ಮನೋರಂಜನೆ

ನೀರ್‌ದೋಸೆ ವಿವಾದ- ಮಾಜಿ ಸಂಸದೆ ರಮ್ಯಾಗೆ ಭಾರಿ ಮುಖಭಂಗ.

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ನಟಿ ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿಲ್ಲ.. ಆ ವಿಷ್ಯ ಹಾಗಿರಲಿ, ಈಗ ರಾಜಕೀಯ ಹೊರತುಪಡಿಸಿದರೆ ರಮ್ಯಾ ಹಳೆ ವಿವಾದವೊಂದರ ಕುರಿತಾಗಿ ಬಾರಿ ಸುದ್ದಿಯಾಗುತ್ತಿದ್ದಾರೆ.

ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಷ್ಟೂ ದಿನ ಬರೀ ಜಗಳ ಮತ್ತು ಕಿತಾಪತಿಗಳಿಗೆ ಫೇಮಸ್ ಆಗಿದ್ದ ರಮ್ಯಾ ಸಿನಿ ಜೀವನದಲ್ಲಿ ನೀರ್ದೋಸೆ ವಿವಾದ ಅತ್ಯಂತ ದೊಡ್ಡ ವಿವಾದವಾಗಿ ಗುರುತಿಸಿಕೊಂಡಿದೆ. ಈ ಚಿತ್ರದಲ್ಲಿ ರಮ್ಯಾ ಅಭಿನಯಿಸಬೇಕಿತ್ತು. ಆದರೆ, ಅವರು ‍ಪಾತ್ರ ನಿರ್ವಹಣೆಯಿಂದ ಹೊರ ನಡೆದಿದ್ದರು., ಚಿತ್ರತಂಡಕ್ಕೂ ಮತ್ತು ರಮ್ಯಾಗೂ ಇನ್ನೂ ಒಂದಷ್ಟು ಗಲಾಟೆಗಳು ಆಗಿತ್ತು..

 

 

‘ನೀರ್‌ದೋಸೆ’ ಚಿತ್ರೀಕರಣ ಸಂದರ್ಭದಲ್ಲಿ ರಮ್ಯಾ ಅವರ ‘ಆಕ್ಷೇಪಾರ್ಹ’ ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ರಮ್ಯಾ ದೂರು ದಾಖಲಿಸಿದ್ದರು. ಆದರೆ ಈ ಆರೋಪದಿಂದ ಸಿನಿಮಾ ಛಾಯಾಗ್ರಾಹಕ ಕೆ.ಎನ್. ನಾಗೇಶ್ ಕುಮಾರ್ ಮುಕ್ತರಾಗಿದ್ದು ರಮ್ಯಾಗೆ ಭಾರಿ ಮುಖಭಂಗವಾಗಿದೆ.

ನೀರ್ ದೋಸೆ ಚಿತ್ರದ ಶೂಟಿಂಗ್ ಸಮಯದ ಅನುಮತಿಯಿಲ್ಲದೆ ಫೋಟೋ ಪ್ರಕಟಿಸಿದ್ದಾರೆಂದು ಪತ್ರಕರ್ತ ಶ್ಯಾಮ್ ಪ್ರಸಾದ್, ಫೋಟೋ ಜರ್ನಲಿಸ್ಟ್ ಕೆಎನ್ ನಾಗೇಶ್ ಕುಮಾರ್ ಮತ್ತು ಮನೋಹರ್ ವಿರುದ್ಧ ರಮ್ಯಾ ದೂರು ದಾಖಲಿಸಿದ್ದರು. ಆ ಪ್ರಕರಣವನ್ನು ನೆನ್ನೆ ಕೈಗೆತ್ತಿಕೊಂಡಿದ್ದ 1 ನೇ ಎಸಿಎಂಎಂ ಕೋರ್ಟ್, ಪತ್ರಕರ್ತ ಶ್ಯಾಮ್ ಪ್ರಸಾದ್, ಫೋಟೋ ಜರ್ನಲಿಸ್ಟ್ ಕೆಎನ್ ನಾಗೇಶ್ ಕುಮಾರ್, ಮನೋಹರ್ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top