ಮನೋರಂಜನೆ

ಕೋತಿಯಾಗಿ ಬದಲಾದ ಪುನೀತ್ ಹೀರೋಯಿನ್

ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಅಭಿನಯ ಮಾಡಿದ್ದ ಬೆಡಗಿ ಅದಾ ಶರ್ಮಾ ಅವರು ಒಂದೇ ಕನ್ನಡ ಚಿತ್ರದಲ್ಲಿ ಅಭಿನಯ ಮಾಡಿದರೂ ಕನ್ನಡಿಗರ ಮನ ಗೆದ್ದಿದ್ದಾರೆ.ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಪೋಸ್ಟ್ ಮಾಡುವ ಅದಾ ಶರ್ಮಾ ಮುಂಚೆ ಒಂದ್ಸಲ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು . ಇನ್ಸ್ಟಾ ಗ್ರಾಂ ನಲ್ಲಿ ಸುಮಾರು 1 ಮಿಲಿಯನ್ ಗು ಅಧಿಕ ಫಾಲ್ಲೋರ್ಸ್ ಹೊಂದಿರುವ ಅದಾ ಶರ್ಮಾ ತಮ್ಮ ಅಜ್ಜಿಯ ಜೊತೆ ಡಾನ್ಸ್ ಮಾಡಿದ ವಿಡಿಯೋ ಹಿಂದೆ ಒಂದು ಬಾರಿ ಫುಲ್ ವೈರಲ್ ಆಗಿತ್ತು .

ಆ ವಿಡಿಯೋನಲ್ಲಿ ನಟಿ ಅದಾ ಶರ್ಮಾ ಅವರು ತಮ್ಮ ಅಜ್ಜಿಯೊಂದಿಗೆ ‘ಸೋನು ಕೇ ಟಿಟು ಕಿ ಸ್ವೀಟಿ’ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದರು . ಅದಾ ಅಜ್ಜಿ ಸಹಿತ ಮೊಮ್ಮಗಳಿಗೆ ಏನೇನು ಕಡಿಮೆ ಇಲ್ಲ ಎನ್ನುವಂತೆ ಸೊಂಟ ಬಳುಕಿಸಿದರು. ಆಗ ಕೇವಲ ಒಂದೇ ದಿನದಲ್ಲಿ ಸುಮಾರು 20 ಲಕ್ಷ ಜನ ಈ ವಿಡಿಯೋ ನೋಡಿದರು. ನಿಮ್ಮ ಡ್ಯಾನ್ಸ್ ಪಾರ್ಟ್ನರ್‌‌‌‌‌‌ಗೆ ಟ್ಯಾಗ್ ಮಾಡಿ ನನ್ನ ಡ್ಯಾನ್ಸ್ ಪಾರ್ಟ್ನರ್‌‌‌‌‌‌ ನನ್ನ ಅಜ್ಜಿ’ ಎಂದು ಸ್ಟೇಟಸ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದೂ ನಿಮಗೆ ನೆನಪಿರಬೇಕು ಹಾಗೇ ಬೀದಿಯಲ್ಲಿ ಅದಾ ಶರ್ಮಾ ತರಕಾರಿ ಮಾರುತ್ತಾ ಇದ್ದ ಫೋಟೋ ಒಂದು ಹೇಗೋ ವೈರಲ್ ಆಗಿದ್ದು ನಿಮಗೆ ಗೊತ್ತಿರಬೇಕು

ಈಗ ಮತ್ತೆ ಈ ಅವತಾರ ತಾಳಿ ಫುಲ್ ಸುದ್ದಿಯಲ್ಲಿ ಇದ್ದಾರೆ ಆದಾ ಶರ್ಮಾ,ಮುಖಕ್ಕೆ ಕೋತಿಯ ಮಾಸ್ಕ್​, ಪ್ಯಾಂಟ್​ ಮೇಲೆ ಸೀರೆ, ‘ಮುಕ್ಕಾಲಾ ಮುಖಾಬುಲಾ’ ಸಾಂಗ್​ಗೆ ಸಖತ್​ ಸ್ಟೆಪ್ ಹಾಕಿರೋ ಆದಾ ಶರ್ಮಾ ಅದರ ವಿಡಿಯೋ ಮಾಡಿ ಈಗ ಅವರ ಇನ್ಸ್ಟಾಗ್ರಾಮ್ ಹಾಕಿಕೊಂಡಿದ್ದಾರೆ ,ಹೀಗೆ ಕೋತಿಯ ಮಾಸ್ಕ್​ ನಿಂದ ಮುಖಮುಚ್ಚಿಕೊಂಡು ಸೂಪರ್ ಆಗಿ ಡಾನ್ಸ್ ಮಾಡಿರೋ ಆದಾ ಶರ್ಮಾ ಸದಾ ಏನಾದ್ರೂ ಒಂದು ಮಾಡುತ್ತಲೇ ಇರುತ್ತಾರೆ .

 

 

 

ಇವರು ಹಾಕಿರೋ ಈ ಕೋತಿ ಮಾಸ್ಕಿನ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು ನೋಡಿದವರು ಫುಲ್ ಮಜಾ ತಗೊಳ್ತಾ ಇದ್ದಾರೆ .ಒಂದಲ ಒಂದು ವಿಷ್ಯಕ್ಕೆ ಸುದ್ದಿ ಆಗೋ ಈ ನಟಿಮಣಿ ಈಗ ಸದ್ಯಕ್ಕೆ ಹಾಲಿವುಡ್​ನ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top