ಮನೋರಂಜನೆ

‘ಕಿನಾರೆ’ ಚಿತ್ರತಂಡದ ವಿರುದ್ಧ ಹಿಂದೂ ಪರ ಸಂಘಟನೆಗಳ ಆಕ್ರೋಶ- ನಿರ್ದೇಶಕನ ಮೇಲೆ ಹಲ್ಲೆ.

ಕಳೆದವರವಷ್ಟೇ ತೆರೆ ಕಂಡ ಕನ್ನಡದ ‘ಕಿನಾರೆ’ ಚಿತ್ರ ಇದೀಗ ಹೂಸದೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದು, ಸಮಸ್ಯೆಗೆ ಸಿಲುಕಿಕೊಂಡಿದೆ. ಚಿತ್ರದ ಐಟಂ ಸಾಂಗ್​ನಲ್ಲಿ ಓಂ ಚಿಹ್ನೆ ಇರುವ ಬಾವುಟಗಳನ್ನು ಬಳಸಿಕೊಂಡಿರುವುದು ಈಗ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.

 

 

ಚಿತ್ರದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಮತ್ತು ವಿಜಯ್ ಪ್ರಕಾಶ್ ಗಾಯನವಿರುವ ಐಟಂ ಸಾಂಗ್​ನಲ್ಲಿನ ಡ್ಯಾನ್ಸ್ ದೃಶ್ಯಕ್ಕೆ ‘ಓಂ’ ಚಿತ್ರ ಇರುವ ಬಾವುಟಗಳನ್ನು ಬಳಸಿಕೊಳ್ಳಲಾಗಿದ್ದು ಐಟಂ ಹಾಡಿಗೆ `ಓಂ’ ಚಿತ್ರ ಇರುವ ಬಾವುಟಗಳನ್ನು ಬಳಸುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಹಾಡನ್ನು ಚಿತ್ರದಿಂದ ತೆಗೆದುಹಾಕಬೇಕು ಎಂದು ಕೆಲ ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಐಟಂ ಹಾಡಿನಲ್ಲಿ ಓಂ ಚಿಹ್ನೆ ಬಳಸಿರುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡವ ಹಾಗೆ ಇದೆ. ಹಾಗಾಗಿ ಈ ಹಾಡನ್ನು ಕೊಡಲೇ ಚಿತ್ರದಿಂದ ತೆಗೆದುಹಾಕಿ ಎಂದು ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ನಿರ್ದೇಶಕನ ಮೇಲೆ ಸುಮಾರು 5-6 ಜನರು ದಾಳಿ ಮಾಡಿದ್ದು ಅವರ ಕಾರಿನ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಧ್ಯಾಹ್ನ ಮಾಗಡಿ ರಸ್ತೆಯಲ್ಲಿರುವ ಸುಜಾತ ಟಾಕೀಸ್ ಬಳಿ ಈ ಘಟನೆ ನಡೆದಿದೆ.

 

 

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ನಿರ್ದೇಶಕ ದೇವರಾಜ್ “ಸದ್ಯ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿರುವುದರಿಂದ ಹಾಡನ್ನು ತೆಗೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top