ಮನೋರಂಜನೆ

“ಪ್ರಪಂಚ ತೆಲೆಕೆಳಗಾದರೂ ಗಂಡನನ್ನು ಬಿಡಲ್ಲ” ಕೀರ್ತಿ ಗೌಡ.

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಕಳೆದು ಒಂದು ವಾರದಿಂದ ಜೈಲಿನಲ್ಲಿಯೇ ಕಾಲ ಕಳೆಯುತ್ತಿರುವ ದುನಿಯಾ ವಿಜಯ್​ಗೆ ಸೆಷನ್ಸ್ ಕೋರ್ಟ್ ಕಡೆಗೂ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಎರಡು ಬಾರಿ ಜಾಮೀನು ಅರ್ಜಿ ನಿರಾಕರಣೆಯಾಗಿರುವ ಹಿನ್ನಲೆ ದುನಿಯಾ ವಿಜಯ್ ಕಂಗಾಲಾಗಿದ್ದರು. ಶನಿವಾರ ದುನಿಯಾ ವಿಜಯ್​ ಅರ್ಜಿ ವಿಚಾರಣೆ ನಡೆಸಿದ 70ನೇ ಸೆಷನ್ಸ್​ ನಾಯಾಲಯದ ನ್ಯಾಯಾಧೀಶರು ಸೋಮವಾರಕ್ಕೆ ಅರ್ಜಿಯನ್ನು ಮುಂದೂಡಿತ್ತು.. ವಿಜಯ್​ ಸೇರಿ ಮಣಿ, ಡ್ರೈವರ್ ಪ್ರಸಾದ್​ ಅವರಿಗೂ ಜಾಮೀನು ಮಂಜೂರಾಗಿದ್ದು 1 ಲಕ್ಷ ರುಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದ್ದಾರೆ.  ಯಾವುದೇ ಕಾರಣಕ್ಕೂ ಪ್ರಭಾವ ಬೀರಿ ಸಾಕ್ಷಿ ನಾಶ ಪಡಿಸವಂತಿಲ್ಲ. ಅವಶ್ಯವಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎನ್ನುವ ಕೆಲ ಷರತ್ತುಗಳನ್ನು ಹಾಕಲಾಗಿದೆ.

 

 

ಗಂಡನಿಗೆ ಜಾಮೀನು ಮಂಜೂರಾಗುತ್ತಿದ್ದಂತೆ ವಿಜಯ್ ಅವರ ಎರಡನೇ ಹೆಂಡತಿ ಕೀರ್ತಿ ಹರ್ಷಗೊಂಡಿದ್ದು, “ಅವರಿಗಾಗಿ ನಾನು ಕಾದು ಕುಳಿತಿದ್ದೇನೆ. ಅವರೇ ನನ್ನ ಸರ್ವಸ್ವ” ಎಂದಿದ್ದಾರೆ. ವಿಜಿಗೆ ಜಾಮೀನು ಸಿಗುತ್ತಿದ್ದಂತೆಯೇ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕೀರ್ತಿ “ನನ್ನ ಮತ್ತು ವಿಜಯ್ ಸಂಬಂಧದ ಕುರಿತು ಯಾರು ಏನೇ ಮಾತನಾಡಿದರೂ ನಾನು ತಲೆಕೆಡಿಸಿಕೊಳ್ಳಲ್ಲ. ಮಾತನಾಡುವವರು ಯಾರೂ ಬಂದು ನಮ್ಮ ಜೊತೆ ಸಂಸಾರ ಮಾಡೋದಿಲ್ಲ.”

“ವಿಜಯ್ ಅವರು​ ನಾಗರತ್ನ ಅವರನ್ನು ಯಾಕೆ ಬಿಟ್ಟಿದ್ದಾರೆ ಎಂಬುದರ ಬಗ್ಗೆ ನನಗೆ ಏನು ಗೊತ್ತಿಲ್ಲ., ವಿಜಯ್​ ಜೈಲು ಸೇರುತ್ತಿದ್ದಂತೆ ನಾಗರತ್ನ ಯೋಜನೆ ರೂಪಿಸಿ ನನ್ನನ್ನು ಸಂಕಷ್ಟದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದರು ಆದರೆ ಸತ್ಯ ಏನೆಂಬುದು ಎಲ್ಲರಿಗೂ ಗೊತ್ತಾಗಲಿದೆ. ವಿಜಯ್ ಬೇಗ ಹೊರಗೆ ಬರಲಿ ಎಂದು ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತಿದ್ದೆ. ನನ್ನ ಪ್ರಾರ್ಥನೆ ಫಲಿಸಿದೆ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top