ಸಮಾಚಾರ

ಅಗಲಿದ ತಾಯಿಯನ್ನು ನೆನೆದು ಭಾವುಕರಾದ ಸಾಧು ಕೋಕಿಲ.

ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಖ್ಯಾತ ಹಾಸ್ಯ ನಟ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲಾ ಭಾವುಕರಾಗಿದ್ದರೆ. ಇತ್ತೀಚಿಗೆ ತಾನೇ ವಿಧಿವಶರಾದ ಸಾಧು ಕೋಕಿಲ ಅವರ ತಾಯಿ ‘ಮಂಗಳ ಅವರನ್ನು ಅವರನ್ನು ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ನೆನೆದು ಸಾಧು ಕೋಕಿಲ ಭಾವುಕರಾದರು.

 

 

ಕಾರ್ಯಕ್ರಮದಲ್ಲಿ ಸ್ಪರ್ಧಿ ದೊಡ್ಡಪ್ಪಎಂಬಾತ ಪುನೀತ್ ರಾಜ್‍ಕುಮಾರ್ ಅಭಿನಯಿಸಿದ ‘ವಂಶಿ’ ಚಿತ್ರದ ‘ತಾಯಿ ತಾಯಿ’ ಹಾಡನ್ನು ಹಾಡಿದ್ದರು. ಈ ವೇಳೆ ಸಾಧು ಕೋಕಿಲಾ ಈ ಹಾಡನ್ನು ಕೇಳಿ ತಮ್ಮ ತಾಯಿಯನ್ನು ನೆನಪಿಸಿಕೊಂಡರು.

“ನನ್ನ ತಾಯಿ ಸಂಗೀತಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟಿದ್ದರು. ಅವರು ತಮ್ಮ ಕೊನೆ ಉಸಿರು ಇರೋವರೆಗೂ ಸಂಗೀತ ಕೇಳುತ್ತಿದ್ದರು. 55 ವರ್ಷ ನಮ್ಮ ತಂದೆ ಮತ್ತು ತಾಯಿ ಜೊತೆಯಾಗಿಯೇ ಇದ್ದರು. ಇಬ್ಬರೂ ಜೋಡಿ ಹಕ್ಕಿಗಳಂತೆ ಇದ್ದರು, ಆದರೆ ಈಗ ನಮ್ಮ ತಾಯಿ ಬಿಟ್ಟು ಹೋದರು. ನಮ್ಮ ತಾಯಿ ಇಲ್ಲದೆ ನಮ್ಮ ತಂದೆ ಅದೇಗೆ ಇರುತ್ತಾರೆ ಎಂಬುದೇ ನಮಗೆ ದೊಡ್ಡ ಪ್ರಶ್ನೆಜಿಯಾಗಿದೆ” ಎಂದು ಭಾವುಕರಾದ್ರು.

ಅನಾರೋಗ್ಯದಿಂದ ಬಳಲುತ್ತಿದ್ದ ‘ಮಂಗಳ’ ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ವಾರವಷ್ಟೇ ನಿಧನ ಹೊಂದಿದ್ದಾರೆ. ಮಂಗಳ ಅವರು ಆರ್ಕೇಸ್ಟ್ರಾದಲ್ಲಿ ಹಾಡುವ ಗಾಯಕಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top