ಸಮಾಚಾರ

ಮನೆಯ ಕಸವನ್ನು ರಸ್ತೆಯಲ್ಲಿ ಬಿಸಾಕಿದ್ದ ಡ್ರೈವರ್‌ಗೆ ಒಳ್ಳೆ ಪಾಠ ಕಲಿಸಿದ ದಿಟ್ಟ ಹೆಣ್ಣು,ವಿಡಿಯೋ ಒಳಗಿದೆ

ಎಲ್ಲ ಕಡೆ ಸ್ವಚ್ಛತೆಗಾಗಿ ಅಭಿಯಾನಗಳು ನಡೆಯುತ್ತಲೇ ಇದೆ ,ಒಂದು ಕಡೆ ಯಿಂದ ಸ್ವಚ್ಛ ಮಾಡುತ್ತಾ ಬರುತ್ತಾ ಇದ್ದಾರೆ ಇನ್ನೊಂದು ಕಡೆ ಆ ಸ್ವಚ್ಛತೆಯನ್ನು ನಾಶ ಮಾಡುತ ಇರುತ್ತಾರೆ ,ನಮ್ಮ ಭಾರತದಲ್ಲಿ ಸ್ವಚ್ಛ ಭಾರತ್ ಶುರು ಆದ್ರೂ ರಸ್ತೆಗಳನ್ನು ಗಲೀಜು ಮಾಡುವವರ ಸಂಖ್ಯೆ ಏನು ಕಮ್ಮಿ ಯಾಗಿಲ್ಲ ,ಅವರ ಮನೆ ಸ್ವಚ್ಛ ಇದ್ರೆ ಸಾಕು ರಸ್ತೆ ,ಒರಗಡೆ ಹೆಂಗಿದ್ರೆ ಏನು ಅನ್ನೋ ಮನಸ್ಥಿತಿ ನಮ್ಮ ಜನಗಳದ್ದು ಆದ್ರೆ ಒಂದು ವಿಷಯನ್ನ ಅವರೆಲ್ಲ ಮರೆತಿದ್ದಾರೆ ,ಅದಕ್ಕೆ ಟ್ಯಾಕ್ಸ್ ಕಟ್ಟು ವವರು ನಾವೇ ಅಂತ .
ಬೀಜಿಂಗ್ ದೇಶದ ಒಂದು ರಸ್ತೆಯಲ್ಲಿ ಇದೇ ರೀತಿಯ ಘಟನೆ ಒಂದು ನಡೆದಿದ್ದೆ ರಸ್ತೆಯಲ್ಲಿ ಕಸ ಬಿಸಾಕಿದ್ದ ಮಹಿಳೆಗೆ ಬೈಕ್ ಸವಾರೆ ಒಬ್ಬಳು ತಕ್ಕ ಪಾಠ ಕಲಿಸಿದ ಘಟನೆ ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ನಡೆದಿದೆ.ಘಟನೆಯ ಸಂಪೂರ್ಣ ದೃಶ್ಯಗಳು ಹಿಂದುಗಡೆ ನಿಂತಿದ್ದ ಕಾರಿನ ಡ್ಯಾಶ್ ಕ್ಯಾಮ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದ್ದು, ನೆಟ್ಟಿಗರು ಬೈಕ್ ಸವಾರೆಯ ಸಾಮಾಜಿಕ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ.

 

 

 

ಘಟನೆಯ ವಿವರ :ರೋಡ್ ಸಿಗ್ನಲ್ ನಲ್ಲಿ ಕಾರು ನಿಂತಿರುತ್ತದೆ ಆ ಸಮಯದಲ್ಲಿ ಕಾರಿನ ಚಾಲಕಿ ತನ್ನ ಬಲ ಭಾಗದ ಕಾರಿನ ಕಿಟಕಿಯಲ್ಲಿ ಮನೆಯ ಕಸವನ್ನು ರಸ್ತೆ ಮೇಲೆ ಎಸೆದಿದ್ದಾಳೆ. ಅದನ್ನು ಕಂಡ ಬೈಕ್ ಸವಾರೆ ಕಾರಿನ ಬಳಿ ಬಂದು ಎಸೆದ ಕಸವನ್ನು ಮತ್ತೆ ಆ ಕಾರಿನ ಒಳಗೆ ಎಸೆದು ಹೋಗಿದ್ದಾಳೆ.ಇದರಿಂದ ಕೋಪಗೊಂಡು ಚಾಲಕಿ ಬೈಕ್ ಸವಾರೆ ಹೋದ ನಂತರ ಕಾರಿನಿಂದ ಇಳಿದು ಕೈತೋರಿಸಿ ಬೈದಿದ್ದಾಳೆ.ಆ ದಿಟ್ಟ ಬೈಕ್ ಸವಾರಿಯ ಕೆಲಸವನ್ನು ಮೆಚ್ಚಿ ಮಾತನಾಡುವುದರ ಜೊತೆ ಕಾರ್ ಡ್ರೈವರ್ ಮಾಡಿದ ಮೂರ್ಖ ಕೆಲಸ ಕೆಲಸದ ಬಗ್ಗೆ ಬೈಕೊಂಡಿದ್ದಾರೆ ನೆಟ್ಟಿಗರು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top