fbpx
ಸಮಾಚಾರ

ಈ ಊರಿನಲ್ಲಿ ಪ್ರತಿಯೊಬ್ಬರೂ ಕೋಟ್ಯಾಧೀಶ್ವರರಂತೆ ,ಅದಕ್ಕೆ ಕಾರಣ ಅವರು ಅನುಸರಿಸಿದ ಈ ಒಂದೇ ಒಂದು ಸೂತ್ರ

ಯಾವುದೇ ಕ್ಷೇತ್ರದಲ್ಲಾದರೂ ಯಾವುದೇ ವ್ಯಕ್ತಿಯಾದರೂ ವ್ಯಾಪಾರ ಮಾಡಿದರೆ ಮಾತ್ರ ಕೋಟ್ಯಾಧಿಪತಿ ಆಗುತ್ತಾನೆ.ಆದರೆ ಚೈನಾದಲ್ಲಿರುವ ಹಳ್ಳಿವಾಸಿಗಳು ಮಾತ್ರ ಹಾಗಲ್ಲ .ಕೇವಲ ವ್ಯವಸಾಯ ಮಾಡುತ್ತಲೇ ಕೋಟ್ಯಾಧೀಶ್ವರ ರಾಗಿದ್ದಾರೆ.ಇದು ನಿಜ ಚೀನಾದಲ್ಲಿರುವ ಹುಯಾಕ್ಸಿ ಎಂಬ ಹಳ್ಳಿಯಲ್ಲಿ ಎಲ್ಲರೂ ಕೋಟ್ಯಾಧೀಶ್ವರರೇ. ಒಬ್ಬರು ಸಹ ಬಡವರಿಲ್ಲ ಮತ್ತು ಎಲ್ಲರಿಗೂ ಸಹ ಬೆಲೆ ಬಾಳುವ ವಿಲಾಸಿ ಮನೆಗಳು, ಕಾರುಗಳಿವೆ. ಆದರೆ ಅವರು ಈಗಲೂ ಮಾಡುತ್ತಿರುವುದು ಪಶು ಸಂಗೋಪನೆ ಮತ್ತು ವ್ಯವಸಾಯ. ಇವುಗಳೆ ಇಲ್ಲಿನ ವಾಸಿಗಳಿಗೆ ಆದಾಯದ ಮೂಲಗಳು.

ಈ ರೀತಿಯಾಗಿ ಇಂದು ಪ್ರಪಂಚದಾದ್ಯಂತ ಎಲ್ಲರ ದೃಷ್ಟಿ ಈ ಹಳ್ಳಿಯ ಮೇಲೆತ್ತರಕ್ಕೆ ಏರಿದೆ. ಆದರೆ ಈ ಹಳ್ಳಿ ಅಷ್ಟು ಪ್ರಗತಿಯನ್ನು ಸಾಧಿಸುವುದಕ್ಕೆ ಕಾರಣ ಒಬ್ಬ ವ್ಯಕ್ತಿ ಅವರೇ ಯುರೇನ್ ಭಾವೋ.1961 ಒಂದರಲ್ಲಿ ಹುಯಾಕ್ಸಿ ಗ್ರಾಮಕ್ಕೆ ಯುರೇನ್ ಬಾವೋ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯದರ್ಶಿಯಾಗಿ ಆಯ್ಕೆಯಾದ. ಅಂನದಿಂದ ಇಂದಿನವರೆಗೂ ಪ್ರಗತಿಯ ಪಥದಲ್ಲಿ ಮುಂದುವರೆಯುತ್ತಲೇ ಇದೆ.ಹುಯಾಕ್ಸಿ ಹಳ್ಳಿ ಇರುವುದು ಒಂದು ಚದುರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಮಾತ್ರ ಆದರೂ ಇಲ್ಲಿ 1600 ಮನೆಗಳಿವೆ.
ಅವರು ಅನೇಕ ವರ್ಷಗಳಿಂದ ಒಗ್ಗಟ್ಟಾಗಿ ಇದ್ದು ಎಲ್ಲರೂ ಸೇರಿ ವ್ಯವಸಾಯವನ್ನು ಮತ್ತು ಪಶು ಸಂಗೋಪನೆಯನ್ನು ಮಾಡುತ್ತಾ ಬಂದಿದ್ದಾರೆ . ಆ ಗ್ರಾಮದಲ್ಲಿ ಬೆಲೆಬಾಳುವ ಕಾರುಗಳ ಜೊತೆಗೆ ಎತ್ತಿನ ಗಾಡಿಗಳು, ದನಗಳು ಇರುವುದು ಸರ್ವೇಸಾಮಾನ್ಯವಾಗಿ ಕಾಣಿಸುತ್ತದೆ.

 

 

 

ಈ ಹಳ್ಳಿ ಇಷ್ಟು ಅಭಿವೃದ್ಧಿ ಸಾಧಿಸುತ್ತಿರುವುದುರಿಂದ ಅದಕ್ಕೆ ಅಕ್ಕಪಕ್ಕದಲ್ಲಿ ಉದ್ಯಮಗಳು ಸ್ಥಾಪಿತವಾಗಿವೆ . ಅದರಲ್ಲಿ ಮುಖ್ಯವಾದವು ಕೃಷಿ ಆಧಾರಿತ ಉದ್ಯಮಗಳೇ ಸ್ಟೀಲ್ ಮಿಲ್ಸ್, ಟೆಕ್ಸ್ ಟೈಲ್ಸ್ ಪಾರ್ಕ್ ಗಳು ಸಹ ಈ ಹಳ್ಳಿಯಲ್ಲಿ ಸುತ್ತಮುತ್ತಲು ಸ್ಥಾಪಿತವಾಗಿರುವುದರಿಂದ ಇಂದು ಸಾವಿರಾರು ಜನರಿಗೆ ಉದ್ಯೋಗ ಸ್ಥಾನ ಸಿಕ್ಕಿದೆ. ಈ ಹಳ್ಳಿಯ ನಿವಾಸಿಗಳೆಲ್ಲರೂ ಹಲವು ಉದ್ಯಮಗಳಲ್ಲಿ ಪಾಲುದಾರರಾಗಿದ್ದಾರೆ. ಅವರಿಗೆ ಪ್ರತಿ ವರ್ಷವೂ ತುಂಬಾ ಹೆಚ್ಚಿನ ಆದಾಯವೂ ಬರುತ್ತಿದೆ. ಈ ಹಳ್ಳಿಯಲ್ಲಿನ ಜನರು ಹೀಗೆ ಕೋಟ್ಯಾಧೀಶ್ವರರಾದರು.
ಇಂದಿಗೂ ಅವರು ವ್ಯವಸಾಯವನ್ನೇ ಮಾಡುತ್ತ ಬಂದಿದ್ದಾರೆ ಮತ್ತು ಅವರ ಜೀವನವನ್ನು ವ್ಯವಸಾಯ ದಿಂದಲೇ ಸಾಗಿಸುತ್ತಿದ್ದಾರೆ. 55 ವರ್ಷಗಳಿಂದಲೂ ಅವರು ಪ್ರಗತಿಯ ಪಥದಲ್ಲಿ ಮುಂದುವರೆದಿದ್ದು ಯಾವುದೇ ತರಹದ ಬೇದ ಭಾವಗಳಿಲ್ಲದೆ ಜೀವನ ಸಾಗಿಸುತ್ತಿರುವುದರಿಂದ ಅವರ ಹಳ್ಳಿಯು ಪ್ರಪಂಚದಲ್ಲಿ ಆದರ್ಶ ಹಳ್ಳಿಯಾಗಿ ದಾಖಲೆಯನ್ನು ಸಾಧಿಸಿದೆ.ಇದರಿಂದ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top