ದೇವರು

ಮನುಷ್ಯ ಸತ್ತ ನಂತರ ಮೆರವಣಿಗೆಯನ್ನು ಯಾಕೆ ಮಾಡುತ್ತಾರೆ ,ಅದರ ಹಿಂದೆ ಇರೋ ಕಾರಣ ಗೊತ್ತಾ ನಿಮಗೆ

“ಕಣ್ಣು ಬಿಟ್ಟರೆ ಜನನ, ಕಣ್ಣು ಮುಚ್ಚಿದರೆ ಮರಣ” ಕಣ್ಣು ಬಿಡುವುದಕ್ಕೆ ಮುಚ್ಚುವುದಕ್ಕೆ ಮಧ್ಯದಲ್ಲಿರುವುದೇ ಜೀವನ. ಜೀವನ ಎಷ್ಟು ಚಿಕ್ಕದು ನಾವು ಎಚ್ಚರವಾಗಿದ್ದರೂ, ಮಲಗಿದ್ದರೂ, ಜೀವನ ಕರಗಿ ಹೋಗುತ್ತಾನೆ ಇರುತ್ತದೆ.
ದಿನ ಕಳೆದಂತೆ ನಾವು ಮರಣದ ಸಮೀಪ ಹೋಗುತ್ತಾನೆ ಇರುತ್ತೇವೆ. ಕಳೆದು ಹೋದ ಪ್ರತಿ ದಿನವೂ ನಮ್ಮನ್ನು ಮರಣದ ಕಡೆಗೆ ತಳ್ಳುತ್ತಾ ಬರುತ್ತದೆ. ಬದುಕುವುದಕ್ಕೆ ಪ್ರತಿದಿನ ಹತ್ತಾರು ಬಾರಿ ಯೋಚನೆ ಮಾಡುತ್ತಾ ಇರುತ್ತೇವೆ. ಆದರೆ ಮರಣದ ಬಗ್ಗೆ ಯಾವತ್ತೂ ಕೂಡ ಯೋಚನೆ ಮಾಡುವುದೇ ಇಲ್ಲ. ಅದನ್ನು ಊಹಿಸಿಕೊಳ್ಳುವುದಕ್ಕೂ ಕೂಡ ಭಯವನ್ನು ಪಡುತ್ತೇವೆ. ಅಂತಹ ಆಲೋಚನೆಗಳನ್ನು ನಮ್ಮ ಹತ್ತಿರ ಕೂಡ ಸುಳಿಯಲು ಬಿಡುವುದಿಲ್ಲ. ಸಾವು ಖಚಿತ ಎಂದು ಗೊತ್ತಿದ್ದರೂ ಕೂಡ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಎಂದು ಗೊತ್ತಿದ್ದರೂ ಸಾವಿಗೆ ಭಯಪಡುತ್ತೇವೆ.

 

 

 

ಮನುಷ್ಯ ಸತ್ತ ನಂತರ ಮೆರವಣಿಗೆ ಹಿಂದೆ ಇರುವ ರಹಸ್ಯ ಏನು ? ತುಂಬಾ ಜನ ಇದನ್ನು ಒಂದು ಸಂಪ್ರದಾಯ ಅಥವಾ ಆಚಾರ ಎಂದು ಅಂದುಕೊಂಡಿದ್ದಾರೆ. ಸತ್ತವರನ್ನು ಮೆರವಣಿಗೆ ಮಾಡುವುದಕ್ಕೆ ಕಾರಣ ಮತ್ತು ಶವವನ್ನು ಮೆರವಣಿಗೆ ಮಾಡುತ್ತಾ ಹಣವನ್ನು ಚೆಲ್ಲುತ್ತಾರೆ ಯಾಕೆ ಗೊತ್ತಾ ?
ಸಂಪಾದನೆ ಮಾಡಿದ ಹಣವನ್ನು ಈ ಸತ್ತ ಮನುಷ್ಯ ತೆಗೆದುಕೊಂಡು ಹೋಗುವುದಿಲ್ಲ. ಅದಕ್ಕೆ ದಾರಿಯುದ್ದಕ್ಕೂ ಹಣವನ್ನು ಚೆಲ್ಲುತ್ತಾ ಇದ್ದೇವೆ ಎಂದು ಪರೋಕ್ಷವಾಗಿ ಹೇಳಲಾಗುತ್ತದೆ. ಇದು ಜನರೆಲ್ಲರಿಗೂ ತಿಳಿಸುವುದು ಇದರ ಹಿಂದಿರುವ ಪರಮಾರ್ಥ. ಅದಕ್ಕೆ ಸತ್ತವರನ್ನು ಮೆರವಣಿಗೆ ಮಾಡುತ್ತಾರೆ. ಇದರಲ್ಲಿ ಒಂದು ನಿಗೂಢ ಸತ್ಯ ಇದೆ . ಅದನ್ನು ಕೂಡ ತಿಳಿದುಕೊಳ್ಳಲೇಬೇಕು.

“ಓ ಮಾನವ ಜೀವನ ತುಂಬಾ ಚಿಕ್ಕದು. ಯಾವಾಗಲೂ ನಿನಗಾಗಿ ಮತ್ತು ನಿನ್ನ ಕುಟುಂಬಕ್ಕಾಗಿ ಏನಾದರೂ ಸಾಧಿಸಬೇಕು, ಸಂಪಾದಿಸಬೇಕು ಎಂದು ಆತುರ ಪಡುತ್ತಿದ್ದೀಯ. ಅದನ್ನು ಬಿಟ್ಟರೆ ನಿನ್ನ ಸುತ್ತ ನಿನ್ನ ಜೊತೆಯಾಗಿ ತುಂಬಾ ಜನ ಇದ್ದಾರೆ ಎಂದು ಮರೆತು ಹೋಗುತ್ತಿದ್ದೀಯಾ, ನೀನು ಸತ್ತರೆ ಸ್ಮಶಾನದವರೆಗೂ ಬರುವುದಕ್ಕೆ, ದಹನ ಸಂಸ್ಕಾರ ಮಾಡುವುದಕ್ಕೆ ಹತ್ತಾರು ಜನ ಬೇಕು. ಇಲ್ಲವೆಂದರೆ ಅನಾಥ ಶವವಾಗಿ ಅಂತಿಮ ಯಾತ್ರೆ ಮಾಡಬೇಕಾಗುತ್ತದೆ.
ಒಬ್ಬರ ಜೊತೆ ನನಗೆ ಏನು ಕೆಲಸ ಎಂದು ಅಂದುಕೊಳ್ಳಬೇಡ. ಎಲ್ಲರ ಜೊತೆ ಬೆರೆತು ಜೀವಿಸು ಎನ್ನುವ ಸತ್ಯ ಅಡಗಿದೆ . ನೀನು ಸತ್ತ ಮೇಲೆ ನೀನು ಸಂಪಾದಿಸಿದ ಆಸ್ತಿ, ಹಣ ಇದ್ಯಾವುದು ನಿನ್ನ ಹಿಂದೆ ಬರುವುದಿಲ್ಲ. ನಿನ್ನ ದೇಹದ ಮೇಲೆ ಬಂಗಾರ ಇದ್ದರೂ ಅದನ್ನು ತೆಗೆದು ನಿನ್ನನ್ನು ಸ್ಮಶಾನಕ್ಕೆ ಕಳುಹಿಸುತ್ತಾರೆ. ಇದನ್ನು ಮರೆಯಬೇಡ. ಜೀವನ ಎನ್ನುವ ಮೂರು ದಿನದ ಮಾಯೆಯಲ್ಲಿ ಎಲ್ಲರಿಗೂ ಸಾವು ಖಚಿತ. ಎಲ್ಲರೂ ಯಾವುದೋ ಒಂದು ದಿನ ಸ್ಮಶಾನದ ದಾರಿಯಲ್ಲಿ ಹೋಗಲೇಬೇಕು. ಅರ್ಥ ಮಾಡಿಕೊಳ್ಳಿ ಇದೇ ಜೀವನ, ಜೀವನ ಎಂದರೆ ಇಷ್ಟೇ”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top