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ನಮ್ಮ ಇಂದೂ ಸಂಸ್ಕೃತಿಯಲ್ಲಿ ನಡೆಯುವ ಹಲವಾರು ಆಚರಣೆಗಳು ಮತ್ತು ಪದ್ಧತಿಗಳು ತಮ್ಮದೇ ಆದ ಐತಿಹಾಸಿಕ ಪ್ರಾಮುಖ್ಯತೆಯನ್ನು ಒಳಗೊಂಡಿದ್ದು, ಇದರ ಆಚರಣೆಯನ್ನು ನಾವು ಚಾಚೂ ತಪ್ಪದೇ ಮಾಡಬೇಕಾಗುತ್ತದೆ. ಹಬ್ಬವಿರಲಿ ಅಥವಾ ಮನೆಯಲ್ಲಿ ನಡೆಯುವ ಅತಿಥಿಗಳಿರಲಿ ಇದರ ಆಚರಣೆಯನ್ನು ಮನೆಯವರು ನಡೆಸಲೇಬೇಕಾಗುತ್ತದೆ. ನಮ್ಮ ಜೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಈ ಆಚರಣೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.ಇಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಈ ಪದ್ಧತಿಗಳನ್ನು ನಿರ್ದಿಷ್ಟ ದಿನದಲ್ಲಿ ಅನುಸರಿಸಲಾಗುತ್ತದೆ. ಇಲ್ಲದಿದ್ದರೆ ಹಬ್ಬಗಳು, ಇಲ್ಲವೇ ತಿಂಗಳ ನಿರ್ದಿಷ್ಟ ಮಾಸ ತಿಥಿಗಳಂತೆ ಆಚರಿಸಲಾಗುತ್ತದೆ.
ಈ ತಿಥಿ ಎಂಬುದು ತಿಂಗಳು, ದಿನಗಳಿಗೆ ಇರುವ ಭಾರತೀಯ ಹೆಸರಾಗಿದೆ. ಈ ಪಿತೃಪಕ್ಷ ಆಚರಣೆಯ ಮುಖ್ಯ ಉದ್ದೇಶ ಸಮಾಧಾನಕರ ಮತ್ತು ಸುಖಮಯ ಜೀವನವನ್ನು ನಡೆಸುವುದಾಗಿದೆ. ಮಗುವಿನ ಜನನದಿಂದ ಹಿಡಿದು ಕೊನೆಯವರೆಗೂ ಒಂದಲ್ಲ ಒಂದು ಆಚರಣೆಗಳು , ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಮರಣ ಸಮಯದಲ್ಲಿ ಇನ್ನೂ ಕೆಲವು ಮರಣದ ನಂತರವೂ ಕೂಡ ನಡೆಯುತ್ತವೆ.

 

ಪಿತೃ ಪಕ್ಷದಲ್ಲಿ ಸ್ಥಿತಿಯನ್ನು ಮಾಡುವುದರ ಅರ್ಥವೇನು ? ಎಂದರೆ ಕೆಲವು ಆಚರಣೆಗಳು ಒಟ್ಟಾಗಿ ವಾಸಿಸುವ ಸಮುದಾಯಗಳ ನಡುವೆ ಪ್ರೀತಿಯನ್ನು ಸಜ್ಜುಗೊಳಿಸುವ ಉದ್ದೇಶದಿಂದ ಹಾಗೂ ಇತರರು ಭಕ್ತರ ಆಶೀರ್ವಾದ ಪಡೆಯಲು ಮತ್ತು ಜೀವನದಿಂದ ಕೆಲವು ಸಮಸ್ಯೆಗಳನ್ನು ತೆಗೆದುಹಾಕಲು ಅನುಸರಿಸುವ ಉದ್ದೇಶವನ್ನು ಹೊಂದಿದ್ದಾರೆ.
ಶ್ರದ್ಧಾ ಅಥವಾ ಪಿತೃಪಕ್ಷದಲ್ಲಿ ತಿಥಿಯನ್ನು ಮಾಡುವುದು ನಮ್ಮ ಪೂರ್ವಿಕರಿಗೆ ಸಮಾಧಾನವನ್ನು ಉಂಟುಮಾಡುವ ಪ್ರಕ್ರಿಯೆಯಾಗಿದೆ. ಅವರು ಅತೃಪ್ತಿಯಿಂದ ಮರಣ ಹೊಂದಿದ್ದಲ್ಲಿ, ಅವರ ಹೆಸರಿನಲ್ಲಿ ತಿಥಿಯನ್ನು ಮಾಡಿ ಇಷ್ಟದ ಖಾದ್ಯವನ್ನು ತಯಾರಿಸಿ ಅದನ್ನು ಬಾಳೆ ಎಲೆಯಲ್ಲಿ ಊಟ ಮಾಡಿಸಲಾಗುತ್ತದೆ.
ಕಾಗೆ ಬಂದು ಆಹಾರ ತಿಂದಲ್ಲಿ ಅವರಿಗೆ ನಾವು ಮಾಡಿರುವುದು ತೃಪ್ತಿಯಾಗಿದೆ ಎಂದರ್ಥ. ಈ ಸಂದರ್ಭದಲ್ಲಿ ಪೂಜೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಇಂದೂಗಳು ಪಿತೃ ಪಕ್ಷದಂದು ತಿಥಿ ಮಾಡುವುದು ಸರ್ವೇ ಸಾಮಾನ್ಯವಾಗಿದ್ದು, ಮನೆಯಲ್ಲಿ ಇಲ್ಲವೇ ಕೆಲವೊಂದು ಧಾರ್ಮಿಕ ಸ್ಥಾನಗಳಲ್ಲಿ ಇದನ್ನು ನೆರವೇರಿಸಲಾಗುತ್ತದೆ.

ಕಾಗೆ ಬಂದು ಆಹಾರ ತಿನ್ನಬೇಕು ಕಾಗೆ ಬಂದು ಆಹಾರ ಸ್ವೀಕರಿಸಿದ್ದಲ್ಲಿ ನಾವು ಮಾಡಿರುವದು ತೃಪ್ತಿಯಾಗಿದೆ ಎಂದರ್ಥ. ಈ ಸಂದರ್ಭದಲ್ಲಿ ಪೂಜೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಇಂದೂಗಳು ಪಿತೃ ಪಕ್ಷದಂದು ತಿಥಿ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಮನೆಯಲ್ಲಿ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಇದನ್ನು ನೆರವೇರಿಸಲಾಗುತ್ತದೆ.

ಶ್ರಾದ್ಧ ಅಥವಾ ಪಿತೃಪಕ್ಷದ ಮಹತ್ವವೇನು.
ಶ್ರಾದ್ಧ ಅಥವಾ ಪಿತೃಪಕ್ಷ ಈ ಸಮಯದಲ್ಲಿ ತಮ್ಮ ಹಿರಿಯರಿಗೆ ಪ್ರಾರ್ಥನೆಗಳ ಮೂಲಕ ಗೌರವವನ್ನು ಮತ್ತು ತರ್ಪಣಗಳನ್ನು ನೀಡಬೇಕು. ಹಿರಿಯರು ಮರಣ ಹೊಂದಿದ ನಂತರ ಪಿತೃ ಲೋಕವನ್ನು ಸೇರುತ್ತಾರೆ ಎಂದು ಹೇಳಲಾಗುತ್ತದೆ. ತಮಗೆ ತಾವೇ ಆಹಾರ ಸೇವಿಸಲು ಆಗದಿದ್ದರಿಂದ ಅವರ ಮಕ್ಕಳು ಭೂಮಿಯಲ್ಲಿದ್ದುಕೊಂಡು ಅವರ ಕಾರ್ಯಗಳನ್ನು ಮಾಡಬೇಕು, ಎಂಬುದು ಮಂಗಳಕರವಾಗಿದೆ ಆದ್ದರಿಂದಲೇ ಈ ಆಚರಣೆಗಳನ್ನು ಪದ್ಧತಿಗಳನ್ನು ನಡೆಸಲಾಗುತ್ತದೆ.
ಭಾದ್ರಪದ ಮಾಸದಲ್ಲಿ ಪ್ರತಿ ವರ್ಷ ಪಿತೃ ಪಕ್ಷವನ್ನು ಆಚರಿಸಲಾಗುತ್ತದೆ ಎಂಬುದಾಗಿ ದಕ್ಷಿಣಭಾರತ ಅಮಾವಾಸ್ಯೆ ಕ್ಯಾಲೆಂಡರ್ ನಲ್ಲಿ ತಿಳಿಸಲಾಗುತ್ತದೆ. ಪೂರ್ಣಚಂದ್ರ ಆರಂಭವಾಗುತ್ತಿದ್ದಂತೆ ಉತ್ತರ ಭಾರತದಲ್ಲಿಯೂ ಕೂಡ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮತ್ತು ಇದು ಅಶ್ವಿನಿ ಮಾಸದಲ್ಲಿ ಬರುತ್ತದೆ.ಇಲ್ಲಿ ತಿಂಗಳ ಹೆಸರಿನಲ್ಲಿ ಮಾತ್ರ ಬದಲಾವಣೆಯಾಗುತ್ತದೆ. ತಿಂಗಳು ಮಾತ್ರ ಅದೇ ದಿನದಲ್ಲಿ ಬರುತ್ತದೆ 2018ರಲ್ಲಿ ಶ್ರಾದ್ಧ ಅಥವಾ ಪಿತೃ ಪಕ್ಷವನ್ನು ಸಪ್ಟೆಂಬರ್ 26 ನೇ ತಾರೀಖಿನಂದು ಆರಂಭಗೊಂಡು ಅಕ್ಟೋಬರ್ 8ನೇ ತಾರೀಕಿನವರೆಗೆ ನಡೆಸಲಾಗುತ್ತದೆ. ಕುಟುಂಬದ ಪದ್ಧತಿಗೆ ಅನುಸಾರವಾಗಿ ಜನರು ಬೇರೆ ಬೇರೆ ಆಹಾರ ವಸ್ತುಗಳನ್ನು ಸಮರ್ಪಿಸುತ್ತಾರೆ. ಅಷ್ಟೇ ಅಲ್ಲದೇ ಪಿತೃ ದೋಷ ನಿವಾರಣೆ ತೆಗೆದುಹಾಕಲು ವಿವಿಧ ಜ್ಯೋತಿಷ್ಯ ಪರಿಹಾರಗಳಿಗಾಗಿ ಸಮಯ ಮಂಗಳಕರವಾಗಿದೆ.

 

 

 

ಪಿತೃ ದೋಷ ನಿವಾರಣೆಗೆ ಶ್ರಾದ್ಧವನ್ನು ಮಾಡಬೇಕು. ವ್ಯಕ್ತಿಯು ಮೃತ ಪಟ್ಟಾಗ ಹಿರಿಯರಿಗೆ ತರ್ಪಣಗಳನ್ನು ನೀಡಬೇಕು. ತಿಥಿಯ ದಿನ ಶ್ರಾದ್ಧವನ್ನು ಮಾಡುವುದಿಲ್ಲ ಎಂದರೆ ಪಿತೃಪಕ್ಷದ 15 ದಿನದ ಒಳಗಡೆ ಅಮಾವಾಸ್ಯೆಯಂದು ಇದನ್ನು ಮಾಡಬೇಕು . ಜೋತಿಷ್ಯ ಶಾಸ್ತ್ರ ಹೇಳುವಂತೆ ಕೆಲವೊಮ್ಮೆ ಮಕ್ಕಳು ಆಗ್ಗಾಗೆ ಕಾಯಿಲೆಗೆ ತುತ್ತಾಗುತ್ತಾರೆ. ಅಂತೆಯೇ ಮಗುವಿನ ಹುಟ್ಟಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಬಹುದು ಮತ್ತು ಆಗಾಗ್ಗೆ ಗರ್ಭಪಾತವಾಗುವ ಸಂಭವ ಕೂಡ ಇದೆ. ಇದರ ಹಿಂದೆ ಅತೃಪ್ತ ಆತ್ಮ ಇರುತ್ತದೆ. ಅವರಿಗೆ ನೀವು ಸರಿಯಾಗಿ ಶ್ರಾದ್ಧ ಕಾರ್ಯ ಮಾಡಿರುವುದಿಲ್ಲ. ಆದ್ದರಿಂದ ಸರಿಯಾಗಿ ಕಾರ್ಯವನ್ನು ಮಾಡಿ ತೃಪ್ತಿ ಪಡಿಸಬೇಕು.

 

ಕೆಲವೊಮ್ಮೆ ಹಿರಿಯರು ಬಡತನದಲ್ಲಿದ್ದರೆ ಅಂತಹ ಕಾರಣಗಳಿಂದ ಮೃತಪಟ್ಟಿರಬಹುದು ಈ ಸಮಯದಲ್ಲಿ ಅವರ ಆತ್ಮ ಅತೃಪ್ತದಿಂದ ಅಲ್ಲಿ ಇಲ್ಲಿ ಅಲೆಯುತ್ತಿರುತ್ತದೆ. ಶ್ರಾದ್ಧ ಕಾರ್ಯವನ್ನು ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ದೊರಕಿ ಸದ್ಗತಿ ದೊರೆಯುತ್ತದೆ ಎಂದಾಗಿದೆ. ಈ ಪಿತೃಪಕ್ಷದ ಆಚರಣೆಯನ್ನು ಎಲ್ಲರೂ ತಮ್ಮ ಮನೆಗಳಲ್ಲಿ ಮಾಡಿ ತಮ್ಮ ಸಂಪ್ರದಾಯಗಳನ್ನು ಉಳಿಸಿ ,ಬೆಳೆಸಿ. ಹಿರಿಯರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರಿಗೆ ಶ್ರಾದ್ಧ ಕಾರ್ಯದ ಮೂಲಕ ತೃಪ್ತಿ ದೊರೆಯಲಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top