ಮನೋರಂಜನೆ

ಕೆಟ್ಟ ಕಾಮೆಂಟ್ ಮಾಡಿದವರಿಗೆ ಮುಖಕ್ಕೆ ಹೊಡೆದಹಾಗೆ ಉತ್ತರಿಸಿ ಬಾಯಿ ಮುಚ್ಚಿಸಿದ ಸಮಂತಾ.

ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಸೌತ್ ಸುಂದರಿ ಸಮಂತಾ ಅಕ್ಕಿನೇನಿ ಕೂಡಾ ಇಂಥಾದ್ದೇ ಕಿರಿಕಿರಿಗೀಡಾಗಿದ್ದಾಳೆ!

 

 

ಮುಂಚಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ಸಮಂತಾ, ವಿಶೇಷ, ವಿಭಿನ್ನ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಜೊತೆ ಟಚ್ ನಲ್ಲಿ ಇರುತ್ತಾಳೆ. ಇದೇ ರೀತಿ ಮೊನ್ನೆ ಕೂಡ ಸ್ಪೇನ್​ನಲ್ಲಿನ ಕಳೆದ ಕೆಲವು ಚಿತ್ರಗಳನ್ನು ತಮ್ಮ ​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳನ್ನ ನೋಡಿ ಕಣ್ಣು ಕೆಂಪಾಗಿಸಿಕೊಂಡಿರುವ ಕೆಲ ನೆಟ್ಟಿಗರು ಸಮಂತಾ ಮೇಲೆ ಕೆಂಡಕಾರಲು ಆರಂಭಿಸಿದ್ದಾರೆ “ಸರಿಯಾದ ಬಟ್ಟೆ ಹಾಕು, ಈಗ ನಿನಗೆ ಮದುವೆಯಾಗಿದೆ. ಸರಿಯಾಗಿ ಬಟ್ಟೆ ಹಾಕುವುದನ್ನ ಕಲಿಯಬೇಕು. ನಾವು ನಿನ್ನಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಮೊದಲು ಈ ಫೋಟೋ ಡಿಲಿಟ್ ಮಾಡು. ಈ ರೀತಿ ಬಟ್ಟೆಗಳನ್ನ ಹಾಕಬೇಡ” ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ.

ತಮ್ಮ ಡ್ರೆಸ್ ಬಗ್ಗೆ ಕಾಮೆಂಟ್ ಮಾಡಿದವರ ವಿರುದ್ಧ ಕೋಪಗೊಂಡ ಸಮಂತಾ “ಮದುವೆಯಾದ ಮೇಲೆ ಹೇಗೆ ಇರಬೇಕು ಎಂದು ಹೇಳುವವರಿಗೆ ಮಧ್ಯದ ಬೆರಳು ತೋರಿಸುವ ಫೋಟೋ ಹಾಕಿ ನಂತರ ಥ್ಯಾಂಕ್ಯೂ” ಎಂದು ಮತ್ತೆ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಟ್ರೊಲ್ ಮಾಡುವವರ ಬಾಯಿಗೆ ಬೀಗ ಜಡಿದಿದ್ದಾರೆ.

ಇನ್ನು ಇಂಥಾ ಟ್ರಾಲ್ ಮಾಡೋದು ಅವರವರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಅಂಥವರೀಗ ಶಿಲ್ಪಾ ಶೆಟ್ಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಅದು ಜನರಿಗೆ ಆಕೆಯ ಮೇಲೆ ಅದೆಷ್ಟು ಗಮನವಿದೆ ಎಂಬುದರ ಸಂಕೇತ. ಇಂಥಾದ್ದಕ್ಕೆಲ್ಲ ಸಮಂತಾ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಅವರ ಅಭಿಮಾನಿಗಳು ವಾದಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top