fbpx
ಮನೋರಂಜನೆ

“ದುನಿಯಾ ವಿಜಿಗೆ ಕೀರ್ತಿ ಗೌಡ ಐದನೇಯವಳು” ಸತ್ಯ ಬಿಚ್ಚಿಟ್ಟ ಮೊದಲ ಪತ್ನಿ ನಾಗರತ್ನ.

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಕಳೆದು ಒಂದು ವಾರದಿಂದ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದ ದುನಿಯಾ ವಿಜಯ್​ಗೆ ಜೈಲಿನಿಂದ ಜಾಮೀನಿನ ಮೇಲೆ ನೆನ್ನೆ ಸಂಜೆ ಹೊರಬಂದಿದ್ದಾರೆ.. ಅವರು ಹೊರಬರುತ್ತಿದ್ದಂತೆ ಮೊದಲ ಪತ್ನಿ ನಾಗರತ್ನ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಿ ಕೀರ್ತಿಗೌಡನೇ ನನ್ನ ಹೆಂಡತಿ ಮತ್ಯಾರು ಅಲ್ಲ ಎಂದು​ ತಿಳಿಸಿದ್ದರು. ಆದರೆ, ದುನಿಯಾ ವಿಜಿಗೆ ಐದು ಮದುವೆಯಾಗಿದೆ ಕೀರ್ತಿ ಗೌಡ ಐದನೆಯವಳು ಎಂಬ ಹೊಸ ಸತ್ಯವನ್ನು ನಾಗರತ್ನ ಬಿಚ್ಚಿಟ್ಟಿದ್ದಾರೆ.

 

 

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗರತ್ನ ಅವರು “ಕೀರ್ತಿ ಜೊತೆ ವಿಜಯ್​ ಮದುವೆಯಾಗಿರುವುದು ನನಗೆ ಗೊತ್ತೇ ಇಲ್ಲ. ವಿಜಯ್​ ಕೀರ್ತಿ ಗೌಡಳನ್ನ ಮದುವೆಯೇ ಆಗಿಲ್ಲ. ದುನಿಯಾ ವಿಜಯ್​ಗೆ ಈ ರೀತಿಯ ಸಂಬಂಧಗಳು ಹೊಸದಲ್ಲ. ನನ್ನ ಮದುವೆಗೆ ಮುಂಚೆಯೇ ಅವರಿಗೆ ಇನ್ನೊಂದು ಮದುವೆಯಾಗಿತ್ತು, ಆ ವಿಷ್ಯ ನನಗೆ ಗೊತ್ತಿರಲಿಲ್ಲ.. ಮನೆಗೆ ಯಾವ ಹುಡುಗಿಯನ್ನೇ ಕರೆದುಕೊಂಡು ಬಂದರೂ ನನ್ನ ಅತ್ತೆ-ಮಾವ ಮಗನಿಗೆ ಬುದ್ಧಿ ಹೇಳದೆ ಅವರ ಪರವೇ ವಹಿಸಿಕೊಂಡು ಮಾತನಾಡುತ್ತಿದ್ದರು. ‘ಜಯಮ್ಮನ ಮಗ’ ಚಿತ್ರದ ನಟಿ ಭಾರತಿ ಕಾರಣದಿಂದಲೇ ನಾನು ದೂರವಾಗಿದ್ದು. ಶುಭ ಪೂಂಜಾ ಕೂಡ ಸ್ವಲ್ಪ ದಿನ ವಿಜಯ್ ಜೊತೆ ಓಡಾಡಿದ್ದರು. ಹಾಗೆಯೆ ಕೀರ್ತಿ ಕೂಡ ಸ್ವಲ್ಪ ದಿನ ಇದ್ದು ಹೋಗ್ತಾಳೆ”

“ಫೈಟ್​ ಮಾಡುವುದಾದರೆ ಹೆಂಡತಿ ಜತೆ ಮಾಡಲಿ, ಅದನ್ನು ಬಿಟ್ಟು ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಎಂದು ಹೇಳಿ ಅನುಕಂಪ ಗಿಟ್ಟಿಸುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ಅವರಿಗೆ ವಿಚ್ಛೇದನ ನೀಡುವುದಿಲ್ಲ. ನಾನು ಅವರೊಂದಿಗೆ ಜೀವನ ಮಾಡಲು ಬಂದವಳು. ಕೀರ್ತಿ ದುಡ್ಡಿಗೆ ಬಂದು ಸಂಸಾರ ಮಾಡುತ್ತಿದ್ದಾಳೆ ಎಂಬುದು ಪ್ರಪಂಚಕ್ಕೆ ಗೊತ್ತಿದೆ. ಈ ಬಗ್ಗೆ ವಿಜಯ್​ಗೆ ತಿಳಿಯಬೇಕಿದೆ ಅಷ್ಟೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top