fbpx
ದೇವರು

ಗರುಡ ಪುರಾಣದಲ್ಲಿ ಉಲ್ಲೇಖವಾಗಿರೋ ಪಿತೃ ಪಕ್ಷದ ಬಗ್ಗೆಗಿನ ಆಸಕ್ತಿಕರ ಮಾಹಿತಿ ಆದ್ರೂ ಏನು,ಪಿತೃ ಪಕ್ಷವನ್ನು ಅರ್ಥಪೂರ್ಣವಾಗಿ ಹೇಗೆ ಆಚರಿಸಬೇಕು ಗೊತ್ತಾ

ಗರುಡ ಪುರಾಣದಲ್ಲಿದೆ ಪಿತೃ ಪಕ್ಷದ ಬಗ್ಗೆ ಆಸಕ್ತಿಕರ ಮಾಹಿತಿ. ಪಿತೃ ಪಕ್ಷವನ್ನು ಅರ್ಥಪೂರ್ಣವಾಗಿ ಆಚರಿಸುವುದು ಹೇಗೆ ?ಯಾವ ಆಹಾರ ಗತಿಸಿದ ಪಿತೃಗಳಿಗೆ ಶ್ರೇಷ್ಠ ?
ಭಾದ್ರಪದ ಮಾಸದ ಕೃಷ್ಣಪಕ್ಷ ಪಿತೃಪಕ್ಷ . ಗತಿಸಿದವರಿಗೆ ಶ್ರದ್ಧಾ ಕಾರ್ಯವನ್ನು ಮಾಡುವುದೇ ಪಿತೃಪಕ್ಷ. ಕಾಲವಾದವರಿಗೆ ಮಾಡುವ ಪುಣ್ಯಕಾರ್ಯವಿದು. ಪೂರ್ವಜರ ಆತ್ಮ ಶಾಂತಿಗಾಗಿ ಮಾಡುವ ಪುಣ್ಯವಿದು. ಸಾಕಿ ಬೆಳೆಸಿದ ತಂದೆ ತಾಯಿಯರನ್ನು ಸ್ಮರಿಸಿ ಗೌರವ ಸಲ್ಲಿಸುವ ಕಾರ್ಯವಿದು. ಅದುವೇ ಪಿತೃಕಾರ್ಯ. ಪಿತೃಪಕ್ಷದಲ್ಲಿ ಕಾಲವಾದವರಿಗೆ ಶ್ರಾದ್ದಾಕಾರ್ಯ ಮಾಡುವುದರಿಂದ ಅವರಿಗೆ ಸದ್ಗತಿ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಪಿತೃಪಕ್ಷದ ವೇಳೆ ಸ್ವರ್ಗಸ್ಥರಾದ ಹಿರಿಯರು ಈ 15 ದಿನಗಳಲ್ಲಿ ಭೂಲೋಕಕ್ಕೆ ಬರುತ್ತಾರೆ. ನಮ್ಮನ್ನು ನೋಡಿ ಹಿರಿಯರು ನಮ್ಮಿಂದ ತಿಥಿಯನ್ನು ಸ್ವೀಕರಿಸಿ ನಮ್ಮನ್ನು ಆಶೀರ್ವದಿಸಿ ಯಮಲೋಕಕ್ಕೆ ಮರಳುತ್ತಾರೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಕೆಲವರು ಮೃತರಾದವರನ್ನು ಮೃತ ಮಾಸದ ತಿಥಿಯಂದು ವಾರ್ಷಿಕ ಶ್ರಾದ್ಧ ಮಾಡುವುದನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ಅದು ಸಾಧ್ಯವಾಗದೇ ಇದ್ದಲ್ಲಿ ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ತರ್ಪಣ ಮತ್ತು ಪಿಂಡ ಪ್ರದಾನ ಮಾಡುವುದು ಅತ್ಯಂತ ಶ್ರೇಷ್ಠ .

ಪಿತೃಪಕ್ಷದ ಆಚರಣೆಯ ನಿಯಮಗಳು.
ಮನೆ ಮಂದಿ ಎಲ್ಲ ಒಟ್ಟುಗೂಡಿ ಪಿತೃಕಾರ್ಯ ಮಾಡಬೇಕು. ಮುಂಜಾನೆ ಬೇಗ ಶುಚಿರ್ಭೂತರಾಗಬೇಕು. ಮನೆಯನ್ನು ಶುದ್ಧಿಗೊಳಿಸಿ ಗಂಜಲ ಸಿಂಪಡಿಸಬೇಕು. ಪಿತೃಕಾರ್ಯ ಮಾಡುವ ದಿನ ಮನೆಯ ಮುಂದೆ ರಂಗೋಲಿ ಹಾಕಬಾರದು. ಮನೆಯಲ್ಲಿ ಧೂಪ ಹಾಕಬೇಕು. ಮನೆಮಂದಿ ಕೆಟ್ಟ ಮಾತನಾಡಬಾರದು. ಪಿತೃಗಳಿಗೆ ಪ್ರಿಯವಾದ ಭಕ್ಷ್ಯಗಳನ್ನು ತಯಾರಿಸಬೇಕು. ಪಿತೃ ಕಾರ್ಯಕ್ಕೆ ಗೆಡ್ಡೆ ಗೆಣಸಿನ ಅಡುಗೆ ವಿಶೇಷ. ಅತ್ಯಂತ ಶ್ರದ್ಧೆ , ಪ್ರೀತಿಯಿಂದ ಪಿತೃಗಳ ಪೂಜೆ ಮಾಡಬೇಕು. ಪಿತೃ ಪೂಜೆ ಮಾಡುವಾಗ ಗಂಟೆ ಬಾರಿಸಲು ಅವಕಾಶವಿಲ್ಲ. ಅಗಲಿದ ಹಿರಿಯರಿಗೆ ಇಷ್ಟವಾದ ಭೋಜನದ ಎಡೆ ಹಾಕಿ ಪ್ರಾರ್ಥಿಸಬೇಕು.

 

 

 

ಈ ಮಾಸದಲ್ಲಿ ಪಿತೃ ತರ್ಪಣ ಕೊಡುವುದು ವಿಶೇಷ. ಕುಟುಂಬದಲ್ಲಿ ಮರಣಹೊಂದಿದ ಎಲ್ಲರಿಗೂ ತರ್ಪಣ ಮತ್ತು ಪಿಂಡ ಪ್ರದಾನ ಮಾಡಬೇಕು. ಪಿತೃಗಳಿಗೆ ತರ್ಪಣ ಕೊಡುವ ವಿಧಾನ ಹೇಗೆ ?
ತರ್ಪಣ ಕೊಡುವಾಗ ಶುದ್ಧತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ದರ್ಬೆಗೆ ವಿಶೇಷ , ದರ್ಭೆಯ ಪವಿತ್ರದ ಉಂಗುರ ಧರಿಸಿತರ್ಪಣ ನೀಡಬೇಕು. ಕರ್ಮ ಮಾಡುವವರು ದರ್ಬಾಸನದಲ್ಲಿ ಕುಳಿತುಕೊಳ್ಳಬೇಕು. ಶುದ್ಧವಾದ ಸ್ಥಳ ಎಳ್ಳು, ನೀರು ಮತ್ತು ಅಕ್ಕಿ ಬಳಸಿ ತರ್ಪಣ ಕೊಡಬೇಕು. ಪರಿಶುದ್ಧ ಮನಸ್ಸಿನಿಂದ ತರ್ಪಣ ಕೊಡಬೇಕು. ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮತ್ತು ತರ್ಪಣಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅದೇ ರೀತಿ ಪಕ್ಷದಲ್ಲಿ ಮಾಡುವ ದಾನಕ್ಕೆ ವಿಶೇಷ ಮಹತ್ವವಿದೆ. ಪಕ್ಷದಲ್ಲಿ ಮಾಡುವ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಯಾರು ಮಾತೃ ಪಿತೃಗಳ ಶ್ರಾದ್ಧ ಮಾಡುವುದಿಲ್ಲವೋ ? ಅಂಥವರು ಮಾಡುವ ದೇವತಾಕಾರ್ಯ ಪೂಜೆ-ಪುನಸ್ಕಾರಗಳನ್ನು ದೇವರು ಕೂಡ ಸ್ವೀಕರಿಸುವುದಿಲ್ಲ ಎನ್ನಲಾಗುತ್ತದೆ. ಇಲ್ಲದಿದ್ದರೆ ಹಿರಿಯರಿಗೆ ಯಾರು ಶ್ರಾದ್ದಾ ಕಾರ್ಯ ಮಾಡಬಹುದು ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹೆಣ್ಣು ಮಕ್ಕಳು ,ಅಳಿಯಂದಿರು, ತಮ್ಮಂದಿರು , ಅಣ್ಣ, ತಮ್ಮಂದಿರ ಮಕ್ಕಳುಗಳು ಅಥವಾ ಇನ್ನುಳಿದ ಬಂಧುಗಳು, ಸಹೋದರರ ಬಂಧುಗಳು ಕೂಡ ಶ್ರಾದ್ಧ ಮಾಡುವುದಕ್ಕೆ ಅರ್ಹರಾಗಿರುತ್ತಾರೆ. ಗಂಡು ಮಕ್ಕಳು ಇಲ್ಲ ಎಂದ ಮಾತ್ರಕ್ಕೆ ಶ್ರಾದ್ಧ ಕರ್ಮ ಮಾಡಬಾರದು ಎನ್ನುವ ಸಿದ್ದಾಂತ ಇಲ್ಲ, ಪಿತೃಪಕ್ಷದಲ್ಲಿ ಒಂದು ರೀತಿಯ ಶೂನ್ಯ ಆವರಿಸುತ್ತದೆ. ವ್ಯಾಪಾರ-ವಹಿವಾಟುಗಳು ನಿಧಾನಗತಿಯಲ್ಲಿ ಸಾಗುತ್ತವೆ. ಯಾಕೆಂದರೆ ಪಕ್ಷದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಿದರೂ ಸಹ ಅದರಿಂದ ಫಲ ಸಿಗುವುದಿಲ್ಲ ಎನ್ನುವ ನಂಬಿಕೆ ಇದೆ.

 

ಪಿತೃಪಕ್ಷದಲ್ಲಿ ಏನು ಮಾಡಬಾರದು ?
ಪಿತೃಪಕ್ಷದಲ್ಲಿ ದೇವತಾ ಕಾರ್ಯ ಮಾಡಬಾರದು. ಮಂಗಳ ಕಾರ್ಯ ಮಾಡಿದರೆ ಶ್ರೇಯಸ್ಸು ಸಿಗುವುದಿಲ್ಲ . ಮದುವೆ ಮತ್ತು ಗೃಹಪ್ರವೇಶಕ್ಕೆ ದೇವರ ಅನುಗ್ರಹ ಇರುವುದಿಲ್ಲ . ನಾಮಕರಣ, ಉಪನಯನ ಕಾರ್ಯಕ್ರಮ ಮಾಡಬಾರದು. ಪಿತೃ ಕಾರ್ಯವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಿದವರಿಗೆ ಹಿರಿಯರ ಆಶೀರ್ವಾದ ಸಂಪೂರ್ಣವಾಗಿ ಸಿಗುತ್ತದೆ. ಯಾವುದೇ ಕಾರ್ಯಗಳಲ್ಲಿ ಅವರಿಗೆ ಅಡೆತಡೆಗಳು ಉಂಟಾಗುವುದಿಲ್ಲ.
ಪಿತೃ ಪಕ್ಷದ ಪಲಗಳು ಏನೇನು ?
ಶ್ರದ್ಧೆಯಿಂದ ಪಿತೃಕಾರ್ಯ ಆಚರಿಸಿದರೆ ವಂಶಾಭಿವೃದ್ಧಿಯಾಗುತ್ತದೆ. ಧನಧಾನ್ಯ, ಐಶ್ವರ್ಯ ಅಭಿವೃದ್ಧಿ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ . ನವಗ್ರಹ ದೋಷಗಳು ನಿವಾರಣೆಯಾಗುತ್ತವೆ. ನಿಮ್ಮ ಮನೆಗೆ ಸಂಪೂರ್ಣ ರಕ್ಷಣೆ ಸಿಗುತ್ತದೆ. ಆಯುಷ್ಯ ಗಟ್ಟಿಯಾಗಿರುತ್ತದೆ. ಆರೋಗ್ಯ ಸದೃಢವಾಗಿರುತ್ತದೆ.
ವೈಭವಕ್ಕಾಗಿ ತೋರಿಕೆಗಾಗಿ ಪಿತೃಕಾರ್ಯ ಮಾಡಬಾರದು. ಶ್ರದ್ಧಾ ಭಕ್ತಿಯಿಂದ ಪಿತೃ ದೇವತೆಗಳ ಸಂತೃಪ್ತಿಗಾಗಿ ಪಿತೃಕಾರ್ಯ ಮಾಡಬೇಕು. ಪ್ರೀತಿಯಿಂದ ಅಗಲಿದ ಹಿರಿಯರಿಗೆ ಶ್ರಾದ್ಧ ಕಾರ್ಯ ಮಾಡಿದರೆ ಅವರ ಸಂಪೂರ್ಣ ಆಶೀರ್ವಾದ ಮನೆಮಂದಿಯ ಮೇಲೆ ಇರುತ್ತದೆ .

 

 

 

ಮಹಾಲಯ ಅಮಾವಾಸ್ಯೆ.
ಅಕ್ಟೋಬರ್ 8 ನೇ ತಾರೀಖಿನಂದು ಸೋಮವಾರ ಮಹಾಲಯ ಅಮಾವಾಸ್ಯೆ ಬಂದಿದ್ದು, ಪಿತೃ ದೇವತೆಗಳಿಗೆ ಅತ್ಯಂತ ವಿಶಿಷ್ಟವಾದ ದಿನವಿದು. ಈ ದಿನ ಪಿತೃಕಾರ್ಯ ಆಚರಣೆಗೆ ಪರಮ ಪುಣ್ಯ ದಿನ ಎಂದೇ ಹೇಳಲಾಗುತ್ತದೆ. ಈ ದಿನ ಎಲ್ಲಾ ಪಿತೃಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಈ ದಿನಕ್ಕೆ ಸರ್ವಪಿತೃ ಶ್ರಾದ್ಧ ಎಂಬ ಹೆಸರು ಇದೆ. ಈ ದಿನ ವಿಶೇಷವಾಗಿ ಮೊಸರನ್ನ ಇಟ್ಟು ಪ್ರಾರ್ಥಿಸಿದರೆ ಪಿತೃಗಳಿಗೆ ಶಾಂತಿ ಲಭಿಸುತ್ತದೆ. ಪಿತೃಕಾರ್ಯ ಮಾಡುವುದರಿಂದ ಎಲ್ಲಾ ದೋಷಗಳು ಪರಿಹಾರವಾಗುತ್ತವೆ.
ಮಹಾನವಮಿಯ ದಿನ ದೌಹಿತ್ರಿ ಮಹಾಲಯ ಮೊಮ್ಮಕ್ಕಳು ತಾತ ಅಜ್ಜಿಯರಿಗೆ ಶ್ರಾದ್ದಾ ಕಾರ್ಯವನ್ನು ಮಾಡುವ ದಿನ.
ಮಹಾಲಯ ಅಮಾವಾಸ್ಯೆ ಕಳೆದ ಮರುದಿನವೇ ದೌಹಿತ್ರಿಯ ಮಹಾಲಯ. ಇದನ್ನು ಮಹಾನವಮಿ ಅಮಾವಾಸ್ಯೆ ಎಂದು ಕೂಡ ಕರೆಯಲಾಗುತ್ತದೆ. ಇದು ಮೊಮ್ಮಕ್ಕಳಿಂದ ಮಾಡಿಸುವ ವಿಶೇಷ ಕಾರ್ಯ.ಜನ್ಮವನ್ನು ನೀಡಿದ ತಂದೆ ತಾಯಿಗಳನ್ನು ನೆನೆಯಲೇಬೇಕು.
ಮಹಾನವಮಿ ಅಮಾವಾಸ್ಯೆ ಅಕ್ಟೋಬರ್ 9 ರಂದು ದೌಹಿತ್ರಿಯ ಶ್ರಾದ್ಧ ಆಚರಣೆ ಮಾಡಬೇಕು. ಈ ದಿನ ವಿಶೇಷವಾಗಿ ಮಗಳ ಮಗ ಅಂದರೆ ಮೊಮ್ಮಗ ಮಾಡುವ ಶ್ರಾದ್ಧ ಕಾರ್ಯವಿದು.84 ಕೋಟಿ ಜೀವರಾಶಿಗಳಲ್ಲಿ ಮಾನವ ಜೀವನವೇ ಅತ್ಯಂತ ಶ್ರೇಷ್ಠ. ಅಂತಹ ಜನ್ಮವನ್ನು ನೀಡಿದ ತಂದೆ-ತಾಯಿಯನ್ನು ನೆನೆಯಲೇಬೇಕು. ಗತಿಸಿದ ನಮ್ಮ ಹಿರಿಯರನ್ನು ನೆನೆದು ಅವರಿಗೆ ಶ್ರದ್ಧೆಯಿಂದ ಶ್ರಾದ್ಧ ಕಾರ್ಯ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top