fbpx
ದೇವರು

ಮೈಸೂರು ಅಂದ್ರೆ ಮೊದಲು ನೆನಪಿಗೆ ಬರೋದು ವೈಭವಯುತ ಮೈಸೂರು ದಸರಾ, 4 ಶತಮಾನಗಳ ಇತಿಹಾಸವಿರೋ ಮೈಸೂರು ದಸರಾ ಬಗ್ಗೆ ನಿಮಗೆಷ್ಟು ಗೊತ್ತು,ಗೊತ್ತಿಲ್ಲ ಅಂದ್ರೆ ತಿಳ್ಕೊಳ್ಳಿ

ಮೈಸೂರು ದಸರಾ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು ?ಮೈಸೂರು ದಾಸರಾಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದೆ.
ಮೈಸೂರು ದಸರಾ ಹತ್ತು ದಿನಗಳ ಕಾಲ ನಡೆಯುವ ಬಹು ವೈಭವೋಪ್ರೇರಿತವಾಗಿ ಆಚರಿಸಲ್ಪಡುವ ಮಹಾ ಮಹೋತ್ಸವವಿದು ನವರಾತ್ರಿ. ನಮ್ಮ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ,ವಿಶ್ವವ್ಯಾಪಿ. ಅಷ್ಟೇ ಅಲ್ಲ ಈ ನಮ್ಮ ದಸರಾ ವಿಶ್ವವ್ಯಾಪಿ ಜನಾಕರ್ಷಣೆ ಹೊಂದಿರುವ ಮೈಸೂರು ದಸರಾಕ್ಕೆ ಎರಡು ಭಾಗಗಳು. ಮೊದಲನೆಯದು ಒಂಬತ್ತು ದಿನಗಳ ನವರಾತ್ರಿ ಯಾದರೆ, ಎರಡನೆಯದು ಹತ್ತು ದಿನಗಳ ವಿಜಯದಶಮಿ.
ಮೊದಲನೆಯದು ರಾಜವಂಶಸ್ಥರ ಅರಮನೆಯೊಳಗಿನ ಸಾಂಪ್ರದಾಯಿಕ ವಿಧಿ ವಿಧಾನವಾದರೆ, ಎರಡನೆಯದು ಸರ್ವರಿಗೂ ಮುಕ್ತವಾಗಿ ಅನಾವರಣಗೊಳ್ಳುವ ಸಾರ್ವಜನಿಕರದ್ದು. ನಮ್ಮ ಸಂಸ್ಕೃತಿ, ಧಾರ್ಮಿಕ ಪರಂಪರೆಯ ಶಕ್ತಿರೂಪದ ಸಂಕೇತವಾಗಿರುವ ಈ ನವರಾತ್ರಿ ಉತ್ಸವ, ವಿಜಯದಶಮಿ ಮೈಸೂರು ದಸರಾ ಎಂದೇ ಪ್ರಸಿದ್ಧಿಯಾಗಿದೆ.

 

 

 

ದೇಶದ ಹಲವು ಕಡೆಗಳಲ್ಲಿ ದಸರಾ ಉತ್ಸವಗಳು ನೆಡೆಯುವುದುಂಟು.ಆದರೆ ಮೈಸೂರು ದಸರಾ ಹಬ್ಬವು ನಾನಾ ಕಡೆಗಳಲ್ಲಿ ನಡೆಯುವುದು ಉಂಟು. ಅದು ಎಲ್ಲರಿಗೂ ಗೊತ್ತಿದೆ. ಆದರೆ ಮೈಸೂರು ದಸರಾದ ವಿಶೇಷ ವೈಭವವೇ ಬೇರೆ. ಇಡೀ ವಿಶ್ವವೇ ತಿರುಗಿ ನೋಡುವಂತಹದ್ದು.ಯಾರೇ ಆಗಲಿ ಆ ಕ್ಷಣಕ್ಕೆ ಮೈಸೂರು ದಸರಾ ಎಂದ ತಕ್ಷಣ ಏನೋ ಒಂದು ತರಹ ಮೈ ಮನ ಪುಳಕಿತಗೊಂಡು ರೋಮಾಂಚನವಾಗಿ ಮಿತಿ ಮೀರಿದ ಆನಂದ ಕಣ್ಣ ಮುಂದೆ ಚೆಂದದ ಮೈಸೂರು ಅರಮನೆ, ಸುಂದರವಾದ ಚಿನ್ನದ ಅಂಬಾರಿಗಳು, ಮನ ಸೆಳೆಯುವ ರತ್ನ ಸಿಂಹಾಸನ. ಸಿಂಹಾಸನಾಧೀಶರಾಗಿ ಮೆರೆದ ಮಹಾರಾಜರುಗಳ ವೈಭವ ವೈಭೋಗ ಗಳೆಲ್ಲವೂ ನೆನಪಿನ ಮೆರವಣಿಗೆಯಾಗಿ ಕಣ್ಮುಂದೆ ತೇಲಿ ಬರುತ್ತವೆ.
ಇದರ ಜೊತೆಗೆ ಮೈಸೂರು ದಸರಾದ ಜಂಬೂ ಸವಾರಿಯಂತೂ ಮತ್ತೆ ಮತ್ತೆ ಕಣ್ಣಿಗೆ ಕಟ್ಟಿದಂತೆ ನೆನಪಿಗೆ ಬರುತ್ತದೆ.ಕಣ್ಣಿನ ಪರದೆಯಲ್ಲಿ ಹಾದು ಹೋಗುವಂತದ್ದು, ಇದೆ ನೋಡಿ ಮೈಸೂರು ದಸರಾದ ವೈಶಿಷ್ಟ್ಯತೆ. ಒಂದು ಕಾಲದಲ್ಲಿ ಆಳರಸರ ಮಹೋತ್ಸವವಾಗಿ ಮೆರೆದು, ಇಂದು ಬದಲಾದ ಕಾಲಘಟ್ಟದಲ್ಲಿ ನಾಡ ಹಬ್ಬವೆಂದು ಕರೆಯಲ್ಪಡುತ್ತಿರುವ ಮೈಸೂರು ದಸರಾದ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ.

ಮೈಸೂರಿನ ಅಧಿದೇವತೆಯಾದ ಶ್ರೀ ಚಾಮುಂಡೇಶ್ವರಿ.ಇನ್ನೂ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಂದಿಗೆ ಆರಂಭವಾಗುವ ನವರಾತ್ರಿ ವೈಭವದ ಯಾತ್ರೆ. ವಿಜಯದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದ್ದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಗಳು ಸಾಕಷ್ಟು ಉಂಟು. ಕರ್ನಾಟಕದಲ್ಲಿನ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ, ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ, ವೈಭವದಿಂದ ಮೆರೆಯುವ ನಮ್ಮ ವಿಜಯನಗರದ ಅರಸರು ಅವರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿರುವ, ನವರಾತ್ರಿ ಉತ್ಸವದ ವಿಜಯದಶಮಿಯು ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದು ಕೊಟ್ಟವರು ವಿಜಯನಗರದ ಅರಸರಲ್ಲಿ ಅತ್ಯಂತ ಪ್ರಖ್ಯಾತರಾಗಿದ್ದ ನಮ್ಮ ಶ್ರೀಕೃಷ್ಣ ದೇವರಾಯರು.
ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯವಿಠಲ ದೇವಾಲಯಗಳು ಈ ಮಹೋತ್ಸವದ ಕೇಂದ್ರಗಳಾಗಿದ್ದವು. ಈಗ ಅವು ಪ್ರತ್ಯಕ್ಷ ಸಾಕ್ಷಿಗಳಾಗಿವೆ.ತಮ್ಮ ಸಾಮ್ರಾಜ್ಯದ ಶಕ್ತಿ, ಸಾಮರ್ಥ್ಯ, ಸಂಪತ್ತು, ಸಮೃದ್ಧಿ ,ವೈಭೋಗ,ವೈಭವ, ವೀರತ್ವ,ಧೀರತ್ವ ಮತ್ತು ಕಲೆ, ಸಾಹಿತ್ಯ, ಸಂಗೀತ,ನೃತ್ಯ, ಸಂಸ್ಕೃತಿ, ಸಂಪನ್ನತೆ ಹೀಗೆ ಸಕಲ ವಿಧಗಳಲ್ಲೂ ತಮ್ಮ ಹಿರಿಮೆ ಗರಿಮೆಗಳನ್ನು ತೋರ್ಪಡಿಸಿಕೊಳ್ಳುವ ಮೂಲಕ ಬಹು ಮುಖ್ಯವಾಗಿ ನಿಜವಾಗಿ ವಿಜಯದಶಮಿಯಂದು ದಸರಾ ಮಹೋತ್ಸವವನ್ನು ವಿಜಯನಗರದ ಅರಸರು ಆಚರಿಸುತ್ತಿದ್ದರು.

 

 

 

ಈ ದಸರಾದ ವಿಜಯದಶಮಿಯ ಮಹೋತ್ಸವವನ್ನು ವೀಕ್ಷಿಸಲು ದೇಶ ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಇಲ್ಲಿಗೆ ಬಂದು ಭೇಟಿ ನೀಡಿ, ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಹನ್ನೊಂದನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಾದ ಅಲ್ಬೇರೂನಿ , 15 ಹಾಗೂ 16ನೇ ಶತಮಾನದಲ್ಲಿ ಬಂದಿದ್ದ ರಶ್ಯಾದ ಅಬ್ದುಲ್ ರಜಾಕ್, ಇಟಾಲಿಯನ ನಿಕೋಲ ಕೊಂಟಿ, ಪೋರ್ಚುಗೀಸ್ ಡೊಮಿನ್ ಗೋಪಾಯಾಸ್ ಮುಂತಾದವರೆಲ್ಲ ವಿಜಯನಗರ ಸಾಮ್ರಾಜ್ಯದ ವೈಭವೋಪ್ರೇರಿತವಾದ ಮೈಸೂರು ದಸರಾವನ್ನು ಕೊಂಡಾಡಿ, ಹಾಡಿ, ಹೊಗಳಿ ತಮ್ಮ ಪ್ರವಾಸ ಕಥನಗಳಲ್ಲಿ ಉಲ್ಲೇಖಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top