fbpx
ಆರೋಗ್ಯ

ಕಬ್ಬಿನ ಜ್ಯೂಸ್ ಗೆ ಸ್ವಲ್ಪ ನಿಂಬೆ ರಸ , ಶುಂಠಿ ಬೆರೆಸಿ ಕುಡೀರಿ ಈ 8 ಲಾಭ ಪಡ್ಕೊಳ್ಳಿ.

ಪೌಷ್ಟಿಕಾಂಶಭರಿತ ಕಬ್ಬು.

ನೀರನ್ನು ಹೊರತುಪಡಿಸಿದರೂ ನಾವು ಅನೇಕ ಪಾನೀಯಗಳ ಸೇವನೆ ಮಾಡುತ್ತೇವೆ. ಎಳನೀರು, ಮಜ್ಜಿಗೆ, ಹಣ್ಣಿನ ರಸ ಇವೆಲ್ಲ ಪೌಷ್ಟಿಕಾಂಶದಿಂದ ಕೂಡಿದ್ದು ಆರೋಗ್ಯಕ್ಕೆ ಹಿತರಕರ. ಅವುಗಳೊಂದಿಗೆ ಹೆಸರಿಸಬಹುದಾದದ್ದು ಕಬ್ಬಿನ ರಸ. ಕಬ್ಬಿಗೆ ಹೆಚ್ಚುವರಿ ಸಕ್ಕರೆ ಬೆರೆಸದೆ ಇದನ್ನು ತಯಾರಿಸಲಾಗುತ್ತದೆ. ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುವುದರಿಂದ ಕಬ್ಬಿಗೆ ಮತೆ ಸಕ್ಕರೆ ಸೇರಿಸುವ ಅಗತ್ಯವೂ ಇಲ್ಲ.

 

 

 

ಅತ್ಯಧಿಕ ಸಕ್ಕರೆ ಅಂಶ ಹೊಂದಿರುವ ಕಬ್ಬು ಸಕ್ಕರೆಯ ಅಂಶವನ್ನು ಕಬ್ಬಿನಿಂದ ಮುಖ್ಯವಾಗಿ ಸಕ್ಕರೆ, ಬೆಲ್ಲವನ್ನು ಮಾಡಲಾಗುತ್ತದೆ. ಕಬ್ಬನ್ನು ನೇರವಾಗಿ ಜಗಿದು ತಿನ್ನುವುದರಿಂದ ಹಲ್ಲು ಗಟ್ಟಿ ಹಾಗೂ ಬೆಳ್ಳಗೆ ಆರೋಗ್ಯಪೂರ್ಣವಾಗುತ್ತದೆ ಎಂಬ ಮಾತೂ ಇದೆ. ಕಬ್ಬಿನಿಂದ ಬೆಲ್ಲವನ್ನು ಆಲೆಮನೆಗಳಲ್ಲಿ ಸ್ಥಳೀಯವಾಗಿ ತಯಾರು ಮಾಡಲಾಗುತ್ತಿತ್ತು. ಕಬ್ಬನ್ನು ಹಿಂಡಿ ತೆಗೆಯುವ ಕಬ್ಬಿನ ಹಾಲು ಕೂಡ ಕಬ್ಬಿನಷ್ಟೇ ಆರೋಗ್ಯಪೂರ್ಣ.ಯಾವುದೇ ಕೃತಕ ರುಚಿಯ ಅಗತ್ಯವಿಲ್ಲದೆ ಇದನ್ನು ಸೇವಿಸಬಹುದು. ಎಳನೀರಿನಂತೆ ಕಬ್ಬಿನ ಹಾಲು ಕೂಡ ಕೃತಕ ಪೇಯಗಳಿಗಿಂತ ಆರೋಗ್ಯಪೂರ್ಣ.ಕಬ್ಬನ್ನು ತಿನ್ನುವುದಕ್ಕಿಂತಲೂ ಕಬ್ಬಿನ ಉತ್ಪನ್ನಗಳಾದ ಬೆಲ್ಲ, ಸಕ್ಕರೆ ಹಾಗೂ ಕಬ್ಬಿನ ಹಾಲು ಸೇವಿಸುವುದೇ ಹೆಚ್ಚು. ಕಬ್ಬು ಡೊಂಕಾದರೇನು ಅದರ ಸಿಹಿ ಡೊಂಕೇ ಎನ್ನುವಂತೆ ಕಬ್ಬಿನ ರುಚಿ ಎಲ್ಲರೂ ಇಷ್ಟಪಡುವಂತಹುದು.ಕಬ್ಬು ದೇಹವನ್ನು ಆರೋಗ್ಯಪೂರ್ಣ ಹಾಗೂ ಸದೃಢವಾಗಿ ಇರಿಸುತ್ತದೆ. ಗಂಟಲುನೋವು, ಶೀತ, ಫ್ಲೂ ಚಿಕಿತ್ಸೆಗಷ್ಟೇ ಅಲ್ಲದೆ ಇವುಗಳನ್ನು ತಡೆಯುವಲ್ಲೂ ಸಹ ಕಬ್ಬಿನಹಾಲು ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ.

ಇದರಲ್ಲಿ ಅತ್ಯಂತ ಸರಳವಾದ ಸಕ್ಕರೆ ಅಂಶವಿದ್ದು ಡಯಾಬಿಟಿಸ್ ಇರುವವರೂ ಸೇವಿಸಬಹುದು. ಆದರೆ ಟೈಪ್ 2 ಡಯಾಬಿಟಿಸ್ ಇರುವವರು ಇದನ್ನು ಮಿತಿಯಲ್ಲಿ ಸೇವಿಸಬೇಕು.ಇದರಲ್ಲಿರುವ ಆಲ್ಕಲೀನ್ ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಸಮರ್ಥವಾಗಿದೆ.ಕಬ್ಬು ದೇಹಕ್ಕೆ ಅಗತ್ಯವಾದ ಗ್ಲೂಕೋಸ್ ಅನ್ನು ಪೂರೈಸುತ್ತದೆ. ಇದನ್ನು ಗ್ಲೈಕೋಜಿನ್ ಆಗಿ ಸಂಗ್ರಹವಾಗಿ ಸ್ನಾಯುಶಕ್ತಿಗೆ ಅಗತ್ಯವಿದ್ದಾಗ ಬಳಸಲ್ಪಡುತ್ತದೆ. ಅತಿಯಾಗಿ ದೈಹಿಕ ಶ್ರಮವಾದಾಗ, ಬಿಸಿಲಿನಲ್ಲಿ ದಣಿದಾಗ ತಕ್ಷಣ ಶಕ್ತಿಗೆ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ಸಾಕು ಚೈತನ್ಯ ದೊರೆಯುತ್ತದೆ.ಹೊಟ್ಟೆ, ಮೂತ್ರಪಿಂಡ, ಹೃದಯ, ಕಣ್ಣು, ಮೆದುಳು ಮತ್ತಿತರ ಅಂಗಗಳನ್ನು ಬಲಿಷ್ಠವಾಗಿಸುತ್ತದೆ. ಕಬ್ಬಿನ ಹಾಲು ಮೂತ್ರದ ಹರಿವನ್ನು ಸುಗಮಗೊಳಿಸಿ ಮೂತ್ರಪಿಂಡಗಳಿಗೆ ಸಹಾಯ ಮಾಡುತ್ತದೆ.

 

 

 

ಜ್ವರ ಮತ್ತಿತರ ಕಾಯಿಲೆಗಳಿಂದ ದೇಹಕ್ಕೆ ನಷ್ಟವಾದ ಪ್ರೊಟೀನ್ ಮರುಪೂರೈಕೆಗೆ ಕಬ್ಬಿನ ಹಾಲು .ಬಹುಮೂತ್ರ ರೋಗ, ಮೂತ್ರಪಿಂಡದ ಉರಿಯೂತ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಬ್ಬಿನಹಾಲು ಉತ್ತಮ ಪರಿಹಾರ. ಇದನ್ನು ನಿಂಬೆ-ಶುಂಠಿರಸ , ಎಳನೀರು ಮುಂತಾದವುಗಳೊಡನೆ ಸೇರಿಸಿ ಸೇವಿಸುವುದರಿಂದ ಇನ್ನೂ ಹೆಚ್ಚಿನ ಲಾಭವಿದೆ.ಜಾಂಡೀಸ್‍ಗಂತೂ ಕಬ್ಬಿನ ಹಾಲು ರಾಮಬಾಣ ಎಂದೇ ಹೇಳಲಾಗುತ್ತದೆ.ಕಬ್ಬು-ಕಬ್ಬಿನ ಹಾಲಿನಲ್ಲಿ ಉತ್ತಮ ಗುಣಮಟ್ಟದ ಕಾರ್ಬೊಹೈಡ್ರೇಟ್ ಇದ್ದು ದೇಹಕ್ಕೆ ನವಚೈತನ್ಯ ನೀಡುತ್ತದೆ. ಸ್ನಾಯುಗಳಿಗೆ ತಕ್ಷಣ ಶಕ್ತಿ ಒದಗಿಸಿ, ಕ್ರೀಡೆ ಮತ್ತಿತರ ದೈಹಿಕ ಶ್ರಮದ ಕೆಲಸಗಳಿಗೆ ಹೆಚ್ಚಿನ ಶಕ್ತಿ ಒದಗಿಸುತ್ತದೆ.

ಜೀರ್ಣಶಕ್ತಿ ಹೆಚ್ಚಿಸಿ, ಉತ್ತಮವಾಗಿ ಕಾರ್ಯನಿರ್ವಹಿಸಿಲು ಕಬ್ಬಿನಲ್ಲಿರುವ ಪೊಟ್ಯಾಷಿಯಂ ಅಂಶ ಸಹಕರಿಸುತ್ತದೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣ, ಮೆಗ್ನಿಸಿಯಂ, ಪೊಟ್ಯಾಷಿಯಂ ಮುಂತಾಗಿ ದೇಹದ ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ಪೋಷಕಾಂಶಗಳು ಕಬ್ಬಿನಲ್ಲಿವೆ.ಕಬ್ಬು-ಕಬ್ಬಿನ ಹಾಲು ಅತ್ಯಂತ ಸಿಹಿ ರುಚಿ ಹೊಂದಿದ್ದು ಚಪ್ಪರಿಸಿ ಕುಡಿಯುವಷ್ಟು ಹಿತವಾಗಿರುತ್ತದೆ. ಇದಕ್ಕೆ ನಿಂಬೆ, ಶುಂಠಿ, ಪುದೀನಾ ಮತ್ತಿತರ ಪರಿಮಳ ಸೇರಿಸಿ ಕುಡಿಯಬಹುದು. ನೀವು ಬಯಸಿ ಕುಡಿಯುವ ಕೃತಕ ಪೇಯಗಳಿಗಿಂತ ಇದು ಹೆಚ್ಚು ಆರೋಗ್ಯಪೂರ್ಣವಾಗಿದ್ದು ದೇಹಕ್ಕೆ ಅವಶ್ಯಕವಾಗಿದೆ. ಹೆಚ್ಚುವರಿ ನೀರಿನ ಮಿಶ್ರಣವಿಲ್ಲದೆ ಪರಿಶುದ್ಧ ರಸವಾಗಿದ್ದು, ನಿರಾತಂಕವಾಗಿ ಸೇವಿಸಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top