fbpx
ಮನೋರಂಜನೆ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ವಯಸ್ಸಿನ ಬಗ್ಗೆ ಮಾತನಾಡಿ ಮತ್ತೆ ಸುದ್ದಿಯಾದ ತುಪ್ಪದ ಹುಡುಗಿ ರಾಗಿಣಿ

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತಲೇ ಪದೇ ಪದೆ ಮೋದಿ ಅಭಿಮಾನಿಗಳನ್ನು ಕೆಣಕುತ್ತಾ ಸುದ್ದಿಯಾಗುವ ಮೋಹಕತಾರೆ ರಮ್ಯಾ ಈಗ ಸಿನಿಮಾ ರಂಗದಿಂದ ದೂರವೇ ಉಳಿದುಬಿಟ್ಟಿದ್ದಾರೆ. ರಮ್ಯಾ ಸಿನಿಮಾ ರಂಗಕ್ಕೆ ಮರಳಿ ಬರಬೇಕೆಂಬುದು ಹಲವು ಸಿನಿರಸಿಕರ ಇಚ್ಛೆಯಾಗಿದೆ.

ಇನ್ನು ರಮ್ಯಾ ಸಿನಿಮಾ ರಂಗದಲ್ಲಿದ್ದಾಗ ರಾಗಿಣಿ ಜೊತೆಗೆ ಒಳಜಗಳ ಇದೆ ಎಂಬ ಸುದ್ದಿ ಹಬ್ಬಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಸದ್ಯ ರಾಜಕೀಯದಲ್ಲಿ ಬ್ಯುಸಿ ಆಗಿರುವ ರಮ್ಯಾ ಅವರು ಸಿನಿಮಾ ರಂಗಕ್ಕೆ ಬರಬೇಕೆಂದು ರಾಗಿಣಿ ಕೂಡ ಬಯಸುತ್ತಿದ್ದಾರಾ ಎಂಬ ಮಾತುಗಳು ಈಗ ಕೇಳಿ ಬಂದಿತು. ಅಷ್ಟಕ್ಕೂ ಈ ಮಾತುಗಳಿಗೂ ಭಲವಾದ ಕಾರಣ,ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅಭಿಮಾನಿಯೊಬ್ಬರು ಅವರು ಮತ್ತೆ ಬರಬೇಕೆಂದು ಗೋಗರೆಯುವಂತೆ ಒಂದು ಟ್ವೀಟ್ ಮಾಡಿದ್ದರು. ಅದನ್ನು ರಾಗಿಣಿ ದ್ವಿವೇದಿ ಕೂಡಾ ರೀಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವಿಚಾರಕ್ಕೆ ಸಹಮತ ವ್ಯಕ್ತಪಡಿಸಲು ಈ ರೀ ಟ್ವೀಟ್ ಬಳಕೆಯಾಗುತ್ತದೆ. ರಾಗಿಣಿ ಕೂಡಾ ಅದನ್ನೇ ಮಾಡಿರೋದರಿಂದ ಅವರೂ ಕೂಡಾ ಮುನಿಸು ಮರೆತು ಮತ್ತೆ ರಮ್ಯಾ ಚಿತ್ರ ರಂಗಕ್ಕೆ ಮರಳಲಿ ಅಂತ ಆಶಿಸುತ್ತಿದ್ದಾರಾ ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡಿತು.

 

 

 

ಕೆಲವು ವರ್ಷಗಳ ಹಿಂದೆ ರಾಗಿಣಿ ರಮ್ಯಾ ವಿರುದ್ಧ ಮಾತಾಡಿದ್ದರೆಂಬ ಬಗ್ಗೆ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈ ವಿಚಾರವಾಗಿ ರಮ್ಯಾ ಕೂಡಾ ಪರೋಕ್ಷವಾಗಿ ರಾಗಿಣಿಯವರನ್ನು ಸಾಮಾಜಿಕ ಜಾಲತಾಣದ ಮೂಲಕ ತಿವಿದಿದ್ದರು. ರಾಗಿಣಿ ಕೂಡಾ ಅದಕ್ಕೆ ಅಷ್ಟೇ ಮೊನಚಾಗಿ ಮರು ಉತ್ತರವನ್ನು ನೀಡಿದ್ದರು.ಮತ್ತೆ ಈ “ರ”ಅಕ್ಷರದ ನಟಿಯರಾದ ರಮ್ಯಾ ಮತ್ತು ರಾಗಿಣಿ ಈ ವಿಷಯಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ.

 

 

 

ಇದೀಗ ರಾಗಿಣಿ , ರಮ್ಯಾ ವಯಸ್ಸಿನ ಬಗ್ಗೆ ಮಾತನಾಡುವ ಮೂಲಕ ಇಬ್ಬರೂ ಸ್ನೇಹಿತರಾಗಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ .ಯೂತ್ ಐಕಾನ್ ರಮ್ಯಾ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಅಭಿಮಾನಿ ಒಬ್ಬರ ಜೊತೆ ಇರೋ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋಗೆ ರಾಗಿಣಿ ರಿಟ್ವೀಟ್ ಮಾಡಿದ್ದು, ನಮ್ಮ ವಯಸ್ಸು ಮುಂದಕ್ಕೆ ಹೋದಂತೆ ರಮ್ಯಾ ಅವರ ವಯಸ್ಸು ಹಿಂದಕ್ಕೆ ಬರುತ್ತಿದೆ. ಹೀಗಾಗಿ ಅವರು ದಿನ ಕಳೆದಂತೆ ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ ಅಂತ ಹೇಳಿದ್ದಾರೆ. ರಾಗಿಣಿ ರೀಟ್ವೀಟ್ ಗೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ಧನ್ಯಾವಾದಗಳು ರಾಗಿಣಿ ಅಂತ ಹೇಳಿದ್ದಾರೆ.ರಮ್ಯಾ ಹಾಗೂ ರಾಗಿಣಿಯ ಸ್ನೇಹ ನೋಡಿದ್ರೆ ಖಂಡಿತಾ ಖುಷಿಯಾಗುತ್ತೆ ,ಒಂದೇ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದರು ಈ ನಾಯಕಿಯರು ಆದ್ರೂ ಸ್ವಲ್ಪ ಕೂಡ ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗೆ ಯಾವುದೇ ಅಸೂಯೆ ಇಲ್ಲ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top