ಸಮಾಚಾರ

ಅಪ್ಪ ದುನಿಯಾ ವಿಜಿ ಜೊತೆ ಜಗಳವಾಡಿ ಗುಡ್ ಬೈ ಹೇಳಿ ಅಮ್ಮನ ಮಡಿಲು ಸೇರಿದ ವಿಜಿ ಮೊದಲ ಪುತ್ರಿ ಮೋನಿಕಾ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಕಳೆದು ಒಂದು ವಾರದಿಂದ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದ ದುನಿಯಾ ವಿಜಯ್​ಗೆ ಜೈಲಿನಿಂದ ನೆನ್ನೆ ಸಂಜೆ ಹೊರಬಂದರು.. ಜೈಲಿನಿಂದ ನೇರವಾಗಿ ನಿವಾಸಕ್ಕೆ ಆಗಮಿಸಿದ ದುನಿಯಾ ವಿಜಯ್ ಅವರು ರಾತ್ರಿ ಸುದ್ದಿಗೋಷ್ಠಿ ನಡೆಸಿ ಮೊದಲ ಪತ್ನಿ ನಾಗರತ್ನ ರವರ ಆರೋಪ ಮಾಡಿ ಅವರ ಹಾಗೂ ಕೀರ್ತಿ ಯವರ ಮದುವೆಯ ಬಗ್ಗೆ ಮಾತನಾಡಿದ್ದರು.

 

ನಾಗರತ್ನ ಸುಳ್ಳು ಬುರುಕಿ:
ಪತ್ನಿ ನಾಗರತ್ನ ಕುರಿತಾಗಿ ಮಾತನಾಡಿದ ದುನಿಯಾ ವಿಜಯ್ “ನಾಗರತ್ನ ಸುಳ್ಳುಬುರಿಕಿ, ಬಾಯಿ ಬಿಟ್ಟರೆ ಸುಳ್ಳು ಹೇಳ್ತಾಳೆ. ಆಕೆಗೆ ನಾನು ಬೇಕು ಆದರೆ ನನ್ನ ಅಪ್ಪ ಅಮ್ಮ ಬೇಡ. ತಂದೆ ತಾಯಿನಾ ಚೆನ್ನಾಗಿ ನೋಡ್ಕೊಬೇಕು ಅಂತ ಹೇಳಿದ್ದೆ ಆದರೆ ಅದ್ಯಾವುದೂ ನಡೀಲಿಲ್ಲ. ಮೀಡಿಯಾ ಮುಂದೆ ಬಂದು ನನ್ನನ್ನ ಬಾಯಿಗೆ ಬಂದ ಹಾಗೆ ಬೈದು ಅವಮಾನ ಮಾಡಿದ್ಲು, ಆಮೇಲೆ ಇಬ್ಬರೂ ರಾಜಿ ಆಗಿದ್ದೆವು ಆದಾದ ನಂತರ ಮತ್ತೆ ಜಗಳ ಬಂತು ಆಗ ನಾನು, ನಾಗರತ್ನ ಮತ್ತು ಲಾಯರ್​ ಕೂತ್ಕೊಂಡು ಮಾತಾಡಿದ್ದೆವು. ಆಗ “ನಾನು ಮಾತ್ರ ಬೇಕು ನನ್ನ ಅಪ್ಪ ಅಮ್ಮ ಬೇಡ ಅಂದ್ಲು” ಅದಕ್ಕೆ ಅವಳಿಂದ ದೂರ ಬಂದೆ.

“ಆಗ ನಾಗರತ್ನ ಮನೆ ಬೇಕು ಅಂದಳು ಆಗ ಆಕೆ ಹೆಸರಿಗೆ ‘ದುನಿಯಾರುಣ’ ಮನೆಯನ್ನು ಬರೆದುಕೊಟ್ಟೆ, ಜೊತೆಗೆ 3 ಎಕರೆ ತೋಟವನ್ನ ಸಾಮ್ರಾಟ್​ ಹೆಸರಿಗೆ ಮತ್ತು 6 ಎಕರೆ ಜಾಗವನ್ನ ಹೆಣ್ಣು ಮಕ್ಕಳ ಹೆಸರಿಗೆ ಬರೆದುಕೊಟ್ಟೆ, ಊರಲ್ಲಿರುವ 4 ಸೈಟುಗಳನ್ನ​ ಕೂಡ ಆಕೆಗೆ ಬಿಟ್ಟಿದ್ದೀನಿ.. ಅಷ್ಟೇ ಅಲ್ಲದೇ ನನ್ನ ಅಪ್ಪ ಅಮ್ಮಾ ಇಬ್ಬರೂ ನಾವು ಸತ್ತರೇ ನಮ್ಮ ಸಮಾಧಿಗೆ ನಾಗರತ್ನ ಬರಬಾರದು ಅಂತಾ ವಿಲ್​ ಮಾಡಿದ್ದಾರೆ.” ಎಂದು ದುನಿಯಾ ವಿಜಿ ಹೇಳಿದರು.

 

 

 

ಕೀರ್ತಿ ನಾನು ಮಾನಸಿಕವಾಗಿ ಮದುವೆಯಾಗಿದ್ದೇವೆ:
ದುನಿಯಾ ವಿಜಯ್​ಗೇ ಕೀರ್ತಿಗೌಡ ಹಾಗೂ ಅವರ ನಡುವಿನ ಮದುವೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು. “ನಾನು ಕೀರ್ತಿಯನ್ನು ಮಾನಸಿಕವಾಗಿ ಮದುವೆಯಾಗಿದ್ದೇವೆ. ಪ್ರೀತಿ ಎಂಬುವುದು ಹೃದಯದಲ್ಲಿ ಹುಟ್ಟುತ್ತೆ. ಅದು ಪ್ರಾಮಾಣಿಕವಾದ ಪ್ರೀತಿ. ನಾವಿಬ್ಬರು ಗಂಡ ಹೆಂಡತಿನೇ. ಪ್ರಪಂಚ ಸಾವಿರ ಹೇಳಬಹುದು. ನಾನು ಮತ್ತು ಕೀರ್ತಿ ಚೆನ್ನಾಗಿಯೇ ಇದ್ದೇವೆ” ಎಂದು ಹೇಳಿದರು.

ತಂದೆ ದುನಿಯಾ ವಿಜಿಯನ್ನು ತೊರೆದು ಅಮ್ಮನ ಮಡಿಲು ಸೇರಿದ ಮೋನಿಕಾ.
ಈ ಬೆನ್ನಲೇ ದುನಿಯಾ ವಿಜಿಯ ಮೊದಲ ಪತ್ನಿಯ ಪುತ್ರಿ ಸದ್ಯ ತಂದೆಯ ಮನೆಯಿಂದ ಅಮ್ಮ ನಾಗರತ್ನ ಮನೆಗೆ ತೆರಳಿದ್ದಾರೆ. ಇಂದು ಬೆಳಗ್ಗೆ ದುನಿಯಾ ವಿಜಯ್‍ರ ಪುತ್ರಿ ಮೋನಿಕಾ ಬ್ಯಾಗ್ ಸಮೇತ ತಂದೆ ಮನೆಯಿಂದ ಹೊರ ಬಂದಿದ್ದು, ಅಮ್ಮ ಮನೆಗೆ ತೆರಳಿದ್ದಾರೆ.ಕಳೆದ 2 ವರ್ಷಗಳಿಂದ ಕೀರ್ತಿ ಹಾಗೂ ದುನಿಯಾ ವಿಜಯ್ ಅವರೊಂದಿಗೆ ವಾಸವಿದ್ದ ಮಗಳು ಸದ್ಯ ಅಮ್ಮನ ಮನೆಗೆ ತೆರಳಿದ್ದಾರೆ. ಇನ್ನುಳಿದಂತೆ ಕಳೆದ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಜಯ್, 2ನೇ ಪತ್ನಿ ಹಾಗೂ ನನ್ನ ಮಕ್ಕಳಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೇ ನನ್ನ ಮಗಳಿಗೆ 18 ವರ್ಷ ಪೂರ್ತಿಯಾಗಿದೆ, ಮತ್ತೊಬ್ಬ ಮಗಳಿಗೆ 18 ಪೂರ್ತಿಯಾಗಬೇಕಿದೆ. ಅವರ ಇಚ್ಛೆಯಂತೆ ಸ್ವತಂತ್ರ್ಯವಾಗಿ ಜೀವಿಸಲು ಅವರು ಅರ್ಹರು ಎಂದು ಹೇಳಿದ್ದರು.
ನನ್ನ ಮೊದಲ ಪತ್ನಿಗೆ ಪತಿಯಾಗಿ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನ ನೀಡಿದ್ದೇನೆ. ಇಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನನ್ನ ತಂದೆ ತಾಯಿಗೆ ಅನ್ಯಾಯ ಮಾಡಿದ್ದರಿಂದ ನಾನು ಆಕೆಯ ಮೇಲೆ ಆರೋಪ ಮಾಡಿದ್ದೆ. ಆದರೆ ಆ ವೇಳೆಯೂ ನನ್ನ ವಿರುದ್ಧ ಕೆಟ್ಟ ಪ್ರಚಾರ ಮಾಡಲಾಗಿತ್ತು. ನಾಗರತ್ನ ಹಾಗೂ ನನ್ನ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ. ನನ್ನ ಮೊದಲ ಪತ್ನಿಗೆ ಮನೆ ಕೂಡ ನೀಡಿದ್ದು, ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಈ ಕುರಿತು ವಕೀಲರ ಮೂಲಕವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದರು.

ಜೈಲಿನಿಂದ ಬೇಲ್ ಪಡೆದು ಬಿಡುಗಡೆಯಾಗಿ ನಗರದ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ ತಂದೆ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು ಎಂಬ ವಿಚಾರವೂ ಸುದ್ದಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top