fbpx
ಸಮಾಚಾರ

ಜಾಮೀನು ಸಿಕ್ಕಿದ್ದರೂ ಜೈಲಿನಿಂದ ದುನಿಯಾ ವಿಜಯ್ ಇಂದು ಬಿಡುಗಡೆಯಾಗೋದು ಡೌಟ್- ಯಾಕೆ ಗೊತ್ತಾ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಕಳೆದು ಒಂದು ವಾರದಿಂದ ಜೈಲಿನಲ್ಲಿಯೇ ಕಾಲ ಕಳೆಯುತ್ತಿರುವ ದುನಿಯಾ ವಿಜಯ್​ಗೆ ಸೆಷನ್ಸ್ ಕೋರ್ಟ್ ಕಡೆಗೂ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಎರಡು ಬಾರಿ ಜಾಮೀನು ಅರ್ಜಿ ನಿರಾಕರಣೆಯಾಗಿರುವ ಹಿನ್ನಲೆ ದುನಿಯಾ ವಿಜಯ್ ಕಂಗಾಲಾಗಿದ್ದರು. ಶನಿವಾರ ದುನಿಯಾ ವಿಜಯ್​ ಅರ್ಜಿ ವಿಚಾರಣೆ ನಡೆಸಿದ 70ನೇ ಸೆಷನ್ಸ್​ ನಾಯಾಲಯದ ನ್ಯಾಯಾಧೀಶರು ಸೋಮವಾರಕ್ಕೆ ಅರ್ಜಿಯನ್ನು ಮುಂದೂಡಿತ್ತು.. ವಿಜಯ್​ ಸೇರಿ ಮಣಿ, ಡ್ರೈವರ್ ಪ್ರಸಾದ್​ ಅವರಿಗೂ ಜಾಮೀನು ಮಂಜೂರಾಗಿದ್ದು 1 ಲಕ್ಷ ರುಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದ್ದಾರೆ.  ಯಾವುದೇ ಕಾರಣಕ್ಕೂ ಪ್ರಭಾವ ಬೀರಿ ಸಾಕ್ಷಿ ನಾಶ ಪಡಿಸವಂತಿಲ್ಲ. ಅವಶ್ಯವಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎನ್ನುವ ಕೆಲ ಷರತ್ತುಗಳನ್ನು ಹಾಕಲಾಗಿದೆ.

 

 

ಇವತ್ತು ಹೊರಬರೋದು ಡೌಟ್.
ದುನಿಯಾ ವಿಜಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ ಆದರೆ ಇದುವರೆಗೂ ಕೋರ್ಟ್​ನ ಜಾಮೀನಿನ ಆದೇಶ ಪ್ರತಿ ವಿಜಿ ವಕೀಲರ ಕೈಗೆ ಸಿಕ್ಕಿಲ್ಲ. ಸದ್ಯ ಕೋರ್ಟ್​ನ ಆದೇಶ ಪ್ರತಿಗಾಗಿ ಕಾಯುತ್ತಿದ್ದು ಜಾಮೀನು ಸಿಕ್ಕಿದ್ದರೂ ವಿಜಿ ಇವತ್ತು ಹೊರ ಬರೋದು ಅನುಮಾನವಾಗಿದೆ.. ಯಾಕೆಂದರೆ ಜಾಮೀನು ಆದೇಶ ಪ್ರತಿಯನ್ನು ಪಡೆದುಕೊಂಡ ನಂತರ ಕೋರ್ಟ್​ಗೆ ಷರತ್ತುಗಳನ್ನ ಪೂರೈಕೆ ಮಾಡಬೇಕಾಗುತ್ತದೆ. ಆದರೆ ಅಷ್ಟರೊಳಗೆ ಕೋರ್ಟ್​ ಕಲಾಪ ಮುಗಿದು ಹೋದರೆ ದುನಿಯಾ ವಿಜಯ್​ಗೆ ಜೈಲೇ ಗತಿಯಾಗಬಹುದು. ಹಾಗೇನಾದರೂ ಇಂದು ದುನಿಯಾ ವಿಜಯ್ ಜೈಲಿನಿಂದ ಹೊರ ಬರಲು ಸಾದ್ಯವಾಗದಿದ್ದರೇ ಇನ್ನೂ ಎರಡು ರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಳೆಯಬೇಕಾಗುತ್ತದೆ. ಯಾಕೆಂದರೆ ನಾಳೆ ಗಾಂಧಿ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ ನ್ಯಾಯಾಲಯದ ಯಾವುದೇ ಪ್ರಕ್ರಿಯೆ ನಡೆಯೋದಿಲ್ಲ. ಆದ್ದರಿಂದ ನಾಳಿದ್ದು ದುನಿಯಾ ವಿಜಯ್ ಜೈಲಿನಿಂದ ಆಚೆ ಬರಬೇಕಾಗುತ್ತದೆ.

ಏನಿದು ಘಟನೆ?
“ವಸಂತನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮಿ.ಬೆಂಗಳೂರು ದೇಹದಾರ್ಢ್ಯ ಸ್ಪರ್ಧೆ ಏರಪಟ್ಟಿತ್ತು. ಈ ಸ್ಪರ್ಧೆಯನ್ನು ನೋಡಲು ದುನಿಯಾ ವಿಜಿ ತಮ್ಮ ಸಹಚರರೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮಾತು ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ. ದುನಿಯಾ ವಿಜಯ್ ಮತ್ತು ಅವರ ಸಹಚರರು ಮಾರುತಿಗೌಡನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಹೇಳಲಾಗಿದೆ.. ಈ ಬಗ್ಗೆ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿದ್ದರು.

ನಂತರ ದುನಿಯಾ ವಿಜಯ್ ಸೆಪ್ಟೆಂಬರ್26ಕ್ಕೆ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು. ಬಳಿಕ, ಸೆಷನ್ಸ್​ ಕೋರ್ಟ್​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top