ಮನೋರಂಜನೆ

ನಾನಾ ಪಾಟೇಕರ್​ ಹೇಸಿಗೆ ಹುಟ್ಟಿಸುವಂತಹ ಮನುಷ್ಯ-ವೈರಲ್ ಆಯಿತು ಹಿರಿಯ ನಟಿ ಡಿಂಪಲ್​ ಕಪಾಡಿಯಾರ ವಿಡಿಯೋ.

ಬಾಲಿವುಡ್ ನಟಿ ತನುಶ್ರೀ ದತ್ತಾ​ ಅವರು ಹಿರಿಯ ನಾನಾ ಪಾಟೇಕರ್​ ವಿರುದ್ಧ ದೈಹಿಕ ಕಿರುಕುಳ ಆರೋಪ ಮಾಡಿದ ನಂತರ ಬಾಲಿವುಡ್​ನಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.. ಅನೇಕ ಸೆಲಿಬ್ರೆಟಿಗಳು ತನುಶ್ರೀ ದತ್ತಾ ಹೇಳಿಕೆ ಪರವಾಗಿ ವಾದಿಸಿದರೆ ಕೆಲವರು ಆಕೆಯ ಹೇಳಿಕೆ ಸುಳ್ಳು ಎಂದು ಹೇಳಿದ್ದರು, ಇನ್ನೂ ಕೆಲವರೂ ಯಾವುದೇ ಹೇಳಿಕೆ ನೀಡದೆ ಸುಮ್ಮನಾಗಿದ್ದಾರೆ. ಆದರೆ, ಈ ನಡುವೆ ನಾನಾ ಪಾಟೇಕರ್​ ಬಗೆಗಿನ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

 

 

ಸುಮಾರು ವರ್ಷಗಳ ಹಿಂದೆ ಹಿರಿಯ ನಟಿ ಡಿಂಪಲ್​ ಕಪಾಡಿಯಾ ಅವರು ನಾನಾ ಪಾಟೇಕರ್​ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. “ನಾನಾ ಪಾಟೇಕರ್ ಹೇಸಿಗೆ ಹುಟ್ಟಿಸುಂತಹ ವ್ಯಕ್ತಿಯೆಂದು ನನಗನಿಸುತ್ತದೆ, ಒಳ್ಳೆಯ ಅಥವಾ ಕೆಟ್ಟ ಎರಡೂ ಅರ್ಥದಲ್ಲಿಯೂ ನಾನಿದನ್ನ ಹೇಳಿದ್ದೇನೆ” ಎಂದು ಡಿಂಪಲ್ ಕಪಾಡಿಯಾ ವಿಡಿಯೋದಲ್ಲಿ ಹೇಳಿದ್ದಾರೆ.

ಅತ್ಯುತ್ತಮ ನಟನಾಗಿರುವ ಪಾಟೇಕರ್​ “ಕೆಟ್ಟ ಗುಣವನ್ನೂ ಹೊಂದಿದ್ದಾರೆ. ಪ್ರತಿಭೆ ವಿಚಾರಕ್ಕೆ ಬಂದರೆ ಆತನಿಗೆ ಸರಿಸಾಟಿ ಯಾರು ಇಲ್ಲ. ಆತ ಅತ್ಯಂತ ಪ್ರತಿಭಾವಂತ ಎಂದು ಶ್ಲಾಘಿಸಿದ್ದಾರೆ. ಓರ್ವ ವ್ಯಕ್ತಿಯಾಗಿ ಆತನನ್ನು ಭಯಾನಕ ಕಡೆಯಿಂದಲೂ ನೋಡಿದ್ದೇನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top