fbpx
ಸಮಾಚಾರ

2ನೇ ಪತ್ನಿಗೆ ರಕ್ಷಣೆ ಕೋರಿ ಜೈಲಿಂದಲೇ ದುನಿಯಾ ವಿಜಿ ಪೊಲೀಸರಿಗೆ ಬರೆದಿರುವ ಪತ್ರ ಹೀಗಿದೆ..

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿರುವ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿ ಕೀರ್ತಿಗೌಡಗೆ ಭದ್ರತೆ ನೀಡುವಂತೆ ಕೋರಿ ಗಿರಿನಗರ ಠಾಣೆ ಪೊಲೀಸರಿಗೆ ಪತ್ರ ಬರೆದಿದ್ದಾರೆ. ತಮ್ಮಿಬ್ಬರು ಹೆಂಡತಿಯರ ಜಗಳದಲ್ಲಿ ಎರಡನೇ ಪತ್ನಿಯ ಪರ ಬ್ಯಾಟ್ ಬೀಸುತ್ತಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಮೂಲಕ ಗಿರಿನಗರ ಪೊಲೀಸರಿಗೆ ಪತ್ರ ಕಳುಹಿಸಿರುವ ವಿಜಿ ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ಮಾಡಿದ್ದಾಳೆ. ಕೀರ್ತಿಗೆ ಏನಾದರೂ ತೊಂದರೆ ಆದರೆ ಅದಕ್ಕೆ ನಾಗರತ್ನಳೇ ನೇರ ಹೊಣೆ. ನಾಗರತ್ನಳಿಂದ ಜೀವಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಕೀರ್ತಿಗೌಡಗೆ ಸೂಕ್ತ ಭದ್ರತೆ ಕೊಡಿ ಎಂದು ದುನಿಯಾ ವಿಜಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

 

 

ವಿಜಿ ಪೊಲೀಸರಿಗೆ ಬರೆದಿರುವ ಪತ್ರ ಹೀಗಿದೆ..

ರವರಿಗೆ,
ಆರಕ್ಷಕ ನಿರೀಕ್ಷಕರು,
ಗಿರಿನಗರ ಆರಕ್ಷಕ ಠಾಣೆ,
ಬೆಂಗಳೂರು
(ಮುಖಾಂತರ: ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ, ಬೆಂಗಳೂರು)

ಇಂದ
ಬಿ.ಆರ್​.ವಿಜಯ್​ಕುಮಾರ್​ S/O ಸಿ.ರುದ್ರಪ್ಪ
ಕೇಂದ್ರ ಕಾರಾಗೃಹ,
ಬೆಂಗಳೂರು
ಮಾನ್ಯರೇ,

ವಿಷಯ: ನನ್ನ ಪತ್ನಿ ಕೀರ್ತಿ ಇವರಿಗೆ ಸೂಕ್ತ ಭದ್ರತೆ ಒದಗಿಸುವ ಕೋರಿ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ವಿನಂತಿಸುವುದೇನೆಂದರೆ, ನನ್ನ ಪತ್ನಿ ಕೀರ್ತಿರವರು ನನ್ನನ್ನು ಭೇಟಿ ಮಾಡಲು  ದಿನಾಂಕ 24/09/18 ರಂದು ಕೇಂದ್ರ ಕಾರಾಗೃಹ, ಬೆಂಗಳೂರಿಗೆ ಬಂದಿದ್ದು, ದಿನಾಂಕ 23/09/18 ರಂದು ನಾಗರತ್ನರವರು ತನ್ನ ಮೇಲೆ ಹಲ್ಲೆ ನಡೆಸಿರುವ ವಿಷಯವನ್ನ ನನ್ನ ಬಳಿ ಹೇಳಿದ್ದಾರೆ., ಗಲಾಟೆಯಿಂದ ಕೀರ್ತಿಯವರು ತೀವ್ರ ಭಯಭೀತರಾಗಿರುತ್ತಾರೆ. ಮತ್ತು ನನ್ನನ್ನು ಭೇಟಿ ಮಾಡಲು ಬರುವ ಸಮಯದಲ್ಲಿ ಕಾರ್​ ಡ್ರೈವರ್​ ಮಹಮ್ಮದ್​ಕೀರ್ತಿಗೆ ಕರೆ ಮಾಡಿ ನಿನ್ನನ್ನು(ಕೀರ್ತಿಯವರನ್ನು) ಸುಮ್ಮನೆ ಬಿಡುವುದಿಲ್ಲ, ನೀನು ಮತ್ತೆ ಮನೆಗೆ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಧಮ್ಕಿ ಹಾಕಿ ಕೊಲೆ ಬೆದರಿಕೆಯೊಡ್ಡಿರುತ್ತಾರೆ. ಸುಮ್ಮನೆ ನನ್ನ ಪತ್ನಿ ಮೇಲೆ ಆರೋಪ ಮಾಡಿ ಪ್ರಕರಣ ದಾಖಲು ಮಾಡುತ್ತಿದ್ದು, ದಯಮಾಡಿ ನನ್ನ ಹೆಂಡತಿ ಕೀರ್ತಿಗೆ ಸೂಕ್ತ ಭದ್ರತಾ ವ್ಯವಸ್ಥೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇನೆ. ಹಾಗೂ ನನ್ನ ಪತ್ನಿ ಕೀರ್ತಿಯವರಿಗೆ ಪ್ರಾಣ ಬೆದರಿಕೆ ಇದ್ದು, ಸೂಕ್ತ ಭದ್ರತೆ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ನನ್ನ ಪತ್ನಿ ಕೀರ್ತಿಯವರು ಮಾನಸಿಕ ಕಿರುಕುಳದಿಂದ ನೊಂದಿದ್ದು ಮತ್ತೆ ಈ ರೀತಿಯ ಘಟನೆ (ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದಲ್ಲಿ) ಜರುಗಿದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿರುತ್ತಾರೆ. ನನ್ನ ಪತ್ನಿ ಕೀರ್ತಿಯವರಿಗೆ ಏನಾದರೂ ತೊಂದರೆಯಾದಲ್ಲಿ ನಾಗರತ್ನರವರೇ ನೇರ ಹೊಣೆಗಾರರಾಗಿರುತ್ತಾರೆ.

ವಂದನೆಗಳೊಂದಿಗೆ

ಇಂತಿ ತಮ್ಮ ವಿಶ್ವಾಸಿ
ಬಿ.ಆರ್​.ವಿಜಯ್​ಕುಮಾರ್​

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top