ದೇವರು

ಮಾಯಾ ನಗರಿಯ ಈ ಗಣೇಶನ ಬೆಲೆ ಎಷ್ಟು ಗೊತ್ತಾ ,ಗೊತ್ತಾದ್ರೆ ನೀವು ಬೆಚ್ಚಿಬೀಳೋದು ಖಂಡಿತಾ

ನಮ್ಮ ದೇಶದ ಈ ಗಣೇಶನ ಬೆಲೆ ಬರೋಬ್ಬರಿ 265 ಕೋಟಿ ರೂಪಾಯಿ.
ನಮ್ಮ ಹಿಂದೂ ಧರ್ಮದಲ್ಲಿ ಪ್ರತಿ ವರ್ಷ ಹಲವು ಹಬ್ಬಗಳನ್ನು, ಹಲವು ವಿಶೇಷತೆಗಳ ಮೂಲಕ ಆಚರಣೆ ಮಾಡುತ್ತೇವೆ . ಒಂದೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ನಮ್ಮ ದೇಶದಲ್ಲಿ ಪ್ರತಿ ನಗರ, ಹಳ್ಳಿ ಮತ್ತು ರಾಜ್ಯದ ಎಲ್ಲಾ ಕಡೆಗಳಲ್ಲೂ ತಾರತಮ್ಯ ಇಲ್ಲದೆ ಆಚರಿಸುವ ಹಬ್ಬಗಳಲ್ಲಿ ಗೌರಿ ಗಣೇಶನ ಹಬ್ಬವು ಕೂಡ ಒಂದು. ಈ ಹಬ್ಬ ಇಂದೂಗಳ ಪ್ರತಿಷ್ಠೆಯನ್ನು ಕಾಪಾಡುವ ಹಬ್ಬ ಎಂದರೆ ತಪ್ಪಾಗುವುದಿಲ್ಲ.ಎಲ್ಲರಿಗೂ ತಿಳಿದಿರುವ ಹಾಗೆ ಗೌರಿ ಗಣೇಶನ ಹಬ್ಬ ಆಧ್ಯಾತ್ಮಿಕವಾಗಿ ಅನೇಕ ವಿಶೇಷತೆಗಳನ್ನು ಹೊಂದಿದೆ ಹಾಗೂ ದೇಶದಾದ್ಯಂತ ಒಂದೇ ಸಮಯದಲ್ಲಿ ಒಂದು ರೀತಿಯ ಪೈಪೋಟಿ ನೀಡುವ ರೀತಿಯಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಬಹಳ ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸುತ್ತಾರೆ.

 

 

 

ಗಣೇಶನ ಹಬ್ಬದ ಪೈಪೋಟಿ ಅಥವಾ ಪರದೆ ಯಾವ ಮಟ್ಟಿಗೆ ಭಾರತದಲ್ಲಿ ಹಬ್ಬಿದೆ ಎಂದರೆ, ನಮ್ಮ ದೇಶದ ಮುಂಬೈ ಗಣೇಶನ ಹಬ್ಬಕ್ಕೆ ಬಹಳ ಹೆಸರುವಾಸಿಯಾಗಿದೆ. ಹಾಗೂ ಈ ಹಬ್ಬದ ಸಂಭ್ರಮವನ್ನು ಆನಂದಿಸಲು ಬಹಳಷ್ಟು ವಿದೇಶಿಗರು ಸಹ ಮುಂಬೈನಲ್ಲಿ ಹಬ್ಬದ ಸಮಯದಲ್ಲಿ ವಾಸ್ತವ್ಯ ಹೂಡುತ್ತಾರೆ ಈ ವರ್ಷ ಮುಂಬೈ ನಗರದ ಒಂದು ಗಣೇಶನ ಮೇಲೆ ಬರೋಬ್ಬರಿ 264 ಕೋಟಿ ವಿಮೆ ಮಾಡಿಸಿದ.ಮಾಯಾ ನಗರ ಎಂದು ಕರೆಸಿಕೊಳ್ಳುವ ನಮ್ಮ ಭಾರತ ದೇಶದ ಮುಂಬೈ ನಗರದಲ್ಲಿ ಪ್ರತಿವರ್ಷ ಗೌರಿ ಗಣೇಶನ ಹಬ್ಬಕ್ಕೆ ನೂರಾರು ಕೋಟಿಗಳನ್ನು ಖರ್ಚು ಮಾಡಲಾಗುತ್ತದೆ. ಅದೇ ರೀತಿ ಬಹಳಷ್ಟು ಸಂಘ ಸಂಸ್ಥೆಗಳು ತಮ್ಮ ಗಣೇಶನಿಗೆ ವಿಮೆ ಅಥವಾ ಇನ್ಸೂರೆನ್ಸ್ ಕೂಡ ಮಾಡಿಸುತ್ತವೆ.
ಮುಂಬೈ ನಗರದ ಜಿ. ಎಸ್. ಪಿ ಸೇನಾ ಮಂಡಳಿ ತಮ್ಮ ಗಣೇಶನಿಗೆ ಬರೋಬರಿ 264.8 ಕೋಟಿ ರೂಪಾಯಿ ಮೊತ್ತದ ವಿಮೆ ಮಾಡಿಸಿರುವುದು ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿದೆ . ಯಾಕೆ ಇಷ್ಟು ದೊಡ್ಡ ಮೊತ್ತದ ವಿಮೆ ಮಾಡಿಸಿದೆ. ಜಿ. ಎಸ್. ಪಿ ಮಂಡಳಿಯ ಪ್ರಕಾರ ಈ ವಿಮೆಯಲ್ಲಿ ಅನೇಕ ಪ್ರಮುಖ ಅಂಶಗಳಿವೆ.

ಸುಮಾರು 19 ಕೋಟಿ ವಿಮೆ ಗಣೇಶನಿಗೆ ಹಾಕುವ ಚಿನ್ನ, ಬೆಳ್ಳಿ ಹಾಗೂ ನಗದು ವಿಷಯವಾಗಿ ಹೂಡಿಕೆ ಮಾಡಲಾಗುತ್ತದೆ. ಹಾಗೂ ಯಾವುದೇ ವಿದ್ಯುತ್ ಅವಗಡಗಳು ಅಥವಾ ಭೂಕಂಪ ಅಥವಾ ನೈಸರ್ಗಿಕವಾಗಿ ವಿಕೋಪಗಳಿಂದ ಉಂಟಾಗುವ ಹಾನಿಯನ್ನು ಗಮನದಲ್ಲಿ ಇಟ್ಟುಕೊಂಡು ಹಲವಾರು ಕೋಟಿಗಳನ್ನು ಹೂಡಿಕೆ ಮಾಡಲಾಗುತ್ತದೆ. ಇದಲ್ಲದೇ ಈ ಹಬ್ಬವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರ ಹಿಂದೆ ಹಲವು ಜನರ ಶ್ರಮವಿದೆ.
ಜಿ.ಎಸ್. ಪಿ ಮಂಡಳಿಯ ಪ್ರಕಾರ ಸುಮಾರು 2,500 ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದ ಹಿಂದೆ ಪ್ರತಿ ವರ್ಷ ಶ್ರಮವಹಿಸುತ್ತಾರೆ. ಅವರ ಹೆಸರಲ್ಲೂ ಸಹ ತಲಾ ಹತ್ತು ಲಕ್ಷದ ವಿಮೆ ಹಣವನ್ನು ಜಮಾ ಮಾಡಲಾಗುತ್ತದೆ. ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದ ಮೇಲೆ ಮುಂಬೈ ನಗರದ ಈ ಗಣೇಶನ ಹಾಗೂ ಗಣೇಶ ಹಬ್ಬದ ಸಂಭ್ರಮ ಹೇಗಿರುತ್ತದೆ ಎಂದು ಊಹೆ ಮಾಡಲು ಸಹ ಸಾಧ್ಯವಾಗುವುದಿಲ್ಲ.ಅಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗೂ ಈ ನಮ್ಮ ಗಣೇಶನ ಹಬ್ಬಕ್ಕೆ ಇಷ್ಟೊಂದು ಪ್ರಾಮುಖ್ಯತೆಯನ್ನು ಕೊಟ್ಟು ಒಗ್ಗಟ್ಟಿನಲ್ಲಿ ಐಕ್ಯತೆಯನ್ನು ಸಾರುವುದನ್ನು ನೋಡಿದರೆ ಇಂದೂಗಳಾದ ನಾವು ನಿಜವಾಗಿಯೂ ಹೆಮ್ಮೆ ಪಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top