fbpx
ಮನೋರಂಜನೆ

ಅಭಿಮಾನಿಗಳಿಗೆ ಬಿಗ್ ನ್ಯೂಸ್- ಇಂದು ‘ದಿ ವಿಲನ್’ ಸಿನಿಮಾದ ನಾಲ್ಕು ಟೀಸರ್ ರಿಲೀಸ್.

ನಿರ್ದೇಶಕ ಪ್ರೇಮ್ ಎಂದರೆ ಹಾಗೆ, ಏನನ್ನೇ ಮಾಡಿದರು ಕೊಂಚ ಸೆನ್ಸೇಷನ್ ಆಗಿ ಮಾಡುವುದು ಅವರ ಜಾಯಮಾನ ಅದು ಅವರ ಬಹುನಿರೀಕ್ಷಿತ ದಿ ವಿಲನ್ ಚಿತ್ರದಲ್ಲೂ ಮುಂದುವರೆದಿದೆ.. ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದ್ದು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ತೆರೆಗೆ ಅಪ್ಪಳಿಸಲಿದೆ.. ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆ ಆಕಾಶಕ್ಕೆ ಮುಟ್ಟಿದೆ..

ಈಗಾಗಲೇ ದಿನಗಣನೆ ಆರಂಭವಾಗಿರುವ ‘ದಿ ವಿಲನ್’ ಚಿತ್ರತಂಡದಿಂದ ಇಂದು ಟೀಸರ್ ಬಿಡುಗಡೆಯಾಗುತ್ತಿದೆ. ಏನೇ ಮಾಡಿದರೂ ಜಾಸ್ತಿಯೇ ಅಬ್ಬರದಿಂದ ಮಾಡುವ ಪ್ರೇಮ್ ಟೀಸರ್ ವಿಚಾರದಲ್ಲೂ ಅದನ್ನ ಮುಂದುವರೆಸಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಸಿನಿಮಾ ಅಂದ್ರೆ ಒಂದು ಅಥವಾ ಎರಡು ಟೀಸರ್ ರಿಲೀಸ್ ಮಾಡೋದು ಮಾಮೂಲು ಆದರೆ ಪ್ರೇಮ್ ಒಟ್ಟು ನಾಲ್ಕು ಟೀಸರ್ ರಿಲೀಸ್ ಮಾಡುತ್ತಿದ್ದಾರೆ.. 10ಸೆಕೆಂಡ್ ಅವಧಿಯಿರೋ ನಾಲ್ಕು ಭಿನ್ನ‌ ಟೀಸರ್ ಗಳನ್ನ ‌Prem’s YouTube ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗ್ತಿದೆ.

 

 

ಅಕ್ಟೋಬರ್ 2ರಿಂದ ಅಡ್ವಾನ್ಸ್ ಬುಕಿಂಗ್:
ರಿಲೀಸ್’ಗಿಂತ ಹದಿನೈದು ದಿನಗಳ ಮುಂಚಿತವಾಗಿಯೇ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿಸುವುದಾಗಿ ಘೋಷಿಸಿದ್ದ ಪ್ರೇಮ್ ಯಾವ ತಾರೀಕಿನಿಂದ ಅಡ್ವಾನ್ಸ್ ಬುಕಿಂಗ್ ಶುರುವಾಗುತ್ತೆ ಎಂಬ ಮಾಹಿತಿ ಹೊರಹಾಕಿರಲಿಲ್ಲ. ಆದರೆ ಆ ವಿಚಾರವನ್ನೂ ಕೂಡ ಪ್ರೇಮ್ ಬಹಿರಂಗಪಡಿಸಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಗಾಂಧಿ ಜಯಂತಿ(ಅಕ್ಟೋಬರ್ 02) ದಿನದಿಂದಲೇ ಎಲ್ಲಾ ಚಿತ್ರಮಂದಿರಗಳಲ್ಲೂ ಟಿಕೆಟ್ಟುಗಳು ಸಿಗಲಿವೆಯಂತೆ. ಈ ಮೂಲಕ ಬಿಡುಗಡೆ ಹದಿನೈದು ದಿನ ಮುನ್ನವೇ ಟಿಕೆಟ್ ಮುಂಗಡ ಕಾಯ್ದಿರಿಸೋ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

 

 

ಮೂರು ಮೇನ್ ಥಿಯೇಟರ್:
ಒಂದು ಚಿತ್ರಕ್ಕೆ ಒಂದು ಮೇನ್ ಥಿಯೇಟರ್ ಸಿಗುವುದೇ ಕಷ್ಟ. ಆದರೆ, ‘ದಿ ವಿಲನ್’ ಚಿತ್ರಕ್ಕೆ ಈಗಾಗಲೇ ಬೆಂಗಳೂರಿನ ಕೆ ಜಿ ರಸ್ತೆಯಲ್ಲೇ ಮೂರು ಚಿತ್ರಮಂದಿರಗಳು ಬುಕ್ ಆಗಿವೆ. ‘ನರ್ತಕಿ’ ‘ಸಂತೋಷ್’ ಮತ್ತು ಸ್ವಪ್ನ ಚಿತ್ರಮಂದಿರಗಳಲ್ಲಿ ‘ದಿ ವಿಲನ್’ ಸಿನಿಮಾ ತೆರೆಕಾಣಲಿದೆ.

50 ಕೋಟಿ ಬಾಚಿಕೊಂಡ ವಿಲನ್:
‘ದಿ ವಿಲನ್‌’ ಸಿನಿಮಾ ರಿಲೀಸ್‌ಗೂ ಮೊದ್ಲೇ ಬರೊಬ್ಬರಿ 50ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ,, ಚಿತ್ರದ ವಿತರಣಾ ಹಕ್ಕು, ಆಡಿಯೋ, ಡಬ್ಬಿಂಗ್ ಮತ್ತು ಸ್ಯಾಟಲೈಟ್ ರೈಟ್ಸ್ ಎಲ್ಲಾ ಸೇರಿ ಭರ್ತಿ 50ಕೋಟಿಗೂ ಹೆಚ್ಚು ಹಣಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಮೊನ್ನೆಯಿಂದೀಚೆಗೆ ಹರಿದಾಡುತ್ತಿದೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ, ‘ದಿ ವಿಲನ್‌’ ಸಿನಿಮಾ ‘100ಕೋಟಿ’ ಕೊಳ್ಳೆ ಹೊಡೆಯ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಚಿತ್ರ ಬಿಡುಗಡೆಯಾಗಲು ಎರಡು ವಾರಗಳು ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top