ಮನೋರಂಜನೆ

ಕೀರ್ತಿ ಗೌಡರನ್ನು ಮದುವೆಯಾಗಿರುವುದಕ್ಕೆ ಸಾಕ್ಷಿ ಏನು ಅಂತ ಕೇಳಿದ್ದಕ್ಕೆ ವಿಜಿ ಹೇಳಿದ್ದೇನು ಗೊತ್ತಾ?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಕಳೆದು ಒಂದು ವಾರದಿಂದ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದ ದುನಿಯಾ ವಿಜಯ್​ಗೆ ಜೈಲಿನಿಂದ ನೆನ್ನೆ ಸಂಜೆ ಹೊರಬಂದರು.. ಜೈಲಿನಿಂದ ನೇರವಾಗಿ ನಿವಾಸಕ್ಕೆ ಆಗಮಿಸಿದ ದುನಿಯಾ ವಿಜಯ್ ಅವರು ರಾತ್ರಿ ಸುದ್ದಿಗೋಷ್ಠಿ ನಡೆಸಿದರು.

ಕೀರ್ತಿ ನಾನು ಮಾನಸಿಕವಾಗಿ ಮದುವೆಯಾಗಿದ್ದೇವೆ:
ದುನಿಯಾ ವಿಜಯ್​ಗೇ ಕೀರ್ತಿಗೌಡ ಹಾಗೂ ಅವರ ನಡುವಿನ ಮದುವೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು. “ನಾನು ಕೀರ್ತಿಯನ್ನು ಮಾನಸಿಕವಾಗಿ ಮದುವೆಯಾಗಿದ್ದೇವೆ. ಪ್ರೀತಿ ಎಂಬುವುದು ಹೃದಯದಲ್ಲಿ ಹುಟ್ಟುತ್ತೆ. ಅದು ಪ್ರಾಮಾಣಿಕವಾದ ಪ್ರೀತಿ. ನಾವಿಬ್ಬರು ಗಂಡ ಹೆಂಡತಿನೇ. ಪ್ರಪಂಚ ಸಾವಿರ ಹೇಳಬಹುದು. ನಾನು ಮತ್ತು ಕೀರ್ತಿ ಚೆನ್ನಾಗಿಯೇ ಇದ್ದೇವೆ” ಎಂದು ಹೇಳಿದರು.

ನಗರತ್ನಗೆ ನಾನು ಬೇಕು ಆದ್ರೆ ನನ್ನ ತಂದೆತಾಯಿ ಬೇಡ:
ಇನ್ನು ಪತ್ನಿ ನಾಗರತ್ನ ಕುರಿತಾಗಿ ಮಾತನಾಡಿದ ದುನಿಯಾ ವಿಜಯ್ “ನಾಗರತ್ನ ಬಾಯಿ ಬಿಟ್ಟರೆ ಸುಳ್ಳ ಹೇಳ್ತಾಳೆ. ಆಕೆಗೆ ನಾನು ಬೇಕು ಆದರೆ ನನ್ನ ಅಪ್ಪ ಅಮ್ಮ ಬೇಡ. ತಂದೆ ತಾಯಿನಾ ಚೆನ್ನಾಗಿ ನೋಡ್ಕೊಬೇಕು ಅಂತ ಹೇಳಿದ್ದೆ ಆದರೆ ಅದ್ಯಾವುದೂ ನಡೀಲಿಲ್ಲ. ಆದಾದ ನಂತರ ನಾನು, ನಾಗರತ್ನ ಮತ್ತು ಲಾಯರ್​ ಕೂತ್ಕೊಂಡು ಮಾತಾಡಿದ್ದೆವು. ಆಗ “ನಾನು ಮಾತ್ರ ಬೇಕು ನನ್ನ ಅಪ್ಪ ಅಮ್ಮ ಬೇಡ ಅಂದ್ಲು” ಅದಕ್ಕೆ ಅವಳಿಂದ ದೂರ ಬಂದೆ.

“ಆಗ ನಾಗರತ್ನ ಮನೆ ಬೇಕು ಅಂದಳು ಆಗ ಆಕೆ ಹೆಸರಿಗೆ ‘ದುನಿಯಾರುಣ’ ಮನೆಯನ್ನು ಬರೆದುಕೊಟ್ಟೆ, ಜೊತೆಗೆ 3 ಎಕರೆ ತೋಟವನ್ನ ಸಾಮ್ರಾಟ್​ ಹೆಸರಿಗೆ ಮತ್ತು 6 ಎಕರೆ ಜಾಗವನ್ನ ಹೆಣ್ಣು ಮಕ್ಕಳ ಹೆಸರಿಗೆ ಬರೆದುಕೊಟ್ಟೆ, ಊರಲ್ಲಿರುವ 4 ಸೈಟುಗಳನ್ನ​ ಕೂಡ ಆಕೆಗೆ ಬಿಟ್ಟಿದ್ದೀನಿ.. ಅಷ್ಟೇ ಅಲ್ಲದೇ ನನ್ನ ಅಪ್ಪ ಅಮ್ಮಾ ಇಬ್ಬರೂ ನಾವು ಸತ್ತರೇ ನಮ್ಮ ಸಮಾಧಿಗೆ ನಾಗರತ್ನ ಬರಬಾರದು ಅಂತಾ ವಿಲ್​ ಮಾಡಿದ್ದಾರೆ.” ಎಂದು ದುನಿಯಾ ವಿಜಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top