fbpx
ಸಮಾಚಾರ

“ಜೀವನದಲ್ಲಿ ನಾನು ಅಂದುಕೊಂಡಂತೆ ಏನು ಆಗಿಲ್ಲ,ಹೀಗೆ ಆಗುತ್ತೆ ಅಂತ ನಾನು ಕನಸಿನಲ್ಲೂ ಅನ್ಕೊಂಡಿರಲಿಲ್ಲ” -ನಟಿ ರಮ್ಯಾ

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ.. ಆಗ್ಗಾಗ್ಗೆ ಪ್ರಧಾನಿ ಮೋದಿಯನ್ನು ಅಣಕಿಸದೆ ಇದ್ದರೇ ರಮ್ಯಾಗೆ ನೆಮ್ಮದಿಯಾಗೊಲ್ಲವಾ? ಹೀಗೊಂದು ಪ್ರಶ್ನೆ ಒಂದು ಕಾಲದಲ್ಲಿ ಅವರನ್ನು ಆರಾಧಿಸುತ್ತಿದ್ದ ಅಭಿಮಾನಿಗಳನ್ನು ಕಾಡುತ್ತಿದ್ದರೆ ಅಚ್ಚರಿಯೇನಿಲ್ಲ.ಪದೇ ಪದೇ ಪ್ರಧಾನಿ ಮೋದಿಯವರನ್ನು ಕೆಣಕುವಂತ ಮತ್ತು ಅವರನ್ನು ಅಣಕಿಸುವಂತ ಅವಹೇಳನಕಾರಿ ಟ್ವೀಟ್ ಮಾಡುವುದೇ ತನ್ನ ಕಸುಬನ್ನಾಗಿಸಿಕೊಂಡಿರುವ ರಮ್ಯಾ ಇದೀಗ ಮತ್ತೊಮ್ಮೆ ಮೋದಿಯನ್ನು ನೇರಾ ನೇರಾವಾಗಿ ಅಣಕಿಸಿದ್ದರು ,ಈ ಬಗ್ಗೆ ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು.. ಹತ್ತು ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವ್ಯಕ್ತಿಯೊಬ್ಬರು ಹೇಳಿದ್ದರು., ಆದರೆ ಈ ಯಾವುದಕ್ಕೂ ಜಗ್ಗದ ರಮ್ಯಾ ಇದೀಗ ಮೋದಿಯನ್ನು ಮತ್ತೊಮ್ಮೆ ‘ಕಳ್ಳ’ ಎಂದು ಫುಲ್ ಸುದ್ದಿಯಲ್ಲಿ ಇದ್ದರು.

 

 

 

ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಕ್ವೀನ್​ ಆಗಿ ಮೆರೆದ ರಮ್ಯಾ ಈಗ ಈ ವಿಷಯಕ್ಕೆ ಮತ್ತೆ ಸುದ್ದಿಯಲ್ಲಿ ಇದ್ದಾರೆ ,ರಮ್ಯಾ ಬಯಸಿದಂತೇ ಏನು ಆಗಿಲ್ಲವಂತೆ ,ಸ್ವಂತ ಅವರೇ ಹೇಳುವ ಪ್ರಕಾರ ತಾನು ಅಂದು ಕೊಂಡಿದ್ದೇನೋ ಆಗಿಲ್ಲ, ಬಯಸಿದ್ದೂ ಆಗಿಲ್ಲವಂತೆ, ರಮ್ಯಾರವರಿಗೆ ಬಯಸಿದ್ದು ಯಾವುದು ಸಿಕ್ಕಿಲ್ವಂತೆ, ನಾನು ನಟಿ ಆಗಲು ಬಯಸಿರಲಿಲ್ಲ ಆದರೂ ನಟಿಯಾದೆ, ರಾಜಕೀಯಕ್ಕೆ ಬರಲು ಇಚ್ಚಿಸಿರಲಿಲ್ಲ. ಆದರೂ ರಾಜಕಾರಣಕ್ಕೆ ಬಂದೆ. ಜೀವನ ಹೇಗೆಲ್ಲಾ ಕರೆದುಕೊಂಡು ಹೋಗುತ್ತಿದೆಯೋ ಹಾಗೆಲ್ಲಾ ನಾನು ಬದುಕನ್ನ ಸ್ವೀಕರಿಸುತ್ತಿದ್ದೇನೆ ಎಂದು ನಟಿ ಹಾಗೂ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಹಾಗೇ ಮಾತನಾಡುತ್ತಾ ಸೋಶಿಯಲ್​ ಮಿಡಿಯಾ ಬದುಕಿನ ಪ್ರತಿಬಿಂಬ ಇದ್ದಂತೆ ಎಂದು ಅವರ ಅಭಿಪ್ರಾಯವನ್ನು ಹೊರಹಾಕಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top