fbpx
ಮನೋರಂಜನೆ

“ನನ್ನ ಗಂಡ ವಿಜಿಗೆ ಮೂವರಲ್ಲ,ಹತ್ತು ಮಕ್ಕಳಿದ್ದರೂ ನಾನು ಮದುವೆಯಾಗುತ್ತಿದ್ದೆ”,ಕೀರ್ತಿಗೌಡ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಕಳೆದು ಒಂದು ವಾರದಿಂದ ಜೈಲಿನಲ್ಲಿಯೇ ಕಾಲ ಕಳೆಯುತ್ತಿರುವ ದುನಿಯಾ ವಿಜಯ್​ಗೆ ಸೆಷನ್ಸ್ ಕೋರ್ಟ್ ಕಡೆಗೂ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಎರಡು ಬಾರಿ ಜಾಮೀನು ಅರ್ಜಿ ನಿರಾಕರಣೆಯಾಗಿರುವ ಹಿನ್ನಲೆ ದುನಿಯಾ ವಿಜಯ್ ಕಂಗಾಲಾಗಿದ್ದರು. ಶನಿವಾರ ದುನಿಯಾ ವಿಜಯ್​ ಅರ್ಜಿ ವಿಚಾರಣೆ ನಡೆಸಿದ 70ನೇ ಸೆಷನ್ಸ್​ ನಾಯಾಲಯದ ನ್ಯಾಯಾಧೀಶರು ಸೋಮವಾರಕ್ಕೆ ಅರ್ಜಿಯನ್ನು ಮುಂದೂಡಿತ್ತು.. ವಿಜಯ್​ ಸೇರಿ ಮಣಿ, ಡ್ರೈವರ್ ಪ್ರಸಾದ್​ ಅವರಿಗೂ ಜಾಮೀನು ಮಂಜೂರಾಗಿದ್ದು 1 ಲಕ್ಷ ರುಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪ್ರಭಾವ ಬೀರಿ ಸಾಕ್ಷಿ ನಾಶ ಪಡಿಸವಂತಿಲ್ಲ. ಅವಶ್ಯವಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎನ್ನುವ ಕೆಲ ಷರತ್ತುಗಳನ್ನು ಹಾಕಲಾಗಿದೆ.

 

ಗಂಡನಿಗೆ ಜಾಮೀನು ಮಂಜೂರಾಗುತ್ತಿದ್ದಂತೆ ವಿಜಯ್ ಅವರ ಎರಡನೇ ಹೆಂಡತಿ ಕೀರ್ತಿ ಹರ್ಷಗೊಂಡಿದ್ದು, “ಅವರಿಗಾಗಿ ನಾನು ಕಾದು ಕುಳಿತಿದ್ದೇನೆ. ಅವರೇ ನನ್ನ ಸರ್ವಸ್ವ” ಎಂದಿದ್ದಾರೆ. ವಿಜಿಗೆ ಜಾಮೀನು ಸಿಗುತ್ತಿದ್ದಂತೆಯೇ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕೀರ್ತಿ “ನನ್ನ ಮತ್ತು ವಿಜಯ್ ಸಂಬಂಧದ ಕುರಿತು ಯಾರು ಏನೇ ಮಾತನಾಡಿದರೂ ನಾನು ತಲೆಕೆಡಿಸಿಕೊಳ್ಳಲ್ಲ. ಮಾತನಾಡುವವರು ಯಾರೂ ಬಂದು ನಮ್ಮ ಜೊತೆ ಸಂಸಾರ ಮಾಡೋದಿಲ್ಲ.”ಎಂದು ಹೇಳಿಕೆ ಕೊಟ್ಟಿದ್ದರು

 

 

 

ಕೀರ್ತಿ ಹೇಳಿಕೆ:

ವಿಜಯ್​ ಜೈಲು ಸೇರುತ್ತಿದ್ದಂತೆ ನಾಗರತ್ನ ಯೋಜನೆ ರೂಪಿಸಿ ನನ್ನನ್ನು ಸಂಕಷ್ಟದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದರು ಎಂದು ಹೇಳಿದ ಕೀರ್ತಿ , ದುಡ್ಡು, ಬಂಗಾರ ಎಲ್ಲಾ ಎತ್ತಿಕೊಂಡು ಮನೆಯಿಂದ ಓಡಿಹೋಗಿದ್ದಾರೆ ಅಂತ ಆರೋಪಿಸಿದ್ದರು. , ನಾನು ದುಡ್ಡು, ಒಡವೆ ತಗೊಂಡು ಓಡಿಹೋಗಿಲ್ಲ. ಕಳ್ಳತನ ಮಾಡುವಷ್ಟು ಬರ್ಬಾದ್ ಆಗಿಲ್ಲ. ನನ್ನ ಗಂಡ ನನಗೆ ಬೇಜಾನ್ ಕೊಟ್ಟಿದ್ದಾರೆ. ನಾನು ನನ್ನ ತಾಯಿ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.,ಈಗ ವಿಜಿ ಜೈಲ್ನಿಂದ ಹೊರ ಬಂದ ಮೇಲೆ ಹೀಗೆ ಮಾತನಾಡಿದ್ದಾರೆ ,ದುನಿಯಾ ವಿಜಯ್ ಏನು ಅಂತ ಗೊತ್ತಿದ್ದು, ನಾನು ಮದುವೆ ಆಗಿದ್ದೇನೆ. ನಾನು ತುಂಬಾ ತ್ಯಾಗ ಮಾಡಿ ಮದುವೆಯಾಗಿದ್ದೇನೆ. ನಾಗರತ್ನ ಅವರಿಗೆ ಗಂಡ ಮಕ್ಕಳು ಬೇಕು ಅಷ್ಟೇ. ಇದರಿಂದ ಅವರು ಜನರಿಂದ ಸಿಂಪತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಪತಿ, ಅತ್ತೆ, ಮಾವ ಎಲ್ಲರು ಅವರ ಬಗ್ಗೆ ಹೇಳಿದ್ದರು. ಆದರೆ ಇಷ್ಟೊಂದು ಸುಳ್ಳು ಹೇಳುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ನಮಗೆ ಮೂರು ವರ್ಷದ ಹಿಂದೆ ಮದುವೆಯಾಗಿದೆ. ನನ್ನ ಪತಿಗೆ ಮೂವರು ಅಲ್ಲ, ಹತ್ತು ಮಕ್ಕಳಿದ್ದರೂ ನಾನು ಮದುವೆಯಾಗುತ್ತಿದ್ದೆ ಎಂದು ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಹೇಳಿದ್ದಾರೆ.ಮೂರು ಮಕ್ಕಳಿರುವವರನ್ನು ಮದುವೆಯಾಗುವುದಕ್ಕೆ ಒಳ್ಳೆಯ ಮನಸ್ಸು ಬೇಕು. ಅವರ ಮಕ್ಕಳಿಗೂ ನಾನು ಪ್ರೀತಿಕೊಟ್ಟು ಸಾಕುತ್ತಿದ್ದೇನೆ. ನನಗೆ ಅವರ ಬಗ್ಗೆ ಗೊತ್ತು. ಈ ಪ್ರಪಂಚ ತಲೆಕೆಳಗಾದರೂ ಸರಿ. ನನಗೆ ನನ್ನ ಗಂಡನೇ ಸರ್ವಸ್ವ. ನನ್ನ ಪತಿ ನೀನು ಬೇಡ ಎಂದು ಹೇಳುವರೆಗೂ ನಾನು ಹೋಗುವುದಿಲ್ಲ ಎಂದು ಕೀರ್ತಿಗೌಡ ಹೇಳಿದ್ದಾರೆ ನಂತರ ಅವರು ಮಗನನ್ನ ನೋಡುವುದಕ್ಕೆ ಬಂದಾಗ ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ಅವರು ನೂರಕ್ಕೆ ನೂರು ಸುಳ್ಳು ಹೇಳುತ್ತಾರೆ. ಅವರೇ ಜಗಳ ಮಾಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅಂತವರ ಜೊತೆ ಇರಲು ಸಾಧ್ಯವಿಲ್ಲ. ಮನೆ ವಿಚಾರವನ್ನು ಬೀದಿಗೆ ತರಲು ನನಗೆ ಇಷ್ಟ ಇಲ್ಲ. ನನ್ನ ಅತ್ತೆ, ಮಾವ ನಾದಿನಿ ಎಲ್ಲರ ಸಪೋರ್ಟ್ ನನಗಿದೆ. ಎಲ್ಲೋ ಪುಟ್ಟ ಸಂಸಾರ ಮಾಡಿಕೊಂಡು ನೆಮ್ಮದಿಯಾಗಿದ್ವಿ ಒಂದು ಕ್ಷಣದಲ್ಲಿ ನಾಗರತ್ನ ಅವರು ಹಾಳು ಮಾಡಿದ್ದಾರೆ. ನನ್ನ ಪತಿ ಜೈಲಿನಿಂದ ಹೊರಬರಲಿ ಅಂತ ಕಾಯುತ್ತಿದ್ದೆ. ನನಗೆ ಅವರನ್ನು ಬಿಟ್ಟು ಬೇರೇನು ಬೇಡ. ಅವರೆ ನನ್ನ ಪ್ರಪಂಚ ಎಂದು ಕೀರ್ತಿ ಗೌಡ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top