ಸಮಾಚಾರ

ಪ್ರಧಾನಿ ಮೋದಿಗೆ ನೇರ ಸವಾಲು ಹಾಕಿದ ಕಮಲ್​ ಹಾಸನ್.

ಮಕ್ಕಳ ನೀದಿ ಮಯ್ಯಮ್ ಪಕ್ಷದ ಮುಖ್ಯಸ್ಥ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಅವರಿಗೆ ಸವಾಲೊಂದನ್ನ ಹಾಕಿದ್ದಾರೆ. ವಿವಾದಾತ್ಮಕ ರಫೇಲ್ ಡೀಲ್ ಕುರಿತಂತೆ ಕೇಳಲಾಗುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಈ ವಿಚಾರದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮೋದಿಗೆ ಕಮಲ್ ಹಾಸನ್ ಸವಾಲಾಕಿದ್ದಾರೆ..

“ರಫೇಲ್ ಡೀಲ್ ಕುರಿತಂತೆ ನಮಗೂ ಅನುಮಾನವಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು.., ಬಿಜೆಪಿ ಈ ಎಲ್ಲಾ ಆರೋಪಗಳಿಂದ ಹೊರ ಬರಬೇಕಾದರೆ, ಮೋದಿ ಸರ್ಕಾರ ರಫೇಲ್​ ವಿಮಾನ ಖರೀದಿ ವಿರುದ್ಧ ಕೇಳಿಬರ್ತಿರೋ ಆರೋಪ ಸಂಬಂಧ ತನಿಖೆಗೆ ಆದೇಶಿಸಬೇಕು. ನಾವು ಯಾರನ್ನೂ ಅಪರಾಧಿಗಳು ಎಂದು ಹೇಳುತ್ತಿಲ್ಲ. ಆದರೆ ಕೆಲವರ ಮೇಲೆ ಅನುಮಾನವಿದೆಯಷ್ಟೇ. ಹಾಗೇನಾದರೂ ಅವರು ನಿರಪರಾಧಿಗಳೆಂದಾದಲ್ಲಿ ಭಯ ಪಡಲು ಏನೂ ಇಲ್ಲ.” ಎಂದು ಮಾಧ್ಯಮದವರೊಂದಿಗೆ ಕಮಲ್ ಹೇಳಿದ್ದಾರೆ.

 

 

ಇಂಧನ ದರ ಏರಿಕೆಯ ಬಗ್ಗೆಯೂ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಮಲ್ “ತೈಲ ಬೆಲೆಯಲ್ಲಿ ಏರಿಕೆ ಆಗಿರುವುದು ಉಳಿದೆಲ್ಲಾ ಸರಕುಗಳ ಬೆಲೆಯಲ್ಲಿ ಏರಿಕೆಯಾಗಲು ಕಾರಣವಾಗಿದೆ, ಯುಪಿಎ ಸರ್ಕಾರದಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಪೆಟ್ರೋಲ್ ಬೆಲೆಯೇರಿಕೆ ವಿರೋಧಿಸಿ ಅದು ಪ್ರತಿಭಟನೇ ನಡೆಸಿತ್ತು , ಆದರೆ ಈಗ ಅದು ಏಕೆ ಮೌನವಾಗಿದೆ ?” ಎಂದು ಪ್ರಶ್ನಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top