ಆರೋಗ್ಯ

ಅಯ್ಯೋ ಉಷ್ಣ ಆಗಿದೆ ಮೂತ್ರ ಹೋಗೋ ಜಾಗ ಕಟ್ಟಿದೆ ಅನ್ನೋರು ಹೀಗೆ ಮಾಡಿ ದೇಹ ಕೂಲ್ ಆಗುತ್ತೆ .

ಸಾಮಾನ್ಯವಾಗಿ ಉಷ್ಣದ ಪ್ರಕೃತಿ ದೇಹದಲ್ಲಿ ಹೆಚ್ಚಾದಾಗ ಜನನಾಂಗ ಕಟ್ಟುವ ಅನುಭವ ಆಗೋದು ಸಹಜ ಇಂತ ಪರಿಸ್ಥಿಯನ್ನು ನಿವಾರಿಸಬೇಕು ಅಂದ್ರೆ ಕೆಲವು ಮನೆ ಮದ್ದುಗಳನ್ನ ಬಳಸಲೇ ಬೇಕು ಮನೆ ಮದ್ದುಗಳ ಪಟ್ಟಿ ಕೆಳಗಿದೆ ನೋಡಿ .

ಮಜ್ಜಿಗೆ:

 

 

 

ಮಜ್ಜಿಗೆ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಬಯಾಟಿನ್ ಖನಿಜಗಳು ಮತ್ತು ವಿಟಮಿನ್ಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ.ದೇಹದ ನಿಯಂತ್ರಿತ ತಾಪಮಾನವನ್ನು ಪಡೆಯಲು ಮಜ್ಜಿಗೆ ಬಹಳ ಒಳ್ಳೆಯ ಆಯ್ಕೆ .

ಕಲ್ಲಂಗಡಿ :ಕಲ್ಲಂಗಡಿಯಲ್ಲಿ ಸುಮಾರು 95% ನಷ್ಟು ನೀರಿನ ಅಂಶವಿದ್ದು ತಕ್ಷಣವೇ ದೇಹದ ಶಾಖವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆಕಲ್ಲಂಗಡಿ ರಸವನ್ನು ಹೊರತೆಗೆದು ಸ್ವಲ್ಪ ಉಪ್ಪು, ಮೆಣಸು ಮತ್ತು ಸ್ವಲ್ಪ ನಿಂಬೆಯೊಂದಿಗೆ ಸೇವನೆ ಮಾಡಿ ತುಂಬ ಒಳ್ಳೇದು .

ಎಳ ನೀರು:ನೈಸರ್ಗಿಕವಾಗಿ ದೇಹದ ಉಷ್ಣತೆ ನಿಯಂತ್ರಿಸುವ ಜೊತೆಗೆ ಎಲೆಕ್ಟ್ರೋಲೈಟ್ಗಳನ್ನು ಸಮತೋಲನಗೊಳಿಸುವಲ್ಲಿ ನೆರವಾಗುವುದರ ಜೊತೆಗೆ ದೇಹವನ್ನು ಪುನಃ ಹೈಡ್ರೇಟ್ ಗೊಳಿಸಲು
ಎಳ ನೀರು ಒಳ್ಳೆಯ ಉಪಾಯ.

ಗಸಗಸೆ :ಗಸಗಸೆಯ ಪಾಯಸ ಅಥವಾ ಹಸಿ ಗಸಗಸೆಯನ್ನು ದಿನಾಗಲೂ ಒಂದು ಚಮಚ ಸೇವಿಸುತ್ತಾ ಬನ್ನಿ ದೇಹದ ಶಾಖವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ .

ಮೆಂತ್ಯ:ದೇಹ ಶಾಖವನ್ನು ನಿವಾರಿಸಲು ಸುಲಭದ ಮನೆಯ ಪರಿಹಾರವೆಂದರೆ ಮೆಂತ್ಯದ ಬೀಜಗಳು ಒಂದು ಚಮಚದಷ್ಟನ್ನು ನೀರಿನಲ್ಲಿ ರಾತ್ರಿ ಹೊತ್ತು ನೆನೆಸಿ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸಿ .

ಹಾಲು ಮತ್ತು ಜೇನುತುಪ್ಪ :ತಂಪಾದ ಹಾಲಿಗೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ ವೇಗವಾದ ಮತ್ತು ಪರಿಣಾಮಕಾರಿ ಫಲಿತಾಂಶಗಳಿಗಾಗಿ ಪ್ರತಿದಿನವೂ ಸೇವಿಸಿ .

ಶ್ರೀಗಂಧದ ಪುಡಿ:

 

 

 

ಶ್ರೀಗಂಧದ ಪುಡಿಯನ್ನು ನೀರಿನಲ್ಲಿ ಅಥವಾ ತಂಪಾದ ಹಾಲಿನೊಂದಿಗೆ ಕಲಸಿ ಚೆನ್ನಾಗಿ ಪೇಸ್ಟ್ ಮಾಡಿ ನಂತ್ರ ನಿಮ್ಮ ಹಣೆ ಮತ್ತು ಗಲ್ಲಕ್ಕೆ ಹಚ್ಚಿ.

ನಿಂಬೆ ರಸ :ನೀರಿಗೆ ಸ್ವಲ್ಪ ನಿಂಬೆ ರಸ ಸಕ್ಕರೆ ಸೇರಿಸಿ ಜ್ಯೂಸು ಮಾಡಿ ಕುಡಿದು ನೋಡಿ .

ಜೀರಿಗೆ :ಜೀರಿಗೆ ಯನ್ನು ಕುದಿಸಿ ಆರಿಸಿದ ನಂತರ ನಿತ್ಯ ಸೇವಿಸುತ್ತಾ ಬನ್ನಿ ಇದರಿಂದ ದೇಹದ ಉಷ್ಣ ದಾರಿಗೆ ಬರುತ್ತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top