ಮನೋರಂಜನೆ

ವಿಡಿಯೋ ಮೂಲಕ ಕ್ಷಮೆಯಾಚಿಸಿದ ಕಿಚ್ಚ ಸುದೀಪ್- ಕಾರಣವೇನು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ವಿಡಿಯೋ ಮೂಲಕ ಕ್ಷಮೆಯಾಚಿಸಿರುವ ಕಿಚ್ಚ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಸುದೀಪ್ ನೆನ್ನೆ ದಾವಣಗೆರೆಗೆ ಆಗಮಿಸಬೇಕಿತ್ತು ಆದರೆ ಕಾರಣಾಂತರದಿಂದ ಸುದೀಪ್ ಬರಲು ಸಾಧ್ಯವಾಗದ ಹಿನ್ನಲೆಯಲ್ಲಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

 

ದಾವಣಗೆರೆಯ ಬಿಐಟಿ ಕಾಲೇಜ್ ರಸ್ತೆಯಲ್ಲಿರುವ ‘ದೊನ್ನೆ ಬಿರಿಯಾನಿ ಹೋಟೆಲ್’ ಪ್ರಾರಂಭೋತ್ಸವಕ್ಕೆ ಸುದೀಪ್ ಅವರು ಆಗಮಿಸಬೇಕಿತ್ತು.. ಖ್ಯಾತ ನಿರ್ದೇಶಕ ನಂದ ಕಿಶೋರ್ ಒಡೆತನದ ಈ ದೊನ್ನೆ ಬಿರಿಯಾನಿ ಹೋಟೆಲ್ ಅನ್ನು ಕಿಚ್ಚನೇ ಉದ್ಘಾಟಿಸಬೇಕಿತ್ತು ಆದರೆ ಶೂಟಿಂಗ್ ನಿಮಿತ್ತ ಹೈದರಾಬಾದಿನಲ್ಲಿರುವ ಸುದೀಪ್ ಆಗಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೋಟೆಲ್ ಪ್ರಾರಂಭೋತ್ಸವವನ್ನು ನಂದಕಿಶೋರ್ ಮುಂದಕ್ಕೆ ಹಾಕಿದ್ದಾರೆ. ಅಕ್ಟೋಬರ್ 19 ರಂದು ಹೋಟೆಲ್ ಓಪನಿಂಗ್ ಮಾಡಿಸಲಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶ ರವಾನಿಸಿರುವ ಸುದೀಪ್ “ನಾನು ದಾವಣಗೆರೆಯಲ್ಲಿರುವ ಹೋಟೆಲ್ ಓಪನಿಂಗ್’ಗೆ ಬರಬೇಕಿತ್ತು. ಆದರೆ ಕಾರಣಾಂತರದಿಂದ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಕ್ಷಮೆ ಇರಲಿ,, ನಾನು ಅಕ್ಟೋಬರ್ 19 ರಂದು ನಾನು ಬರುತ್ತಿದ್ದೇನೆ. ಬಂದೇ ಬರುತ್ತೇನೆ. ಶಾಸಕ ಎಸ್ ವಿ ರಾಮಚಂದ್ರಪ್ಪ, ನಂದಕಿಶೋರ್ ಹಾಗೂ ವಾಲ್ಮೀಕಿ ಶ್ರೀ ಸೇರಿದಂತೆ ನನ್ನನ್ನು ಆಮಂತ್ರಿಸಿದವರಿಗೆಲ್ಲಾ ನಾನು ಕ್ಷಮೆ ಕೇಳುತ್ತೇನೆ. ಕಾರಣಾಂತರಗಳಿಂದ ನಾನು ಹೈದರಾಬಾದಿನಲ್ಲಿ ಉಳಿದುಕೊಂಡಿದ್ದೇನೆ. 19ಕ್ಕೆ ಖಂಡಿತ ನಾನು ಬರುತ್ತೇನೆ” ಎಂದು ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top