ಮನೋರಂಜನೆ

ಬುಲ್​ ಬುಲ್​​ ಬೆಡಗಿಯ ಬೋಲ್ಡ್ ಲುಕ್ ಗೆ ಫಿದಾ ಆದ ಪಡ್ಡೆಗಳು,ಫೋಟೋ ಒಳಗಿದೆ

ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದ ಈಗಿನ ಬಹು ಬೇಡಿಕೆಯ ನಟಿ. ಕನ್ನಡದ ದರ್ಶನ, ಸುದೀಪ್,ಗಣೇಶ್,ಉಪೇಂದ್ರ ,ಪುನೀತ್,ಧ್ರುವ ಸರ್ಜಾ ರಂತಹ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಹಂಚಿಕೊಂಡಿರುವ ರಚಿತಾ ರಾಮ್ ಬೇಡಿಕೆ ಈಗಲೂ ಬಹಳ ಜೋರಾಗಿದೆ. ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ಗುಳಿಕೆನ್ನೆ ಚಲುವೆ ತೂಕ ಇಳಿಸಿಕೊಂಡು ಸುದ್ದಿಯಾಗಿದ್ರು ರಚಿತಾ , ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ಬಳುಕೋ ಬಳ್ಳಿಯಂತಿದ್ದ ರಚಿತಾ ಇತ್ತೀಚಿಗೆ ಸ್ವಲ್ಪ ದಪ್ಪ ಆಗಿದ್ದರು.

ಆದರೆ ಈಗ ಬರೀ 25 ದಿನದಲ್ಲಿ ಬರೋಬ್ಬರಿ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆ ಕಂಡ ‘ಅಯೋಗ್ಯ’ ಚಿತ್ರದ ಸಮಯದಲ್ಲಿ ರಚಿತಾ 65 ಕೆಜಿ ಇದ್ದರು. ಆದರೆ ಈಗ 7 ಕೆಜಿ ತೂಕ ಇಳಿಸಿಕೊಂಡು 58 ಕೆಜಿಗೆ ತಲುಪಿದ್ದಾರೆ.ಮುಂಚೆಯಿಂದಲೂ ನಾನೇನು ಹೆಚ್ಚು ದಪ್ಪಗಿದ್ದವಳಲ್ಲ. ನಟಿಯಾಗಿ ಚಿತ್ರರಂಗಕ್ಕೆ ಬಂದಾಗಲೂ ಸಣ್ಣಗೆಯೇ ಇದ್ದೆ.. ಚಿತ್ರರಂಗಕ್ಕೆ ಬಂದ ಹೆಚ್ಚು ಕಡಿಮೆ ಎರಡು ವರ್ಷಗಳವರೆಗೂ ನಾನು ಇದ್ದಿದ್ದೇ ಸಣ್ಣಗೆ. ನಂತರ ಅದ್ಯಾಕೋ ನಾನು ದಪ್ಪಗಿದ್ದರೆ ಹೇಗೆ ಕಾಣಬಹುದು ಎಂದು ಎನಿಸಿತ್ತು. ಹಾಗಾಗಿ ನಾನು ವರ್ಕೌಟ್ ಕಡಿಮೆ ಮಾಡಿ, ಊಟ ಜಾಸ್ತಿ ಮಾಡುತ್ತಿದೆ. ಆಗ ನಾನು ಛಬ್ಬಿ ಛಬ್ಬಿಯಾಗಿ ಕಾಣಿಸುತ್ತಿದ್ದೆ. ‘ಅಯೋಗ್ಯ’, ಜತೆಗೆ ‘ಸೀತಾ ರಾಮ ಕಲ್ಯಾಣ’ ಎರಡು ಚಿತ್ರಗಳಲ್ಲೂ ನಾನು ಸ್ವಲ್ಪ ದಪ್ಪನೆ ಇದ್ದೆ. ಈಗ ದಪ್ಪಗಾಗಿದ್ದು ಸಾಕು ಸಣ್ಣ ಆಗಬೇಕು ಎಂತೆನಿಸಿತು. ಹಾಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದೇನೆ.ಆಗಂತ ಇದು ಯಾವುದೋ ಹೊಸ ಸಿನಿಮಾಗಾಗಿ ಅಂತ ಖಂಡಿತಾ ಅಲ್ಲ.ನನ್ನ ಖುಷಿಗೆ ನಾನೇ ಕಡಿಮೆ ಆಗೋಣ ಅಂತ ಅಷ್ಟೇ ’ ಎಂದು ಹೇಳಿಕೆ ಕೊಟ್ಟಿದ್ದರು ರಚಿತಾರಾಮ್.

 

 

 

ಸದ್ಯ ಉಪೇಂದ್ರ ನಟನೆಯ ‘ಐ ಲವ್ ಯೂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ರಚಿತಾರಾಮ್ ,ಸದಾ ಕಾಲ ಎಲ್ಲ ಸಿನಿಮಾಗಳಲ್ಲಿ ಸದಾ ಲಂಗಾ – ದಾವಣಿ, ಸೀರೆಯಲ್ಲಿ ಉಟ್ಟು ಮಹಾಲಕ್ಷ್ಮಿ ಯಂತೆ ಕಾಣುತ್ತಿದ್ದ ರಚಿತಾ ಈಗ ಮೊದಲ ಬಾರಿಗೆ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ ,ಹೌದು ರಿಯಲ್ ಸ್ಟಾರ್​​ ಉಪೇಂದ್ರ ನಾಯಕ ನಟನಾಗಿ ನಟಿಸುತ್ತಿರುವ,ಆರ್.​ಚಂದ್ರು ಅವರ ನಿರ್ದೇಶನವವಿರುವ ಐ ಲವ್​ ಯೂ’ ಚಿತ್ರದಲ್ಲಿ ನಾಯಕಿಯಾಗಿರುವ ರಚಿತಾ ರಾಮ್ ಈ ಚಿತ್ರದ ಹಾಡಿಗಾಗಿ ಈ ನ್ಯೂ ಲುಕ್​ ತಾಳಿದ್ದಾರೆ ,ರಚಿತಾ ಬಗ್ಗೆ ಮಾತನಾಡಿದ ನಿರ್ದೇಶಕರಾದ ಆರ್.​ಚಂದ್ರು ಸೆಟ್​ನಲ್ಲಿ ರಚಿತಾ ರಾಮ್ ಕಂಪರ್ಟೇಬಲ್​ ಆಗಿ ಇರುತ್ತಾರೆ. ಅವರೊಬ್ಬ ಪ್ರೊಫೆಷನಲ್​​ ಆಕ್ಟರ್ ಎಂದಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top