ಭವಿಷ್ಯ

02 ಅಕ್ಟೋಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಮಂಗಳವಾರ, ೦೨ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೩
ಸೂರ್ಯಾಸ್ತ : ೧೮:೨೨
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಭಾದ್ರಪದ

ಪಕ್ಷ : ಕೃಷ್ಣ ಪಕ್ಷ
ತಿಥಿ : ಅಷ್ಟಮೀ – ೨೬:೧೭+ ವರೆಗೆ
ನಕ್ಷತ್ರ : ಆರಿದ್ರ – ೨೩:೪೬ ವರೆಗೆ
ಯೋಗ : ವರಿಯಾನ್ – ೧೫:೧೦ ವರೆಗೆ
ಸೂರ್ಯ ರಾಶಿ : ಕನ್ಯಾ

ಅಭಿಜಿತ್ ಮುಹುರ್ತ:೧೨:೦೩ – ೧೨:೫೧
ಅಮೃತಕಾಲ: ೧೪:೧೩ – ೧೫:೪೫
ರಾಹು ಕಾಲ:೧೫:೨೪ – ೧೬:೫೩
ಗುಳಿಕ ಕಾಲ:೧೨:೨೭ – ೧೩:೫೬
ಯಮಗಂಡ:೦೯:೩೦ – ೧೦:೫೯

ಬರೀ ಹಗಲುಗನಸುಗಳೇ ನಿಮ್ಮ ಆಸ್ತಿ ಆಗಬಾರದು. ವಾಸ್ತದಲ್ಲಿನ ನಿಖರತೆ ಅರಿತುಕೊಂಡರೆ ಗೆಲುವಿದೆ. ಸಂಗಾತಿಯ ವಿಚಾರಧಾರೆಗಳು ಕೆಲವು ಸಲ ನಿಮ್ಮನ್ನು ಸಂದಿಗ್ಧಕ್ಕೆ ಸಿಲುಕಿಸುವುದು. ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗಿ.

ಕೆಲವರನ್ನು ಭೇಟಿಯಾಗಲಿದ್ದೀರಿ. ಇದರಿಂದ ಒಳ್ಳೆಯವರು ಯಾರು ಕೆಟ್ಟವರು ಯಾರು ಎಂದು ಗೊತ್ತಾಗುವುದು. ಹಣಕಾಸು ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಮಾಯೆಯನ್ನು ಜಯಿಸುವ ಸಕಾರಾತ್ಮಕ ಶಕ್ತಿ ನಿಮಗೆ ಬರಲಿದೆ. ಬುದ್ಧಿಬಲ ಉಪಯೋಗಿಸಿ ಎಲ್ಲೆಡೆ ಗೆಲುವು ಸಾಧಿಸುವಿರಿ. ಇದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವುದು.

ಅನಿರೀಕ್ಷಿತ ಬೆಳವಣಿಗೆಯೊಂದು ನಿಮ್ಮ ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಸಾಧ್ಯವಾದರೆ ವಿಷ್ಣುವಿನ ಸ್ತೋತ್ರ ಪಠಿಸಿ. ತಾಳ್ಮೆಯಿಂದ ಪರಿಸ್ಥಿತಿ ಎದುರಿಸಿ.

 

ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸ ಆಲೋಚನೆ ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು.

 

ನಿಮ್ಮನ್ನು ಎದುರಿಗೆ ಹಾಡಿ ಹೊಗಳುವವರೇ ನಿಮ್ಮನ್ನು ಮಟ್ಟಹಾಕಲು ಒಳಸಂಚು ರೂಪಿಸುವರು. ದುಷ್ಮನ್‌ ಕಹಾ ಹೇ ಅಂತ ನೋಡಿದರೆ ಬಗಲ್‌ ಮೆ ಹೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುವುದು. ಯಾವುದಕ್ಕೂ ಸನ್ನದ್ಧರಾಗಿ.

 

ಎಲ್ಲಾ ಕಾರ್ಯ ಕಲಾಪಗಳಲ್ಲಿ ಸೋಲು ಕಾಣುತ್ತಿರುವ ಈ ಸಂದರ್ಭದಲ್ಲಿ ಸಕಲ ನಿರ್ವಿಘ್ನದಾಯಕನಾದ ಚೇತೋಹಾರಿ ಮಹಾಗಣಪನನ್ನು ಆರಾಧಿಸಿ. ಆತನ ಕೃಪೆಯಿಂದ ನಿಮ್ಮ ಕಾರ್ಯಗಳು ಕೈಗೂಡುವವು.

 

ಕಾರ್ಯಾರಂಭದ ಮುನ್ನವೇ ನಾನು ಸೋಲಬಹುದು ಎಂಬ ಭಯವನ್ನು ನೀವು ಬಿಡುವುದು ಒಳ್ಳೆಯದು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯ ಆರಂಭಿಸಿ. ನಿಮ್ಮ ಸದಿಚ್ಛೆಯಂತೆ ಭಗವಂತ ಕರುಣೆ ತೋರುವರು.

 

ಯಾರನ್ನೂ ದಿಢೀರನೆ ನಂಬಬೇಡಿ. ಅಂತೆಯೇ ನಿಮ್ಮ ಕಾರ್ಯ ಯೋಜನೆಗೆ ಸಹಾಯವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆಯ ಸದಸ್ಯರೊಡನೆ ಮತ್ತು ನೆರೆಹೊರೆ ಜನರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುವುದು ಕ್ಷೇಮ.

ದೂರದ ಸಂಬಂಧಿಗಳಾಗಲಿ, ಹಳೆಯ ಸ್ನೇಹಿತರಾಗಲಿ ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಾದ ಸಲಹೆ ಸಹಕಾರ ನೀಡಿ ಸಂತೋಷ ಪಡಿಸುವಿರಿ.

 

 

ಗೊತ್ತಿದ್ದು ಗೊತ್ತಿದ್ದೂ ಅಯೋಗ್ಯರ ಸಂಗಡ ನಿಮ್ಮ ಮುಂದಿನ ಕಾರ್ಯ ರೂಪುರೇಷೆಗಳ ವಿಚಾರ ಪ್ರಸ್ತಾಪಿಸದಿರಿ. ಇದರಿಂದ ನಿಮಗೆ ಮುಂದೊಂದು ದಿನ ತೊಂದರೆಯಾಗುವುದು. ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.

ನಿಮ್ಮ ಯೋಜನೆಗಳು ಯಾವಾಗಲೂ ವಿಶೇಷತೆಯಿಂದಲೇ ಕೂಡಿರುತ್ತವೆ. ಹಾಗಾಗಿ ನೀವು ಬೇರೆಯವರಿಗಿಂತ ಬೇಗನೆ ಜಯಶಾಲಿ ಆಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top